ಲಕ್ನೋ (ಕಾನ್ಪುರ): ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಗೆ (NEET Exam) ತಯಾರಿ ನಡೆಸಲು ಕಾನ್ಪುಕ್ಕೆ ತೆರಳಿದ್ದ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಸ್ಥಳೀಯ ಕೋಚಿಂಗ್ ಸೆಂಟರ್‌ನ ಇಬ್ಬರು ಖ್ಯಾತ ಶಿಕ್ಷಕರು (Coaching Teachers) ತಿಂಗಳಾನುಗಟ್ಟಲೇ ಅತ್ಯಾಚಾರ ಎಸಗಿ, ಬ್ಲ್ಯಾಕ್‌ಮೇಲ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ವಿದ್ಯಾರ್ಥಿನಿಗೆ (Girl Student) ಲೈಂಗಿಕ ಕಿರುಕುಳ ನೀಡಿದ ಸಿಸಿಟಿವಿ (CCTV) ದೃಶ್ಯಾವಳಿ ಆಧರಿಸಿ ಪೊಲೀಸರು ಒಬ್ಬನನ್ನು ಬಂಧಿಸಿದ್ದರು. ಬಳಿಕ ವಿದ್ಯಾರ್ಥಿನಿಯರಿಂದ ದೂರು ಪಡೆದು ಮತ್ತೊಬ್ಬ ಶಿಕ್ಷಕನನ್ನೂ ಬಂಧಿಸಲಾಯಿತು. ಇದನ್ನೂ ಓದಿ: ಯೋಗ ಶಿಕ್ಷಕಿ ಜೀವಂತ ಸಮಾಧಿ ಕೇಸ್ | ಮರ್ಡರ್ ಮಾಡೋಕೆ 4 ಲಕ್ಷ ಸುಪಾರಿ, 1 ಲಕ್ಷ ಅಡ್ವಾನ್ಸ್ – ರಹಸ್ಯ ಸ್ಫೋಟ
ಏನಿದು ಕೇಸ್ – ವಿದ್ಯಾರ್ಥಿನಿ ದೂರಿನಲ್ಲಿ ಏನಿದೆ?
2022 ರಲ್ಲಿ ನೀಟ್ ಪರೀಕ್ಷೆಗೆ ತಯಾರಿಗಾಗಿ ವಿದ್ಯಾರ್ಥಿನಿಯರು ಕಾನ್ಪುರಕ್ಕೆ (Kanpur) ಹೋಗಿ, ಕೋಚಿಂಗ್ ಸೆಂಟರ್‌ಗೆ ಸೇರಿಕೊಂಡಿದ್ದರು. ಈ ವರ್ಷದ ಜನವರಿಯಲ್ಲಿ, ಆಕೆಯ ಜೀವಶಾಸ್ತ್ರದ ಶಿಕ್ಷಕ ಸಾಹಿಲ್ ಸಿದ್ದಿಕಿ (32) ತನ್ನ ಮನೆಯಲ್ಲಿ ಪಾರ್ಟಿಗೆ ವಿದ್ಯಾರ್ಥಿನಿಯನ್ನು ಆಹ್ವಾನಿಸಿದ್ದ. ಎಲ್ಲಾ ವಿದ್ಯಾರ್ಥಿನಿಯರು ಬರುತ್ತಿದ್ದಾರೆ, ನೀನು ಬಾ ಎಂದು ಹೇಳಿದ್ದ. ಆದ್ರೆ ಪಾರ್ಟಿಗೆ ತೆರಳಿದಾಗ ಆಕೆ ಒಬ್ಬಳಿಗೆ ಮಾತ್ರವೇ ಆಹ್ವಾನ ನೀಡಲಾಗಿತ್ತು. ಇದೇ ವೇಳೆ ಆಕೆಗೆ ಬಲವಂತವಾಗಿ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ್ದಾನೆ.
ಅಷ್ಟಕ್ಕೆ ಸುಮ್ಮನಾಗದೇ ಕೃತ್ಯವನ್ನು ವೀಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾನೆ. ಹೊರಗೆ ಹೇಳಿದರೆ, ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡುವುದಾಗಿ, ತನ್ನ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಕೆಯೂ ಹಾಕಿದ್ದಾನೆ. ಇದೇ ವೀಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮಾಡೋಕೆ ಶುರು ಮಾಡಿದ್ದಾನೆ. ಅನೇಕ ಸಂದರ್ಭಗಳಲ್ಲಿ ತಿಂಗಳಾನುಗಟ್ಟಲೇ ಅತ್ಯಾಚಾರ ಎಸಗಿದ್ದಾನೆ. ಇದಾದ ಕೆಲವು ದಿನಗಳ ವರೆಗೆ ತನ್ನ ಫ್ಲಾಟ್‌ನಲ್ಲೇ ಇರಿಸಿಕೊಂಡಿದ್ದ. ಮತ್ತೊಮ್ಮೆ ಪಾರ್ಟಿ ಮಾಡಿದಾಗ ರಸಾಯನಶಾಸ್ತ್ರ ಶಿಕ್ಷಕ ವಿಕಾಸ್ ಪೋರ್ವಾಲ್ (39) ಸಹ ಆಕೆ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ವಿದ್ಯಾರ್ಥಿನಿಯರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಹೋಳಿ ಹಬ್ಬದ ವೇಳೆ ತನ್ನ ಪೋಷಕರನ್ನು ಭೇಟಿಯಾಗಲು ಮನೆಗೆ ಹೋದಾಗ ವಿದ್ಯಾರ್ಥಿನಿಯರು ಈ ವಿಷಯವನ್ಜು ಹೇಳಿಕೊಂಡಿದ್ದಾರೆ. ಬಳಿಕ ಪೋಷಕರು ದೂರು ನೀಡಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ. ಇದನ್ನೂ ಓದಿ: ನಾಯಿ ಮರಿಯ ಶಬ್ದ ಕೇಳಲಾಗದೇ ಮೀರತ್‌ನಲ್ಲಿ 5 ನಾಯಿ ಮರಿಗಳಿಗೆ ಬೆಂಕಿ ಹಚ್ಚಿದ ಮಹಿಳೆಯರು: ಕೇಸ್ ದಾಖಲು