ಸದ್ದು ಗದ್ದಲವಿಲ್ಲದೇ ಗಪ್ ಚುಪ್ ಮಾಜಿ ಕ್ರಿಕೆಟಿಗ ಪುತ್ರನನ್ನ ಮದ್ವೆಯಾದ ನೇಹಾ ಧುಪಿಯಾ

Public TV
1 Min Read
neha dhupia

ನವದೆಹಲಿ: ಬಾಲಿವುಡ್‍ನ ರೌಡಿ ನಟಿ ಅಂತಾನೇ ಕರೆಸಿಕೊಳ್ಳುವ ನೇಹಾ ಧುಪಿಯಾ ಖಾಸಗಿಯಾಗಿ ಮದುವೆ ಆಗುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ಬಹುದಿನಗಳ ಗೆಳೆಯ ಅಂಗದ್ ಬೇಡಿ ಜೊತೆಗೆ ನೇಹಾ ಸಾಂಸರಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಮಾಜಿ ಕ್ರಿಕೆಟಿಗ ಬಿಶಾನ್ ಬೇಡಿ ಪುತ್ರ ಹಾಗು ಬಾಲಿವುಡ್ ನಟ ಅಂಗದ್ ಬೇಡಿ ಮತ್ತು ನೇಹಾ ನಡುವೆ ಪ್ರೇಮವಿದೆ ಎಂಬ ಸುದ್ದಿಯೊಂದು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿತ್ತು. ಆದ್ರೆ ಇದೂವರೆಗೂ ಇಬ್ಬರು ತಮ್ಮಿಬ್ಬರ ಪ್ರೀತಿಯನ್ನ ಬಹಿರಂಗವಾಗಿ ಎಲ್ಲಿಯೂ ಹೇಳಿಕೊಂಡಿರಲಿಲ್ಲ.

ಮದುವೆ ಬಳಿಕ ನೇಹಾ ತಮ್ಮ ಟ್ವಟ್ಟರ್ ಮತ್ತು ಇನ್ಸ್ ಸ್ಟಾಗ್ರಾಂನಲ್ಲಿ ಫೋಟೋ ಹಾಕಿಕೊಂಡು, ಇದು ನನ್ನ ಜೀವನದ ಉತ್ತಮ ನಿರ್ಣಯ. ಇಂದು ನಾನು ನನ್ನ ಬೆಸ್ಟ್ ಫ್ರೆಂಡ್ ಜೊತೆ ಮದುವೆ ಆಗಿದ್ದೇನೆ. ಇವರೇ ನನ್ನ ಪತಿ ಆನಂದ್ ಬೇಡಿ ಅಂತಾ ಬರೆದುಕೊಂಡಿದ್ದಾರೆ.

ನವದೆಹಲಿಯಲ್ಲಿ ತುಂಬಾ ಸರಳವಾಗಿ ಪೋಷಕರು ಮತ್ತು ಆಪ್ತ ಬಂಧುಗಳು ಸಮ್ಮುಖದಲ್ಲಿ ಮದುವೆ ನಡೆದಿದೆ. ಪಿಂಕ್ ಲೆಹಂಗಾದಲ್ಲಿ ನೇಹಾ ಕಂಗೊಳಿಸುತ್ತಿದ್ದರೆ, ಅಂಗದ್ ಶ್ವೇತ ವರ್ಣದ ಖುರ್ತಾ ಜೊತೆಗೆ ಪಿಂಕ್ ಪೇಟಾದಲ್ಲಿ ಮಿಂಚುತ್ತಿದ್ದರು.

ಅಂಗದ್ ಬೇಡಿ ಹಿರಿತೆರೆ ಮತ್ತು ಕಿರುತೆರೆ ಎರೆಡರಲ್ಲೂ ಮಿಂಚುತ್ತಿದ್ದಾರೆ. ಕಯಾ ತರಣ್, ಫಾಲ್ತು, ಉಂಗ್ಲಿ, ಪಿಂಕ್, ಡಿಯರ್ ಜಿಂದಗಿ, ಟೈಗರ್ ಜಿಂದಾ ಹೈ ಸಿನಿಮಾಗಳಲ್ಲಿ ಆನಂದ್ ನಟಿಸಿದ್ದಾರೆ. ಇನ್ನೂ ಖಾಸಗಿ ಚಾನೆಲ್‍ನ ರಿಯಾಲಿಟಿ ಶೋಗಳಿಗೆ ನಿರೂಪಕರಾಗಿಯೂ ಗುರುತಿಸಿಕೊಂಡಿದ್ದಾರೆ.

ನೇಹಾ ಸಹ ಹಿರಿತೆರೆ ಮತ್ತು ಕಿರುತೆರೆಗಳಲ್ಲಿ ಗುರುತಿಸಿಕೊಂಡಿದ್ದಾರೆ. 2004ರಲ್ಲಿ ತೆರೆಕಂಡ ಖಯಾಮತ್: ಸಿಟಿ ಅಂಡರ್ ಥ್ರೀಟ್ ಸಿನಿಮಾ ಮೂಲಕ ಬಾಲಿವುಡ್‍ಗೆ ಪಾದಾರ್ಪನೆ ಮಾಡಿದ್ರು. ಜೂಲಿ, ಚುಪ್ ಚುಪ್ ಕೇ, ಸಿಂಗ್ ಇಸ್ ಕಿಂಗ್, ಕ್ಯಾ ಕೂಲ್ ಹೈ ಹಮ್, ತುಮಾರಿ ಸುಲು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತ ಕಿರುತೆರೆಯ ಹಲವು ರಿಯಾಲಿಟಿ ಶೋಗಳಿಗೆ ತೀರ್ಪುಗಾರರಾಗಿ, ನಿರೂಪಕರಾಗಿ ಮತ್ತು ಸ್ಪರ್ಧೆಯ ಅಭ್ಯರ್ಥಿಗಳಿಗೆ ಲೀಡರ್ ಆಗಿ ಕಾಣಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *