ನೀವು ನನ್ನ ಫೇವರೆಟ್ – ಬಾಲಕಿಯ ಸಿಹಿ ಮಾತಿಗೆ ನೀರಜ್ ಚೋಪ್ರಾ ಪ್ರತಿಕ್ರಿಯೆ ಏನು ಗೊತ್ತಾ?

Public TV
1 Min Read
Neeraj Chopra 1 2

ಚಂಡೀಗಢ: ಒಲಂಪಿಕ್ಸ್‌ನಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ಸಾವಿರಾರು ಅಭಿಮಾನಿಗಳ ಹೃದಯ ಗೆದ್ದ ನೀರಜ್ ಚೋಪ್ರಾ ಅವರು ಪುಟ್ಟ ಬಾಲಕಿಯೊಂದಿಗೆ ತಾವು ಕೂಡ ಪುಟ್ಟ ಮಕ್ಕಳಂತೆ ಮಾತನಾಡಿರುವ ಕ್ಯೂಟ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

neeraj chopra

ಈ ವೀಡಿಯೋವನ್ನು ಐಎಎಸ್ ಅಧಿಕಾರಿ ಪಂಕಜ್ ಅವರು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದು, ವೀಡಿಯೋದಲ್ಲಿ ನೀರಜ್ ಚೋಪ್ರಾ ಬಾಲಕಿ ಮುಂದೆ ಕೆಳಗೆ ಬಾಗಿ ಪ್ರೀತಿಯಿಂದ ಮಾತನಾಡುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ಈ ವೇಳೆ ಬಾಲಕಿ ನೀವು ನನ್ನ ಫೇವರೆಟ್ ಎಂದು ಹೇಳುತ್ತಾಳೆ. ಆಗ ನೀರಜ್ ಮುಗುಳುನಗೆ ಬೀರಿ ಬಾಲಕಿಯ ಕೆನ್ನೆಯನ್ನು ಪ್ರೀತಿಯಿಂದ ತಟ್ಟುತ್ತಾ ಮುಂದೆ ಸಾಗುತ್ತಾರೆ. ಇದನ್ನೂ ಓದಿ: ಶಿವಣ್ಣ ಅಭಿಮಾನಿಗಳಿಗೆ ರಸದೌತಣ – ವಿಶ್ವದಾದ್ಯಂತ ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಮೇಲೆ ಭಜರಂಗಿ -2

Neeraj Chopra 2

ವೀಡಿಯೋ ಜೊತೆಗೆ, ಪಾಣಿಪತ್ ಸ್ಪೋಟ್ಸ್ ಸ್ಟೇಡಿಯಂನಲ್ಲಿ ಮಕ್ಕಳೊಂದಿಗೆ ಸಂವಹನ ನಡೆಸುತ್ತಿರುವ ನೀರಜ್ ಚೋಪ್ರಾ ಅವರ ಸರಳತೆಯನ್ನು ನೋಡಿ. ಚಾಂಪಿಯನ್ ಆಗುವ ಮಾರ್ಗ ಎಂದು ಕ್ಯಾಪ್ಷನ್‍ನಲ್ಲಿ ಪಂಕಜ್ ಅವರು ಬರೆದುಕೊಂಡಿದ್ದಾರೆ. ಇನ್ನೂ ಈ ವೀಡಿಯೋವನ್ನು ಇಲ್ಲಿಯವರೆಗೂ 20,200ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಅನೇಕ ಕಾಮೆಂಟ್‍ಗಳು ಹರಿದುಬಂದಿದೆ. ಇದನ್ನೂ ಓದಿ: ಸೈಕಲ್‍ನಲ್ಲಿ ತೆರಳಿದ ಪಾಕ್ ಸಚಿವ – ಫೋಟೋ ವೈರಲ್

23 ವರ್ಷದ ರೈತರ ಮಗ ನೀರಜ್ ಚೋಪ್ರಾ ಅವರು ಆಗಸ್ಟ್ 7 ರಂದು ಜಪಾನ್‍ನ ರಾಜಧಾನಿ ಟೋಕಿಯೋದಲ್ಲಿ ನಡೆದ ಒಲಂಪಿಕ್ಸ್‌ನಲ್ಲಿ 87.58 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಭಾರತಕ್ಕೆ ಚಿನ್ನದ ಪದಕ ತಂದು ಕೊಟ್ಟು ದಾಖಲೆ ಸೃಷ್ಟಿಸಿದರು.

Share This Article
Leave a Comment

Leave a Reply

Your email address will not be published. Required fields are marked *