ಪ್ಯಾರಿಸ್: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಭಾರತದ ನೀರಜ್ ಚೋಪ್ರಾ (Neeraj Chopra) ಪ್ಯಾರಿಸ್ ಒಲಿಂಪಿಕ್ಸ್‌ನ ಜಾವೆಲಿನ್ (Javelin) ಎಸೆತದಲ್ಲಿ ಬೆಳ್ಳಿ (Silver) ಗೆದ್ದಿದ್ದಾರೆ. ಈ ಮೂಲಕ ಸತತ ಎರಡು ಒಲಿಂಪಿಕ್ಸ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಗೆದ್ದ ಭಾರತದ ಮೊದಲ ಕ್ರೀಡಾಪಟು ಎಂಬ ದಾಖಲೆ ಬರೆದಿದ್ದಾರೆ.
Neeraj Chopra is excellence personified! Time and again he’s shown his brilliance. India is elated that he comes back with yet another Olympic success. Congratulations to him on winning the Silver. He will continue to motivate countless upcoming athletes to pursue their dreams… pic.twitter.com/XIjfeDDSeb
— Narendra Modi (@narendramodi) August 8, 2024
ನೀರಜ್ ಚೋಪ್ರಾ 89.45 ಮೀಟರ್ ದೂರ ಎಸೆದರೆ ಪಾಕಿಸ್ತಾನದ ಅರ್ಶದ್ ನದೀಂ (Arshad Nadeem) 92.97 ಮೀಟರ್ ದೂರ ಎಸೆದು ಚಿನ್ನದ ಪದಕ ಪಡೆದರು. ಗ್ರೆನೆಡಾದ ಆ್ಯಂಡರ್ಸನ್ ಪೀಟರ್ 88.54 ಮೀಟರ್ಸ್ ದೂರ ಥ್ರೋ ಮಾಡಿ ಕಂಚು ಪಡೆದರು.
2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ನೀರಜ್ ಈ ಬಾರಿ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದರು. 6 ಅವಕಾಶಗಳ ಪೈಕಿ 5 ಪ್ರಯತ್ನಗಳಲ್ಲಿ ಫೌಲ್ ಆಗಿದ್ದ ನೀರಜ್ ಎರಡನೇ ಪ್ರಯತ್ನದಲ್ಲಿ 89.45 ಮೀಟರ್ ದೂರ ಎಸೆದರು.
When excellence gets a silver shine!????????????Neeraj Chopra ???????? pic.twitter.com/N1FldJs5LQ
— Ashwini Vaishnaw (@AshwiniVaishnaw) August 8, 2024
ನೀರಾಜ್ ಬೆಳ್ಳಿ ಗೆಲ್ಲುವುದರೊಂದಿಗೆ ಭಾರತ ಈ ಕೂಟದಲ್ಲಿ ಒಟ್ಟು ಐದು ಪದಕ ಗೆದ್ದಿದೆ. ಉಳಿದ ನಾಲ್ಕು ಕಂಚಿನ ಪದಕವಾಗಿದ್ದು ಗುರುವಾರ ಹಾಕಿಯಲ್ಲಿ ಸ್ಪೇನ್ ಸೋಲಿಸಿ ಮೂರನೇ ಸ್ಥಾನ ಪಡೆದುಕೊಂಡಿತ್ತು.
ಅರ್ಶದ್ ನದೀಂ ಅವರು ಚಿನ್ನ ಗೆಲ್ಲುವುದರೊಂದಿಗೆ ಪಾಕಿಸ್ತಾನ ಈ ಒಲಿಂಪಿಕ್ಸ್ ಟೂರ್ನಿಯಲ್ಲಿ ಮೊದಲ ಪದಕ ಪಡೆಯಿತು.