– ಚಿಕ್ಕ ಕನಸು ನನಸಾಯ್ತು ಅಂದ್ರು ನೀರಜ್ ಚೋಪ್ರಾ
ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದು ದೇಶದ ಪತಾಕೆ ಹಾರಿಸಿರುವ ನೀರಜ್ ಚೋಪ್ರಾ ಅವರು ಇಂದು ತಮ್ಮ ತಂದೆ-ತಾಯಿಯನ್ನು ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡಿಸಿದ್ದಾರೆ. ಈ ಮೂಲಕ ತಮ್ಮ ಸಣ್ಣ ಕನಸೊಂದನ್ನು ನನಸು ಮಾಡಿದ್ದಾರೆ.
Advertisement
ಹೌದು. ತಮ್ಮ ತಂದೆ-ತಾಯಿಯನ್ನು ಜೀವನದಲ್ಲಿ ಒಮ್ಮೆಯಾದರೂ ವಿಮಾನ ಪ್ರಯಾಣ ಮಾಡಿಸಬೇಕು ಎಂದು ನೀರಜ್ ಕನಸು ಕಂಡಿದ್ದರು. ಇದೀಗ ಅವರ ಬಹುದಿನಗಳ ಜನಸು ಈಡೇರಿದ್ದು, ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ನನ್ನದೊಂದು ಸಣ್ಣ ಕನಸು ಈಗ ನನಸಾಗಿದೆ. ನನ್ನ ಹೆತ್ತವರನ್ನು ಮೊದಲ ಬಾರಿಗೆ ವಿಮಾನದಲ್ಲಿ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದೇನೆ ಎಮದು ಬರೆದುಕೊಂಡು ಅಪ್ಪ- ಅಮ್ಮನ ಜೊತೆ ವಿಮಾನದೊಳಗೆ ತೆಗೆದುಕೊಂಡಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಕನ್ನಡಿಗ ಗುರುವಿಗೆ ಅಭಿನಂದನೆ ಸಲ್ಲಿಸಿದ ಚಿನ್ನದ ಹುಡುಗ ನೀರಜ್ ಚೋಪ್ರಾ
Advertisement
Advertisement
ನೀರಜ್ ಟ್ವಿಟ್ಟರ್ ನಲ್ಲಿ ಈ ರೀತಿ ಪೋಸ್ಟ್ ಮಾಡುತ್ತಿದ್ದಂತೆಯೇ ಅವರ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆದವು. ಅಲ್ಲದೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ: ನೀರಜ್ ಚೋಪ್ರಾ ತರಬೇತಿಗಾಗಿ 7 ಕೋಟಿ ರೂ. ಖರ್ಚು ಮಾಡಿದ್ದ ಸರ್ಕಾರ
Advertisement
A small dream of mine came true today as I was able to take my parents on their first flight.
आज जिंदगी का एक सपना पूरा हुआ जब अपने मां – पापा को पहली बार फ्लाइट पर बैठा पाया। सभी की दुआ और आशिर्वाद के लिए हमेशा आभारी रहूंगा ???????? pic.twitter.com/Kmn5iRhvUf
— Neeraj Chopra (@Neeraj_chopra1) September 11, 2021
ಟೋಕಿಯೋ ಒಲಿಂಪಿಕ್ಸ್ ನ ಜಾವೆಲಿನ್ ಥ್ರೋ ವಿಭಾಗದಲ್ಲಿ ನೀರಜ್ ಚೋಪ್ರಾ ಚಿನ್ನ ಗೆದ್ದಿದ್ದಾರೆ. ನೀರಜ್ ಅವರ ಈ ಸಾಧನೆಯನ್ನು ಇಡೀ ಭಾರತ ಕೊಂಡಾಡಿದೆ. ಬರೋಬ್ಬರಿ 120 ವರ್ಷಗಳ ಬಳಿಕ ಅಥ್ಲೆಟಿಕ್ ನಲ್ಲಿ ಭಾರತಕ್ಕೆ ಚಿನ್ನ ತಂದುಕೊಡುವ ಮೂಲಕ 23 ವರ್ಷದ ನೀರಜ್ ಚೋಪ್ರಾ ಹೀರೋ ಆಗಿ ಮಿಂಚಿದ್ದಾರೆ. ನೀರಜ್ ಅವರ ಈ ಗೆಲುವನ್ನು ಅನೇಕ ಮಂದಿ ವಿವಿಧ ರೀತಿಯಲ್ಲಿ ಆಚರಿಸಿ ಸಂಭ್ರಮಿಸಿದ್ದರು. ಇದನ್ನೂ ಓದಿ: ನಾನು ಸಿಂಗಲ್, ಆಟದ ಮೇಲೆ ಮಾತ್ರ ನನ್ನ ಗಮನ: ನೀರಜ್ ಚೋಪ್ರಾ