ಹಾವೇರಿ: ಹೆಸ್ಕಾಂ (HESCOM) ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜಿಲ್ಲೆಯ ಹಲವು ರೈತರ ಜಮೀನಿನಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳು, ಟ್ರಾನ್ಸ್‌ಫಾರ್ಮರ್‌ಗಳು ಕೈಗೆಟಕುವಂತಿವೆ. ಟ್ರಾನ್ಸ್‌ಫಾರ್ಮರ್‌ಗಳಂತೂ ಬಾಗಿ ನೆಲಕ್ಕೆ ಬೀಳುವಂತಿವೆ.
ಶಿರಬಡಗಿ ಗ್ರಾಮದ ರೈತ ಮುತ್ತನಗೌಡ ಮತ್ತು ಶಿವನಗೌಡ ಎಂಬವರ ಜಮೀನಿನಲ್ಲಿ ಬಾಗಿ ನಿಂತಿರುವ ಟ್ರಾನ್ಸ್‌ಫಾರ್ಮರ್ ಮತ್ತು ಜೋತು ಬಿದ್ದಿರುವ ವಿದ್ಯುತ್ ತಂತಿಗಳು ಬೆಳೆಗಳಿಗೆ ತಗುಲಿ ಬೆಳೆಗಳು ಸುಟ್ಟು ಹಾಳಾಗಲಿವೆ. ಅಷ್ಟೇ ಅಲ್ಲದೇ ಜಮೀನಿನಲ್ಲಿ ಕೃಷಿ ಕೆಲಸ ಮಾಡುವ ರೈತರು ಜೋತು ಬಿದ್ದ ವಿದ್ಯುತ್ ತಂತಿಗಳು ಮತ್ತು ಬಾಗಿದ ಟ್ರಾನ್ಸ್‌ಫಾರ್ಮರ್‌ಗಳಿಂದ ಯಾವಾಗ ಏನಾಗುತ್ತದೆಯೋ ಎಂಬ ಜೀವ ಭಯದಲ್ಲಿ ಕಾಲ ಕಳೆಯುತ್ತಿದ್ದಾರೆ. ಇದನ್ನೂ ಓದಿ: ಬಾಂಗ್ಲಾದೇಶಿ ಪ್ರಜೆಗಳ ಅಕ್ರಮ ವಲಸೆ ದಂಧೆ ಭೇದಿಸಿದ ಪೊಲೀಸರು – 11 ಮಂದಿ ಅರೆಸ್ಟ್
ಗ್ರಾಮದ ರೈತರು ಮನವಿಗಳ ಮೇಲೆ ಮನವಿಗಳನ್ನು ಸಲ್ಲಿಸಿ ಹೆಸ್ಕಾಂ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಗಮನಕ್ಕೆ ತಂದಿದ್ದಾರೆ. ಆದರೂ ಯಾವುದೇ ಪ್ರಯೋಜನ ಆಗಿಲ್ಲ. ಹೀಗಾಗಿ ಅವಘಡಗಳು ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಉಡುಪಿ| ದೈವದ ಕಾರಣಿಕ – 28 ವರ್ಷಗಳ ಬಳಿಕ ಮನೆಗೆ ಮರಳಿ ಬಂದ ಮಗ