ನವದೆಹಲಿ: ನೀಟ್ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಗೆ ನೋಟಿಸ್ ನೀಡಿದ್ದು ಎರಡು ವಾರಗಳಲ್ಲಿ ಉತ್ತರಿಸಲು ಸೂಚನೆ ನೀಡಿದೆ. ವಿಚಾರಣೆ ವೇಳೆ ಪೀಠ ಯಾರದೇ ಕಡೆಯಿಂದ 0.001%ರಷ್ಟು ನಿರ್ಲಕ್ಷ್ಯ ಕಂಡುಬಂದರೂ ಅದನ್ನು ಕೂಲಂಕುಷವಾಗಿ ನಿಭಾಯಿಸಬೇಕು ಎಂದು ಸೂಚಿಸಿದೆ.
ನೀಟ್ ಫಲಿತಾಂಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಪೀಠ, ಆಕಾಂಕ್ಷಿಗಳು ಪ್ರವೇಶ ಪರೀಕ್ಷೆಗೆ ಸಾಕಷ್ಟು ತಯಾರಿ ನಡೆಸಿರುತ್ತಾರೆ. ನಾವು ಅವರ ಶ್ರಮವನ್ನು ಮರೆಯಲು ಸಾಧ್ಯವಿಲ್ಲ. ವ್ಯವಸ್ಥೆಯಲ್ಲಿ ವಂಚನೆ ಮಾಡಿದವರು ವೈದ್ಯರಾಗುತ್ತಾರೆ ಅಂತವರಿಂದ ಸಮಾಜಕ್ಕೆ ಹೆಚ್ಚು ಹಾನಿಕಾರಕ ಎಂದು ಕಳವಳ ವ್ಯಕ್ತಪಡಿಸಿತು.
- Advertisement
NEET-UG ವಿರುದ್ಧ ಸಲ್ಲಿಸಲಾದ ಅರ್ಜಿಗಳನ್ನು ವಿರೋಧಿ ವ್ಯಾಜ್ಯ ಎಂದು ಪರಿಗಣಿಸಬೇಡಿ. ವ್ಯವಸ್ಥೆಯಲ್ಲಿನ ತಪ್ಪುಗಳನ್ನು ಸರಿಪಡಿಸಿ. ಪರೀಕ್ಷೆಯನ್ನು ನಡೆಸುತ್ತಿರುವ ಏಜೆನ್ಸಿಯಾಗಿ ನೀವು ನ್ಯಾಯಯುತವಾಗಿ ವರ್ತಿಸಬೇಕು. ತಪ್ಪಿದ್ದರೆ, ಹೌದು ಇದು ತಪ್ಪು ಎಂದು ಹೇಳಿ. ಇದು ನಿಮ್ಮ ಕಾರ್ಯಕ್ಷಮತೆಯಲ್ಲಿ ವಿಶ್ವಾಸವನ್ನು ಉಂಟುಮಾಡುತ್ತದೆ ಎಂದು ಪೀಠವು ಎನ್‌ಟಿಎಗೆ ಸಲಹೆ ನೀಡಿತು. ಇದನ್ನೂ ಓದಿ: ದರ್ಶನ್ ಫಾರ್ಮ್ ಹೌಸ್ ನೋಡಿಕೊಳ್ಳುತ್ತಿದ್ದ ಮ್ಯಾನೇಜರ್ ಆತ್ಮಹತ್ಯೆ
- Advertisement
ಕೋರ್ಟ್ ಪರೀಕ್ಷಾ ಸಂಸ್ಥೆಯಿಂದ ಸಕಾಲಿಕ ಕ್ರಮ ನಿರೀಕ್ಷಿಸುತ್ತದೆ. ಅರ್ಜಿದಾರರು ತಮ್ಮ ವಾದವನ್ನು ಕಾಯ್ದಿರಿಸಿಕೊಳ್ಳಿ ನೋಟಿಸ್ ಗೆ ಎನ್‌ಟಿಎ ಮೊದಲು ಉತ್ತರ ನೀಡಲಿ. ಆಮೇಲೆ ನೀವು ವಾದಿಸಿ. ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 8 ರಂದು ಪಟ್ಟಿ ಮಾಡಲಾಗಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿತು.