-ಬೆಂಗ್ಳೂರಿನಲ್ಲಿ ಫಿಸಿಯೋಕಾನ್ -25 ಸಮ್ಮೇಳನ, ಸಾವಿರಾರು ಮಂದಿ ಭಾಗಿ
ಬೆಂಗಳೂರು: ಫಿಸಿಯೋಥೆರಪಿ ಕೋರ್ಸ್‌ಗಳಿಗೆ (Physiotherapy course) ಪ್ರವೇಶ ಪಡೆಯುವುದು ಈಗ ನೀಟ್ ವ್ಯಾಪ್ತಿಗೆ ಬರಲಿದೆ. ಇದು ಪ್ರಮಾಣೀಕೃತ ವೈದ್ಯಕೀಯ ಶಿಕ್ಷಣದತ್ತ ರಾಷ್ಟ್ರೀಯ ನಡೆಗೆ ಪೂರಕವಾಗಿರುತ್ತದೆ. ಸಾಮರ್ಥ್ಯ ಆಧಾರಿತ ಕಲಿಕೆ ಮತ್ತು ಹೆಚ್ಚುವರಿ ಕ್ಲಿನಿಕಲ್ ಮಾನ್ಯತೆಗಾಗಿ ಕೋರ್ಸ್ ಅವಧಿಯನ್ನು ಐದು ವರ್ಷಗಳಿಗೆ ವಿಸ್ತರಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದರು.
ಬೆಂಗಳೂರು (Bengaluru) ಅರಮನೆ ಮೈದಾನದಲ್ಲಿ (Palace Ground) ನಡೆದ ಫಿಸಿಯೋಥೆರಪಿಯ ಅಂತಾರಾಷ್ಟ್ರೀಯ ಸಮ್ಮೇಳನವಾದ ಕರ್ನಾಟಕ ಫಿಸಿಯೋಕಾನ್-25 ಉದ್ಘಾಟನಾ ಸಮಾರಂಭದಲ್ಲಿ ಭಾಷಣ ಮಾಡಿದ ಅವರು, ಫಿಸಿಯೋಥೆರಪಿ ಕೋರ್ಸ್‌ಗಳ (Physiotherapy course) ಪ್ರವೇಶವನ್ನು ನೀಟ್ ವ್ಯಾಪ್ತಿಗೆ ಸೇರಿಸಲು ರಾಜ್ಯ ಸರ್ಕಾರದ ಬೆಂಬಲವಿದೆ. ಶೈಕ್ಷಣಿಕ ಗುಣಮಟ್ಟ ಮತ್ತು ವೃತ್ತಿಪರ ಮಾನದಂಡಗಳನ್ನು ಹೆಚ್ಚಿಸುವ ನೀಟ್ ಅಡಿಯಲ್ಲಿ ಭೌತಚಿಕಿತ್ಸೆಯ ಕೋರ್ಸ್ಗಳ ಏಕೀಕರಣವನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿದರು.ಇದನ್ನೂ ಓದಿ: ಕಾವೇರಿ ಆರತಿ ಅಧ್ಯಯನ ಸಮಿತಿ ಶಿಫಾರಸು ಜಾರಿಗೆ ಸಮಿತಿ ರಚನೆ
ಹೆರಿಗೆಯಿಂದ ವೃದ್ಧರ ಆರೈಕೆಯವರೆಗೆ, ಆರೋಗ್ಯ ರಕ್ಷಣೆಯಲ್ಲಿ ಭೌತಚಿಕಿತ್ಸಕರು ಪ್ರಮುಖ ಪಾತ್ರ ವಹಿಸುತ್ತಾರೆ. ಭೌತಚಿಕಿತ್ಸಕರು ನರ ಮತ್ತು ಮೂಳೆಚಿಕಿತ್ಸೆ ಪುನರ್ ಆರೈಕೆ, ಹೃದಯ ಶ್ವಾಸಕೋಶ ಆರೈಕೆ, ಮಕ್ಕಳ ಚಿಕಿತ್ಸೆ, ಅಂಗವೈಕಲ್ಯ ಚಿಕಿತ್ಸೆ, ಫಿಟ್ನೆಸ್ ಮತ್ತು ಸಮುದಾಯ ಆಧಾರಿತ ಆರೈಕೆಗೆ ಗಣನೀಯ ಕೊಡುಗೆ ನೀಡುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಫಿಸಿಯೋಥೆರಪಿಯ ಅಂತಾರಾಷ್ಟ್ರೀಯ ಭೌತಚಿಕಿತ್ಸಾ ಸಮ್ಮೇಳನವಾದ ಕರ್ನಾಟಕ ಫಿಸಿಯೋಕಾನ್-25 ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದೆ.
ಫಿಸಿಯೋಥೆರಪಿ ಕೋರ್ಸ್ ಗಳ ಪ್ರವೇಶಗಳನ್ನು ನೀಟ್ ವ್ಯಾಪ್ತಿಗೆ ಸೇರಿಸಲು ನಮ್ಮ ಸರ್ಕಾರ ಬೆಂಬಲವಿದೆ.
ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಹಾಗೂ ವೃತ್ತಿಪರ ಮಾನದಂಡಗಳನ್ನು… pic.twitter.com/7q8CYe7Tz3
— Dr. Sharan Prakash Patil (@S_PrakashPatil) April 25, 2025
ತರಬೇತಿ ಪಡೆದ ವೃತ್ತಿಪರರಿಗೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇದೆ. ಇದನ್ನು ಪೂರೈಸಲು ಹೆಚ್ಚಿನ ಸರ್ಕಾರಿ ಕಾಲೇಜುಗಳಲ್ಲಿ ಭೌತಚಿಕಿತ್ಸೆಯ ಕೋರ್ಸ್‌ಗಳನ್ನು ಪರಿಚಯಿಸುವ ಚಿಂತನೆ ಇದೆ ಎಂದರು.
ಇದೇ ವೇಳೆ ರಾಷ್ಟ್ರೀಯ ಅಲೈಡ್ & ಹೆಲ್ತ್ ಪ್ರೊಫೆಷನಲ್ಸ್ ಆಯೋಗದ ಅಧ್ಯಕ್ಷ ಡಾ. ಯಜ್ಞ ಶುಕ್ಲಾ ಮಾತನಾಡಿ, ಭೌತಚಿಕಿತ್ಸೆಯ ಶಿಕ್ಷಣದಲ್ಲಿ ಒಂದು ರಾಷ್ಟ್ರ, ಒಂದು ಪಠ್ಯಕ್ರಮ ಉಪಕ್ರಮವನ್ನು ಪರಿಚಯಿಸಲು ಆಯೋಗ ಚಿಂತನೆ ನಡೆಸಿದೆ. ಪಠ್ಯಕ್ರಮ ಸುಧಾರಣೆಯ ಮೂಲಕ ವಿದ್ಯಾರ್ಥಿಗಳು ಮತ್ತು ವೈದ್ಯರಿಗೆ ವಿಶೇಷ ಪ್ರಯೋಜನಗಳೊಂದಿಗೆ ವೃತ್ತಿಯನ್ನು ಉನ್ನತೀಕರಿಸುವ ಮಾನದಂಡವನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಸಮ್ಮೇಳನದಲ್ಲಿ ಇಸ್ರೇಲ್, ಆಸ್ಟ್ರೇಲಿಯಾ ಮತ್ತು ನೇಪಾಳದ ಭಾಷಣಕಾರರು, ಜಾಗತಿಕ ತಜ್ಞರು ಹಾಗೂ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು, 50 ರಾಷ್ಟ್ರೀಯ ತಜ್ಞರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ 800ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಯಿತು. ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಫರೀದ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಾಸೀರ್ ಅಹ್ಮದ್ ಉಪಸ್ಥಿತರಿದ್ದರು.ಇದನ್ನೂ ಓದಿ: ಪಹಲ್ಗಾಮ್‌ಗೆ ರಾಹುಲ್ ಗಾಂಧಿ ಭೇಟಿ – ಉಗ್ರರ ದಾಳಿ ವೇಳೆ ಗಾಯಗೊಂಡವರ ಆರೋಗ್ಯ ವಿಚಾರಣೆ