ಬೆಂಗಳೂರು: ಸ್ಯಾಂಡಲ್‍ವುಡ್ ಮತ್ತು ಕಿರುತೆರೆಯಲ್ಲಿ ಮಿಂಚುತ್ತಿರುವ ಸಹೋದರಿಯರಾದ ನೇಹಾ ಗೌಡ ಮತ್ತು ಸೋನು ಗೌಡ ಅವರು ವಾರಣಾಸಿ ಟ್ರಿಪ್ ಮಾಡಿ ಬಂದಿದ್ದಾರೆ. ಅಲ್ಲಿ ಅವರು ಕಳೆದಿರುವ ಸುಂದರ ಕ್ಷಣಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಮೆಲುಕು ಹಾಕಿದ್ದಾರೆ.
ವಾರಣಾಸಿಗೆ ಹೋಗುವ ಯೋಜನೆ ಮಾಡುತ್ತಲೇ ಇದ್ದೆವು. ಆದರೆ ಸಮಯ ಕೂಡಿ ಬರುತ್ತಿರಲಿಲ್ಲ. ಒಂದು ದಿನ ಇದ್ದಕ್ಕಿದ್ದಂತೆ ಟಿಕೆಟ್ ಬುಕ್ ಮಾಡಿ ಹೊರಟೆವು. ವಾರಣಾಸಿಯ ಘಾಟ್‍ಗಳ ಸೌಂದರ್ಯ ಇದಾಗಿದೆ. 84 ಘಾಟ್‍ಗಳು ಮತ್ತು ಸುಮಾರು 2000ಕ್ಕೂ ಹೆಚ್ಚು ದೇವಾಲಯಗಳಿವೆ ಎಂದು ಬರೆದುಕೊಂಡು ಸೇನಾ, ಸೋನು ಇಬ್ಬರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪ್ರವಾಸ ವೀಡಿಯೋ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
View this post on Instagram
ನೇಹಾ ಗೌಡ ಮತ್ತು ಸೋನು ಗೌಡ ಇಬ್ಬರು ಸಹ ವಾರಣಾಸಿಗೆ ಟ್ರಿಪ್ ಹೋಗಿ ಬಂದಿದ್ದಾರೆ. ಈ ಸುಂದರ ಕ್ಷಣಗಳ ಫೋಟೋಗಳನ್ನು ನೇಹಾ ಗೌಡ, ಸೋನು ಗೌಡ ಅವರು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಅಕ್ಕ-ತಂಗಿಯರ ವಾರಣಾಸಿ ಟ್ರಿಪ್ ಫೋಟೋ ನೋಡಿದ ಅಭಿಮಾನಿಗಳು ಸಹೋದರಿಯರ ಬಾಂಧವ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ: ರೆಮೋ ಡಿಸೋಜಾ ಸೋದರ ಮಾವ ಸಾವು – ಆತ್ಮಹತ್ಯೆ ಶಂಕೆ
View this post on Instagram
ನೇಹಾ ಗೌಡ ಖಾಸಗಿ ವಾಹಿನಿಯಲ್ಲಿ ಪ್ರಸಾವಾಗುತ್ತಿದ್ದ ಜನಪ್ರಿಯ ಧಾರಾವಾಹಿಯಲ್ಲಿ ನಟಿಸುವ ಮೂಲಕವಾಗಿ ಮನೆ ಮಾತಾಗಿದ್ದಾರೆ. ಸೋನು ಗೌಡ ಅವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಸೋನು ಅವರು ಅನೇಕ ಕನ್ನಡ ಸಿನಿಮಾಗಳಲ್ಲಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾದಲ್ಲಿ ಲಾಯರ್ ಪಾತ್ರದಲ್ಲಿ ನಟಿಸಿದ್ದರು.