ನವದೆಹಲಿ: ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾ (Neeraj Chopra), ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಮತ್ತು ಫುಟ್ಬಾಲ್ ದಂತಕಥೆ ಸುನಿಲ್ ಛೆಟ್ರಿ ಸೇರಿದಂತೆ 12 ಕ್ರೀಡಾಪಟುಗಳನ್ನು ಈ ಬಾರಿಯ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ (Khel Ratna) ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
Advertisement
ಪ್ಯಾರಾಲಿಂಪಿಕ್ಸ್ ಪದಕ ವಿಜೇತ, ಕನ್ನಡಿಗ ಐಎಎಸ್ ಅಧಿಕಾರಿ ಸುಭಾಶ್ ಯತಿರಾಜ್, ಕ್ರಿಕೆಟಿಗ ಶಿಖರ್ ಧವನ್ ಸೇರಿದಂತೆ 35 ಕ್ರೀಡಾಪಟುಗಳಿಗೆ ಅರ್ಜುನ ಅವಾರ್ಡ್ ಪ್ರಕಟಿಸಲಾಗಿದೆ. ಮೇಜರ್ ಧ್ಯಾನ್‍ಚಂದ್ ಖೇಲ್‍ರತ್ನ ಪ್ರಶಸ್ತಿಗೆ ಒಲಂಪಿಯನ್ ಅಥ್ಲಿಟ್ ನೀರಜ್ ಚೋಪ್ರಾ ಸೇರಿ 12 ಸಾಧಕರು ಭಾಜನರಾಗಿದ್ದಾರೆ. ಇದನ್ನೂ ಓದಿ: ಚಪ್ಪಲಿ ತೆಗೆದು ಅಭಿಮಾನಿಗಳಿಂದ ಅಪ್ಪುಗೆ ಅಂತಿಮ ನಮನ- ಬಿಬಿಎಂಪಿಯಿಂದ ರಾಶಿ ರಾಶಿ ಸ್ಲಿಪ್ಪರ್ಸ್ ತೆರವು
Advertisement
Advertisement
ಒಲಂಪಿಯನ್‍ಗಳಾದ ಕುಸ್ತಿಪಟು ರವಿ ಕುಮಾರ್ ದಹಿಯಾ, ಹಾಕಿ ಆಟಗಾರ ಶ್ರೀಜೇಶ್, ಮನ್‍ಪ್ರೀತ್ ಸಿಂಗ್, ಬಾಕ್ಸರ್ ಲವ್ಲಿನಾ, ಫುಟ್ಬಾಲ್ ಆಟಗಾರ ಸುನೀಲ್ ಚೆಟ್ರಿ, ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್, ಪ್ಯಾರಾ ಒಲಂಪಿಯನ್‍ಗಳಾದ ಬ್ಯಾಡ್ಮಿಂಟನ್ ಆಟಗಾರ ಪ್ರಮೋದ್ ಭಗತ್, ಜಾವೆಲಿನ್ ತ್ರೋ ಕ್ರೀಡಾಪಟು ಸುಮಿತ್ ಅಂಟಿಲ್, ಶೂಟರ್ ಅವನಿ ಲಖರಾ, ಬ್ಯಾಡ್ಮಿಂಟನ್ ಆಟಗಾರ ಕೃಷ್ಣ ನಗರ್ ಮತ್ತು ಮನೀಶ್ ನರ್ವಾಲ್‍ಗೆ ಖೇಲ್‍ರತ್ನ ಪಶಸ್ತಿ ಘೋಷಣೆ ಆಗಿದೆ. ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಯನ್ನು ನವೆಂಬರ್ 13ರಂದು ದೆಹಲಿಯಲ್ಲಿ ಪ್ರದಾನ ಮಾಡಲಾಗುತ್ತದೆ.