ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟುಗಳ ಹಂಚಿಕೆಗೆ ನೀಟ್ ಪರೀಕ್ಷೆ ಕಡ್ಡಾಯವಾದ ಬಳಿಕ ಇವತ್ತು ದೇಶದಾದ್ಯಂತ ನೀಟ್ ಪರೀಕ್ಷೆ ನಡೆಯುತ್ತಿದೆ.
ಸಿಬಿಎಸ್ಇ ರಾಷ್ಟ್ರಾದ್ಯಂತ ಏಕರೂಪ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ ನಡೆಸುತ್ತಿದೆ. 11 ಲಕ್ಷದ 35 ಸಾವಿರದ 104 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. 103 ನಗರಗಳ 2,200 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರು, ದಾವಣಗೆರೆ, ಹುಬ್ಬಳ್ಳಿ, ಮೈಸೂರು, ಕಲಬುರ್ಗಿ, ಬೆಳಗಾವಿಯಲ್ಲಿ ಪರೀಕ್ಷೆಗಳು ನಡೆಯಲಿವೆ.
Advertisement
ಪರೀಕ್ಷೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ವೇಳೆ ಸೂಕ್ತ ದಾಖಲಾತಿ ಸಲ್ಲಿಸದ ವಿದ್ಯಾರ್ಥಿಗಳು ಇಂದಿನ ಪರೀಕ್ಷೆಗೆ ಪ್ರವೇಶ ಪತ್ರದ ಜೊತೆ ಆಧಾರ್ ಕಾರ್ಡ್ ಕಡ್ಡಾಯವಾಗಿ ತೆಗದುಕೊಂಡು ಹೋಗಬೇಕು. ಆಧಾರ್ ಕಾರ್ಡ್ ಇಲ್ಲದವರು ಸರ್ಕಾರದ ಯಾವುದಾದರೂ ಗುರುತಿನ ಪತ್ರವನ್ನ ತೆಗೆದುಕೊಂಡು ಹೋಗೋದು ಕಡ್ಡಾಯ. ಪರೀಕ್ಷೆಗಳ ಬೆಳಗ್ಗೆ 10.30ಕ್ಕೆ ಪ್ರಾರಂಭವಾಗಿದೆ. ಅಭ್ಯರ್ಥಿಗಳು 9.30ರ ಒಳಗೆ ಪರೀಕ್ಷಾ ಕೇಂದ್ರದಲ್ಲಿ ಇರೋದು ಕಡ್ಡಾಯ. ಒಂದು ನಿಮಿಷ ತಡ ಆದ್ರು ಪರೀಕ್ಷಾ ಕೇಂದ್ರಕ್ಕೆ ನೋ ಎಂಟ್ರಿ.
Advertisement
ಪರೀಕ್ಷೆಯನ್ನ ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಬೋರ್ಡ್ ವಿದ್ಯಾರ್ಥಿಗಳಿಗೆ ಡ್ರೆಸ್ ಕೋಡ್ ಹಾಗೂ ಇನ್ನಿತರ ವಸ್ತುಗಳ ನಿಷೇಧ ಮಾಡಿದ್ದು ಅವುಗಳು ಹೀಗಿವೆ:
> ವಿದ್ಯಾರ್ಥಿಗಳು ಜುಬ್ಬಾ-ಪೈಜಾಮ, ಶೂ, ಫುಲ್ ತೋಳಿನ ಶರ್ಟ್, ವಾಚ್ ಧರಿಸುವಂತಿಲ್ಲ. ಬದಲಿಗೆ ಜೀನ್ಸ್ ಪ್ಯಾಂಟ್, ಲೈಟ್ ಕಲರ್ ಹಾಫ್ ಶರ್ಟ್, ಚಪ್ಪಲಿ ಧರಿಸಬೇಕು.
> ವಿದ್ಯಾರ್ಥಿನಿಯರು ಹೀಲ್ಡ್ ಶೂ – ಸಾಕ್ಸ್, ಕತ್ತಿಗೆ ಸರ, ವಾಚ್ ,ದೊಡ್ಡ ಗುಂಡಿಗಳ ಡ್ರೆಸ್ ಹಾಕುವಂತಿಲ್ಲ. ಎಲೆಕ್ಟ್ರಾನಿಕ್ ಉಪಕರಣಗಳನ್ನು ಪರೀಕ್ಷೆ ಕೇಂದ್ರಕ್ಕೆ ತರುವಂತಿಲ್ಲ.