ವೈದ್ಯರ ನಿರ್ಲಕ್ಷ್ಯಕ್ಕೆ ಹೆರಿಗೆ ವೇಳೆ ತುಂಬು ಗರ್ಭಿಣಿ ಸಾವು

Advertisements

ಚಿಕ್ಕಮಗಳೂರು: ವೈದ್ಯರ ನಿರ್ಲಕ್ಷ್ಯಕ್ಕೆ ಹೆರಿಗೆ ವೇಳೆ ತುಂಬು ಗರ್ಭಿಣಿ ಸಾವನ್ನಪ್ಪಿರುವ ಘಟನೆ ಎನ್.ಆರ್.ಪುರ ತಾಲೂಕಿನಲ್ಲಿ ನಡೆದಿದೆ.

Advertisements

ಬಾಳೆಹೊನ್ನೂರು ನಿವಾಸಿ ಶ್ವೇತಾ(27) ಮೃತ ದುರ್ದೈವಿ. ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಆಸ್ಪತ್ರೆಯಲ್ಲಿ ವೈದ್ಯ ಎಲ್ಡೋಸ್ ನಿರ್ಲಕ್ಷ್ಯದಿಂದ ಗರ್ಭಿಣಿ ಶ್ವೇತಾ ಮತ್ತು ಆಕೆಯ ಹೊಟ್ಟೆಯಲ್ಲಿದ್ದ ಹಸುಗೂಸು ಅಸುನೀಗಿದೆ. ಇದನ್ನೂ ಓದಿ: 8 ಕೋಟಿಗೂ ಹೆಚ್ಚು ಮೌಲ್ಯದ ಅಕ್ರಮ ಆಸ್ತಿ- ಅಧಿಕಾರಿ ವಿರುದ್ಧ ಪ್ರಕರಣ ದಾಖಲು

Advertisements

ಎಲ್ಡೋಸ್ ಈ ಹಿಂದೆ ಎನ್.ಆರ್.ಪುರ, ಶೃಂಗೇರಿಯಲ್ಲಿ ಅಮಾನತ್ತಾಗಿದ್ದು, ಪೋಷಕರು ಗರ್ಭಿಣಿಯನ್ನ ಚಿಕ್ಕಮಗಳೂರಿಗೆ ಕರೆದುಕೊಂಡು ಹೋಗಲು ಮುಂದಾಗಿದ್ದರು. ಆದರೆ ಎಲ್ಡೋಸ್ ಅವರು ನಾನೇ ಹೆರಿಗೆ ಮಾಡಿಸುತ್ತೇನೆಂದು ಮುಂದಾಗಿದ್ದಾರೆ. ಆದರೆ ಶ್ವೇತಾ ಮತ್ತು ಮಗು ಸಾವನ್ನಪ್ಪಿದ್ದು, ಇದಕ್ಕೆ ವೈದ್ಯರೇ ಕಾರಣ ಎಂದು ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.

Advertisements

ಈ ಪರಿಣಾಮ ವೈದ್ಯರ ವಿರುದ್ಧ ಆಸ್ಪತ್ರೆ ಮುಂಭಾಗ ಸ್ಥಳಿಯರು ಪ್ರತಿಭಟನೆ ಮಾಡುತ್ತಿದ್ದು, ಆಸ್ಪತ್ರೆಗೆ ಮುತ್ತಿಗೆ ಹಾಕಲು ಯತ್ನಿಸಲಾಗುತ್ತಿದೆ. ಈ ವೇಳೆ ಪ್ರತಿಭಟನೆಯನ್ನು ನಿಲ್ಲಿಸಲು ಬಂದ ಪೊಲೀಸರ ಜೊತೆ ಪ್ರತಿಭಟನಾಕಾರರು ಮಾತಿನ ಚಕಮಕಿ ನಡೆಸಿದ್ದಾರೆ.

Advertisements
Exit mobile version