ತುಮಕೂರು: ಜಿಲ್ಲೆಯ ಬಿಜೆಪಿಯಲ್ಲಿ ಬದಲಾವಣೆಯ ಗಾಳಿ ಬೀಸುವ ಮುನ್ಸೂಚನೆ ಸಿಕ್ಕಿದೆ. ಬಿಜೆಪಿಯ ರಾಜಕೀಯ ಬದ್ಧ ವೈರಿಗಳು ಎಂದೇ ಬಿಂಬಿತ್ತರಾಗಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಹಾಗೂ ಮಾಜಿ ಸಂಸದ ಜಿ.ಎಸ್.ಬಸವರಾಜು ಒಂದಾಗಿದ್ದಾರಾ ಅನ್ನುವ ತೀವ್ರ ಚರ್ಚ ಶುರುವಾಗಿದೆ.
ವೀರಶೈವ ಸಮಾಜದ ಮುಖಂಡರು ಇಬ್ಬರ ಸಮಾಗಮವನ್ನ ಮಾಡಿಸಿದ್ದಾರೆ ಎನ್ನಲಾಗುತ್ತಿದೆ. ವೀರಶೈವ ಸಮಾಜದ ಅಧ್ಯಕ್ಷ ಶೇಖರ್ ,ಚಂದ್ರಮೌಳಿ ನೇತೃತ್ವದಲ್ಲಿ ಶುಕ್ರವಾರ ನಡೆದ ಸಂಧಾನ ಸಭೆ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ.
Advertisement
ವೀರಶೈವ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಂಧಾನ ಮಾಡಿಸಿ, ಪರಸ್ಪರ ಹಾರ ಬದಲಾಯಿಸಿಕೊಳ್ಳುವ ಮೂಲಕ ರಾಜಿ ಮಾಡಿಸಿದ್ದಾರೆ ಎನ್ನಲಾಗಿದೆ. ಆದರೆ ಈ ರೀತಿ ಸಂಧಾನ ಈ ಹಿಂದೆಯೂ ಅನೇಕ ಬಾರಿ ನಡೆದಿದ್ದು, ಈ ದೋಸ್ತಿಯನ್ನ ಉಭಯ ನಾಯಕರು ಮುಂದುವರೆಸಿಕೊಳ್ಳತ್ತಾರಾ ಅನ್ನೋದು ಸದ್ಯದ ಪ್ರಶ್ನೆಯಾಗಿದೆ.