ಹಾವೇರಿ: ತಾಲೂಕಿನ ನೆಗಳೂರ ಗ್ರಾಮದ ಕೋಡಿ ದುರ್ಗಾದೇವಿ ಜಾತ್ರೆಗೆ ಮಂಗಳವಾರ ಸಂಜೆ ಅದ್ಧೂರಿ ಚಾಲನೆ ದೊರಕಿತು. ಈ ಬಾರಿ ಜಾತ್ರೆಯಲ್ಲಿ ‘ಹೌದು ಹುಲಿಯಾ’ ಡೈಲಾಗ್ ಹೆಚ್ಚು ಸದ್ದು ಮಾಡುತ್ತಿದೆ.
ಗ್ರಾಮದ ಗ್ರಾಮದೇವತಾ ದೇವಸ್ಥಾನದಿಂದ ಸರ್ವಾಲಂಕಾರ ಭೂಷಿತಳಾದ ದೇವಿಯನ್ನು ಶೃಂಗಾರಗೊಂಡ ಬಂಡಿಯಲ್ಲಿ ಪ್ರತಿಷ್ಠಾಪಿಸಲಾಯ್ತು. ಸಕಲ ವಾದ್ಯ ಮೇಳಗಳೊಂದಿಗೆಗ್ರಾಮದ ಪ್ರಮುಖ ಬೀದಿಗಳಲ್ಲಿ ಭಕ್ತರು ಜಯಘೋಷಗಳೊಂದಿಗೆ ಮೆರವಣಿಗೆ ಸಾಗಿ ಕೋಡಿ ದುರ್ಗಾದೇವಿ ದೇವಸ್ಥಾನ ತಲುಪಿ ದೇವಿಯನ್ನು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿ ವಿವಿಧ ಪೂಜಾ ವಿಧಿ ವಿಧಾನಗಳು ಜರುಗಿಸಲಾಯಿತು.
Advertisement
ಗ್ರಾಮದ ಯುವ ಸಮೂಹ ಚಿತ್ರ ಗೀತೆಗಳಿಗೆ ಕುಣಿದು ಕುಪ್ಪಳಿಸುವ ದೃಶ್ಯ ನೋಡಗುರ ಗಮನ ಸೆಳೆಯಿತು. ಉಪ ಚುನಾವಣೆಯಲ್ಲಿ ಸದ್ದು ಮಾಡಿದ್ದ ಹೌದ ಹುಲಿಯಾ ಡೈಲಾಗ್ ಜಾತ್ರೆಯಲ್ಲಿ ಹೆಚ್ಚು ಕೇಳಿ ಬಂತು. ಮೆರವಣಿಗೆಯಲ್ಲಿ ‘ಹೌದು ಹುಲಿಯಾ’ ಎಂದು ಹೇಳುತ್ತಾ ಯುವಕರು ಕುಣಿದು ಕುಪ್ಪಳಿಸಿದರು. ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.