ಬಿಗ್ ಬಾಸ್ ಮನೆಯ (Bigg Boss Kannada 10) ಆಟ ಇದೀಗ 3ನೇ ವಾರಕ್ಕೆ ಮುನ್ನುಗ್ಗುತ್ತಿದೆ. ಹೀಗಿರುವಾಗ ಕಿಚ್ಚನ ಸಂಡೇ ಪಂಚಾಯಿತಿ ಕೂಡ ಜಬರ್‌ದಸ್ತ್ ಆಗಿ ನಡೆದಿದೆ. ಗಾದೆ ಮಾತುಗಳ ಮೂಲಕ ಸ್ಪರ್ಧಿಗಳು ಎದುರಾಳಿಗೆ ಸಖತ್ ಆಗಿ ಟಾಂಗ್ ಕೊಟ್ಟಿದ್ದಾರೆ. ಕಳ್ಳನಿಗೊಂದು ಪಿಳ್ಳೆ ನೆಪ ಅಂತ ಕಿಚ್ಚನ ಮುಂದೆ ಸಂಗೀತಾಗೆ (Sangeetha Sringeri) ನೀತು (Neethu) ಕಾಲೆಳೆದಿದ್ದಾರೆ.
ದಿನದಿಂದ ದಿನಕ್ಕೆ ಮನೆಯ ಆಟ ಮತ್ತಷ್ಟು ರೋಚಕವಾಗುತ್ತಿದೆ. ಒಬ್ಬರಿಗಿಂತ ಒಬ್ಬರು ಕಿಲಾಡಿಗಳಾಗಿ ಸ್ಪರ್ಧಿಗಳು ಪೈಪೋಟಿ ನೀಡುತ್ತಿದ್ದಾರೆ. ಸೂಪರ್ ಸಂಡೇ ವಿತ್ ಸುದೀಪ್ ಕಾರ್ಯಕ್ರಮದಲ್ಲಿ ಕಿಚ್ಚ, ಸ್ಪರ್ಧಿಗಳಿಗೆ ಪ್ರಶ್ನಾವಳಿ ನಡೆಸಿದ್ದಾರೆ. ಆಗ ಯಾವ ಗಾದೆ ಯಾರಿಗೆ ಹೋಲಿಕೆ ಆಗುತ್ತೆ? ಎಷ್ಟು ಸರಿ ಮತ್ತು ಎಷ್ಟು ತಪ್ಪು ಅನ್ನುವ ಟಾಸ್ಕ್‌ವೊಂದನ್ನ ಮಾಡಿದ್ದಾರೆ. ಇದನ್ನೂ ಓದಿ:ಯುದ್ಧಕ್ಕೆ ನಿಂತ ಮೇಲೆ ಸೋತರೂ ಪರವಾಗಿಲ್ಲ, ಸತ್ತಾದರೂ ಗೆಲ್ಲಿ- ಕಿಚ್ಚನ ಕ್ಲಾಸ್
ಆಗ ಕಾರ್ತಿಕ್ ತುಕಾಲಿಗೆ ‘ಉತ್ತರನ ಪೌರುಷ ಓಲೆ ಮುಂದೆ’ ಎಂಬ ಗಾದೆಯ ಹಾರ ಹಾಕಿದ್ದಾರೆ. ಅವರ ಪೌರುಷ ಏನೇ ಇದ್ದರೂ ವರ್ತೂರ್ ಸಂತೋಷ್ ಮತ್ತು ರಕ್ಷಕ್ ಮುಂದೆ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಬಳಿಕ ‘ಬೆಳ್ಳಗಿರೋದೆಲ್ಲಾ ಹಾಲಲ್ಲ’ ಅಂತ ತನಿಷಾ ಡ್ರೋನ್ ಪ್ರತಾಪ್‌ಗೆ ಹೇಳಿದ್ದಾರೆ. ನೀವು ಮುಗ್ಧರಲ್ಲ ಎಂದಿದ್ದಾರೆ.
ಬಳಿಕ ‘ಕಳ್ಳನಿಗೊಂದು ಪಿಳ್ಳೆ ನೆಪ’ ಈ ಗಾದೆ ಹೋಲೋದು ಸಂಗೀತಾಗೆ ಎಂದು ನೀತು ಹೇಳಿದ್ದಾರೆ. ಡ್ರೋನ್ ಪ್ರತಾಪ್- ವಿನಯ್ ಜಗಳವಾಡುವಾಗ ಸಂಗೀತಾ ಮಾತಿನ ಮಧ್ಯೆ ಹೋಗಿದ್ದರು. ಆಗ ವಿನಯ್ ನೀವು ಮಾತನಾಡುವ ರೀತಿ ಥ್ರೆಟ್ ಎಂದು ಅನಿಸುತ್ತದೆ ಎಂದಿದ್ದರು. ಈ ವಿಚಾರವಾಗಿ ಮನೆಯಲ್ಲಿ ರಣರಂಗನೇ ಆಗಿತ್ತು. ಇದನ್ನು ನೋಡಿ ಅಟೆಕ್ಷನ್‌ಗಾಗಿ ಮಾಡ್ತಿದ್ದಾರೆ ಎಂದು ನೀತುಗೆ ಸಂಗೀತಾ ಟಾಂಗ್ ಕೊಟ್ಟರು. ನೀತು ಮಾತಿಗೆ ಸಂಗೀತಾ ಬೇಸರ ಹೊರಹಾಕಿದರು. ಕಿಚ್ಚನ ಮುಂದೆಯೇ ಸಂಗೀತಾ- ನೀತು ಮಾತಿನ ಭರಾಟೆ ನೋಡಿ ಇತರೆ ಸ್ಪರ್ಧಿಗಳು ದಂಗಾಗಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]