ಇಸ್ಲಾಮಾಬಾದ್: ನೀರಜ್ ಚೋಪ್ರಾ (Neeraj Chopra) ನನ್ನ ಮಗನಿದ್ದಂತೆ. ಅವನಿಗಾಗಿಯೂ ನಾನು ಪ್ರಾರ್ಥಿಸುತ್ತೇನೆ ಎಂದು ಪ್ಯಾರಿಸ್ ಒಲಿಂಪಿಕ್ಸ್ 2024ರ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ಪಾಕಿಸ್ತಾನದ ಅರ್ಷದ್ ನದೀಮ್ (Arshad Nadeem) ತಾಯಿ ಹೇಳಿದ್ದಾರೆ.
ಒಲಿಂಪಿಕ್ಸ್ (Paris Olympics 2024) ಜಾವೆಲಿನ್ ಥ್ರೋ ಕುರಿತು ನದೀಮ್ ತಾಯಿ ಮಾತನಾಡುವಾಗ, ನೀರಜ್ ಚೋಪ್ರಾ ಕೂಡ ನನ್ನ ಮಗನಿದ್ದಂತೆ. ಅವನು ನದೀಮ್‌ನ ಸ್ನೇಹಿತ, ಸಹೋದರನೂ ಹೌದು. ಗೆಲುವು ಮತ್ತು ಸೋಲುಗಳು ಕ್ರೀಡೆಯ ಭಾಗವಾಗಿದೆ. ದೇವರು ಅವರನ್ನು ಆಶೀರ್ವದಿಸಲಿ. ಪದಕಗಳನ್ನು ಗೆಲ್ಲಲಿ. ಅವರಿಬ್ಬರು ಸಹೋದರರಂತೆ. ನಾನು ನೀರಜ್‌ಗಾಗಿಯೂ ಪ್ರಾರ್ಥಿಸಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Paris Olympics | ಜಾವೆಲಿನ್‌ನಲ್ಲಿ ಬೆಳ್ಳಿ ಗೆದ್ದು ದಾಖಲೆ ಬರೆದ ನೀರಜ್
Advertisement
Advertisement
ನದೀಮ್‌ಗೆ ನೀಡಿದ ಬೆಂಬಲಕ್ಕಾಗಿ, ನನ್ನ ಮಗನಿಗಾಗಿ ಅವರು ಸಲ್ಲಿಸಿದ ಪ್ರಾರ್ಥನೆಗಳಿಗಾಗಿ ನಾನು ಇಡೀ ಪಾಕಿಸ್ತಾನಕ್ಕೆ ಕೃತಜ್ಞಳಾಗಿದ್ದೇನೆ ಎಂದು ಭಾವುಕವಾಗಿ ನದೀಮ್ ತಾಯಿ ಮಾತನಾಡಿದ್ದಾರೆ.
Advertisement
ನೀರಜ್ ತಾಯಿ ಸರೋಜ ಕೂಡ, ಅರ್ಷದ್ ನನ್ನ ಮಗನಂತೆ ಎಂದು ಹೇಳಿದ್ದಾರೆ. ಈಗ ಅರ್ಷದ್ ತಾಯಿ ಕೂಡ ಅದೇ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ನಾನು ನನ್ನ ಸ್ವಂತ ಮಗನನ್ನು ನೋಡುವ ರೀತಿಯಲ್ಲಿಯೇ ನೀರಜ್‌ನನ್ನು ನೋಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ – ಭಾರತ ಪುರುಷರ ಹಾಕಿ ತಂಡಕ್ಕೆ ಕಂಚು
Advertisement
ಪಾಕಿಸ್ತಾನದ ಇತಿಹಾಸದಲ್ಲೇ ವೈಯಕ್ತಿಕ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಮೊದಲ ಅಥ್ಲೀಟ್ ಅರ್ಷದ್ ಆಗಿದ್ದಾರೆ. ಇತ್ತ ಬ್ಯಾಕ್-ಟು-ಬ್ಯಾಕ್ ವೈಯಕ್ತಿಕ ಒಲಿಂಪಿಕ್ಸ್ ಪದಕಗಳನ್ನು ಗೆದ್ದ ಮೊದಲ ಅಥ್ಲೀಟ್ ಆಗಿ ನೀರಜ್ ಹೊರಹೊಮ್ಮಿದ್ದಾರೆ.
ನಾವು ಬೆಳ್ಳಿ ಪದಕದಿಂದ ತುಂಬಾ ಸಂತೋಷವಾಗಿದ್ದೇವೆ. ಚಿನ್ನ ಗೆದ್ದವರು ಕೂಡ ನಮ್ಮ ಮಗನಿದ್ದಂತೆ. ಬೆಳ್ಳಿ ಗೆದ್ದವರು ಕೂಡ ನಮ್ಮ ಮಗ. ಎಲ್ಲರೂ ಕ್ರೀಡಾಪಟುಗಳು, ಎಲ್ಲರೂ ಕಷ್ಟಪಟ್ಟು ಕೆಲಸ ಮಾಡುತ್ತಾರೆ ಎಂದು ನೀರಜ್ ತಾಯಿ ಸರೋಜ್ ಪ್ರತಿಕ್ರಿಯಿಸಿದ್ದಾರೆ.
ನದೀಮ್ ಕೂಡ ಒಳ್ಳೆಯವನು. ಅವನು ಚೆನ್ನಾಗಿ ಆಡುತ್ತಾನೆ. ನೀರಜ್ ಮತ್ತು ನದೀಮ್ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಾವು ಚಿನ್ನ ಮತ್ತು ಬೆಳ್ಳಿಯನ್ನು ಪಡೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಚೋಪ್ರಾ ಮತ್ತು ನದೀಮ್ ಇಬ್ಬರೂ ಪ್ರತಿಸ್ಪರ್ಧಿಗಳಾಗಿದ್ದರೂ ಮೈದಾನದ ಹೊರಗೆ ಉತ್ತಮ ಸ್ನೇಹಿತರು. ನೀರಜ್ ವಾಸ್ತವವಾಗಿ ನದೀಮ್‌ಗೆ ಸಹಾಯ ಹಸ್ತವನ್ನು ನೀಡಿದ್ದಾರೆ. ಅನೇಕ ಸಂದರ್ಭಗಳಲ್ಲಿ ಅವರನ್ನು ಬೆಂಬಲಿಸಿದ್ದಾರೆ. ಇದನ್ನೂ ಓದಿ: ವಿನೇಶ್ ಫೋಗಟ್‌ಗೆ 4 ಕೋಟಿ ರೂ. ಬಹುಮಾನ – ಬೆಳ್ಳಿ ಪದಕ ವಿಜೇತೆ ಮಾದರಿಯಲ್ಲಿ ಗೌರವಿಸಲು ಸಕಲ ಸಿದ್ಧತೆ