ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರತಿ ನಿತ್ಯ ಪ್ರಸಾರ ಆಗುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿ ಸಾಕಷ್ಟು ಮಹಿಳಾಮಣಿಯರ ಮನಸ್ಸು ಗೆದ್ದಿರುವ ಧಾರವಾಹಿಗಳ ಟಾಪ್ ಲಿಸ್ಟ್ ನಲ್ಲಿದೆ. ಇದರಲ್ಲಿ ಲಕ್ಷ್ಮಿ ಬಾರಮ್ಮ ಗೊಂಬೆ ಅಲಿಯಾಸ್ ನೇಹಾ ಗೌಡ ಈಗ ಕಿಡ್ನಾಪ್ ಆಗಿದ್ದಾರೆ. ಆದರೆ ಕಿಡ್ನಾಪ್ ಹಿಂದಿನ ಅಸಲಿ ಕಥೆ ಬೇರೆನೇ ಇದೆ.
ಹೌದು. ಕೆಲ ದಿನಗಳ ಹಿಂದೆ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಗೊಂಬೆ ಪಾತ್ರ ನಿರ್ವಹಿಸುತ್ತಿದ್ದ ನಟಿ ನೇಹಾ ಗೌಡ ಕಿಡ್ನಾಪ್ ಆಗಿದ್ದರು. ಧಾರಾವಾಹಿ ಪ್ರಿಯರಿಗೆ ಗೊಂಬೆಯನ್ನು ಕಿಡ್ನಾಪ್ ಮಾಡಿದವರು ಯಾರು ಎನ್ನುವುದೇ ಆತಂಕ? ಯಾರು ಮಾಡಿರುತ್ತಾರೆ? ಅಥವಾ ಹೊಸ ವಿಲನ್ ಎಂಟ್ರಿ ಆಗುತ್ತಾ ಅಂತೆಲ್ಲಾ ಪ್ರಶ್ನೆ ಹಾಕಿಕೊಂಡು ಕುತುಹಲದಿಂದ ಕಾಯುತ್ತಿದ್ದಾರೆ. ಆದರೆ ಧಾರಾವಾಹಿಯಲ್ಲಿ ಮಾತ್ರ ಗೊಂಬೆ ಇನ್ನು ಸಿಕ್ಕಿಲ್ಲ. ವಾರಗಟ್ಟಲೆಯಿಂದ ಗೊಂಬೆಗಾಗಿ ಹುಡುಕಾಟ ನಡೆಯುತ್ತಲೇ ಇದೆ.
ಗೊಂಬೆ ಕಿಡ್ನಪ್ ನ ಅಸಲಿ ಕಥೆಯೇ ಬೇರೆ ಇದೆ. ಅಂದರೆ ಕಳೆದ ತಿಂಗಳಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗೊಂಬೆ ಕೆಲಸದಿಂದ ಸಣ್ಣದೊಂದು ಬ್ರೇಕ್ ತೆಗೆದುಕೊಂಡಿದ್ದಾರೆ. ಹಾಗಂತ ಧಾರಾವಾಹಿಯಲ್ಲಿ ಅಭಿನಯಿಸುವುದನ್ನು ಬಿಟ್ಟಿಲ್ಲ. ತನ್ನ ಪತಿ ಚಂದನ್ ಜೊತೆ ಹನಿಮೂನ್ ಹೋಗಿದ್ದಾರೆ. ಇದನ್ನು ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಲಕ್ಷೀ ಬಾರಮ್ಮ ಖ್ಯಾತಿಯ ಗೊಂಬೆ
ಹಾಂಕಾಂಗ್ ನ ಪ್ರವಾಸಿ ಸ್ಥಳಗಳಿಗೆ ನೇಹಾ ಗೌಡ ಹಾಗೂ ಚಂದನ್ ಭೇಟಿ ನೀಡಿದ್ದು, ನವದಂಪತಿ ಜೊತೆಯಲ್ಲಿ ತೆಗೆಸಿಕೊಂಡು ಫೋಟೋಗಳನ್ನ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ.
ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದ ನೇಹಾ ಅವರ ಮದುವೆ ಕಾರ್ಯಕ್ರಮ ಫೆಬ್ರವರಿ 18 ರಂದು ನಡೆದಿತ್ತು. ನಟಿ ಸೋನುಗೌಡ ಅವರ ಸಹೋದರಿ ಆಗಿರುವ ನೇಹಾಗೌಡ ತಮ್ಮ ಬಾಲ್ಯದ ಗೆಳೆಯ ಚಂದನ್ ಅವರ ವಿವಾಹ ಮೈಸೂರು ರಸ್ತೆಯಲ್ಲಿರುವ ಸಾಯಿ ಪ್ಯಾಲೆಸ್ ನಲ್ಲಿ ನಡೆದಿತ್ತು.