ಬೆಂಗಳೂರು: ಸ್ಯಾಂಡಲ್ ವುಡ್ ನ ‘ನೀರ್ ದೋಸೆ’ ಸಿನಿಮಾ ನಿರ್ಮಾಪಕ ಆರ್. ಪ್ರಸನ್ನರನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದಾರೆ.
ಬ್ಯಾಂಕಿಗೆ ಕಲರ್ ಜೆರಾಕ್ಸ್ ದಾಖಲಾತಿಗಳನ್ನು ಕೊಟ್ಟು ವಂಚನೆ ಮಾಡಿದ್ದ ಆರೋಪದ ಮೇರೆಗೆ ನಿರ್ಮಾಪಕರನ್ನು ಬಂಧಿಸಲಾಗಿದೆ. ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ದಾಶಿಕಾ ರಮೇಶ್ ದೂರು ನೀಡಿದ್ದರು. ಬ್ಯಾಂಕ್ ಮ್ಯಾನೇಜರ್ ದೂರು ನೀಡಿದ ಹಿನ್ನೆಲೆಯಲ್ಲಿ ಈಗ ನಿರ್ಮಾಪಕರನ್ನು ಪೊಲೀಸರು ಬಂಧಿಸಿದ್ದಾರೆ.
Advertisement
ಬಂಧಿತ ಪ್ರಸನ್ನ 2015 ರಲ್ಲಿ ಶೇಷಾದ್ರಿಪುರಂನ ಸಿಂಡಿಕೇಟ್ ಬ್ಯಾಂಕಿನಲ್ಲಿ ಮನೆ ಅಡಮಾನವಿಟ್ಟು ಸಾಲ ಪಡೆದಿಕೊಂಡಿದ್ದರು. ಹೊರಕೆರೆಹಳ್ಳಿ ಮನೆಯ ಭೂ ದಾಖಲೆಯನ್ನು ಕಲರ್ ಜೆರಾಕ್ಸ್ ಮಾಡಿಸಿ ಮೂರು ಕಡೆ ಸಾಲ ಪಡೆದಿದ್ದರು. ಶೇಷಾದ್ರಿಪುರಂನ ಸಿಂಡಿಕೇಟ್ ಬ್ಯಾಂಕ್, ಕಿಲಾರಿ ರಸ್ತೆಯ ದೈವಜ್ಞ ಕೊ ಆಪರೇಟಿವ್ ಸೊಸೈಟಿ ಹಾಗು ಮಾರ್ಗದರ್ಶಿ ಚಿಟ್ಸ್ ನಲ್ಲಿ ಸಾಲ ಪಡೆದುಕೊಂಡಿದ್ದರು.
Advertisement
Advertisement
ಪ್ರಸನ್ನ ಎಲ್ಲ ಬ್ಯಾಂಕ್ ಗಳಿಗೂ ಒಂದೇ ಆಸ್ತಿ ಪತ್ರ ನೀಡಿ ಒಂದೇ ವಾರದಲ್ಲಿ ಒಂದು ಕೋಟಿ ಸಾಲ ಪಡೆದಿದ್ದರು. ಬ್ಯಾಂಕಿನವರು ಆಸ್ತಿ ಪತ್ರ ಪರಿಶೀಲನೆ ನಡೆಸಿದಾಗ ಕಲರ್ ಜೆರಾಕ್ಸ್ ಕೊಟ್ಟಿರುವುದು ಬೆಳಕಿಗೆ ಬಂದಿದೆ. ನಂತರ ಈ ಬಗ್ಗೆ ಪೊಲೀಸರಿಗೆ ದೂರು ಕೊಡುತ್ತೀವಿ ಎಂದಾಗ ಎರಡು ಕಂತುಗಳಲ್ಲಿ 17 ಲಕ್ಷ ರೂ. ಹಣ ವಾಪಸ್ ಮಾಡಿದ್ದರು. ಉಳಿದ 17 ಲಕ್ಷ ರೂ. ಚೆಕ್ ನೀಡಿದ್ದರು. ಆದರೆ ಪ್ರಸನ್ನ ನೀಡಿದ್ದ ಚೆಕ್ ಬೌನ್ಸ್ ಆಗಿತ್ತು. ಹೀಗಾಗಿ ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ದಾಶಿಕಾ ರಮೇಶ್ ದೂರು ನೀಡಿದ್ದರು. ಸದ್ಯಕ್ಕೆ ಶೇಷಾದ್ರಿಪುರಂ ಪೊಲೀಸರು ನಿರ್ಮಾಪಕ ಪ್ರಸನ್ನರನ್ನು ಬಂಧಿಸಿದ್ದಾರೆ.
Advertisement
ನಿರ್ಮಾಪಕ ಪ್ರಸನ್ನ ‘ನೀರ್ ದೋಸೆ’, ‘ಬ್ಯೂಟಿಫುಲ್ ಮನಸುಗಳು’ ಸಿನಿಮಾ ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ಮಾಣ ಮಾಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv