ಮುಂಬೈ: ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಕ್ರೀಡಾಪಟು, ನೀರಜ್ ಚೋಪ್ರಾ ಹಾಲಿಡೇಗೆ ಮಾಲ್ಡೀವ್ಸ್‌ಗೆ ತೆರಳಿದ್ದಾರೆ. ಅಲ್ಲಿ ಅವರು ಎಂಜಾಯ್ ಮಾಡುತ್ತೀರುವ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮಾಲ್ಡೀವ್ಸ್‌ಗೆ ತೆರಳಿದ ಚೋಪ್ರ ಸಮುದ್ರದಡಿಯಲ್ಲಿ ಸ್ಕೂಬಾ ಡೈವಿಂಗ್ ಮಾಡುತ್ತಾ ಜಾವೆಲಿನ್ ಎಸೆತಯವಂತೆ ನಟಿಸಿದ್ದಾರೆ. ಈ ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು ಆಕಾಶದಲ್ಲಿ, ನೆಲದ ಮೇಲೆ ಅಥವಾ ನೀರಿನಲ್ಲಿ ನಾನು ಜಾವೆಲಿನ್ ಬಗ್ಗೆಯೇ ಯೋಚಿಸುತ್ತಿದ್ದೇವೆ ಎಂದು ಶಿರ್ಷಿಕೆ ನೀಡಿದ್ದಾರೆ. ಇದನ್ನೂ ಓದಿ: ಪತ್ನಿಯಾಗುವವಳು ನನ್ನಂತೆಯೇ ಕ್ರೀಡಾಪಟುವಾಗಿರಬೇಕು: ನೀರಜ್ ಚೋಪ್ರಾ
View this post on Instagram
ನೀರಜ್ ಚೋಪ್ರಾ ಅವರ ಈ ವೀಡಿಯೋಗೆ ಅಭಿಮಾನಿಗಳು ಮೆಚ್ಚುಗೆಯನ್ನು ಸೂಚಿಸಿ ಕಾಮೆಂಟ್ ಮಾಡುತ್ತಿದ್ದಾರೆ. ನಿಮ್ಮ ಶ್ರಮ, ಸಾಧನೆ ಮೆಚ್ಚುವಂಥದ್ದು ಎಂದು ಹಾಡಿ ಹೊಗಳಿದ್ದಾರೆ.