ಮಂಗಳೂರು: ಇತ್ತೀಚೆಗೆಷ್ಟೇ ಶೂಟಿಂಗ್ ವೇಳೆ ನಟ ಕೋಮಲ್ ಹಾಗೂ ಲೂಸ್ ಮಾದ ಗಾಯಗೊಂಡಿದ್ದು, ಇದೀಗ ಇಂತಹದ್ದೇ ಮತ್ತೊಂದು ಅಚಘಡ ಸಂಭವಸಿದೆ.
ಹೌದು. `ಗೋದ್ರಾ’ ಸಿನಿಮಾದ ಶೂಟಿಂಗ್ ವೇಳೆ ನಡೆದ ಅಪಘಾತದಲ್ಲಿ ನಟ ನೀನಾಸಂ ಸತೀಶ್ ಗಾಯಗೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿದ್ದ ಶೂಟಿಂಗ್ ವೇಳೆ ಸಾಹಸ ಮಾಡಲು ಹೋಗಿ ಈ ಅನಾಹುತ ಸಂಭವಿಸಿದೆ.
Advertisement
Advertisement
ಬಾಂಬ್ ಬ್ಲಾಸ್ಟ್ ಸೀನ್ ನಡೆಯುತ್ತಿದ್ದಾಗ ನಿನಾಸಂ ಸತೀಶ್ ಪಕ್ಕೆಲುಬಿಗೆ ಪೆಟ್ಟು ಬಿದ್ದಿದ್ದು, ಕೂಡಲೇ ಅವರನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
Advertisement
ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಟ ನೀನಾಸಂ ಸತೀಶ್, ಪಕ್ಕೆಲುಬಿಗೆ ಬಂದು ಜೋರಾಗಿ ಬಡಿದಿದ್ದರಿಂದ ಸ್ವಲ್ಪ ಜಾಸ್ತಿ ನೋವಿದೆ. ಒಂದೆರಡು ದಿನದಲ್ಲಿ ಸುಧಾರಿಸ್ತೀನಿ. ದೇವರ ದಯೆಯಿಂದ ದೊಡ್ಡ ಅನಾಹುತವೇನೂ ಆಗಿಲ್ಲ ಅಂತ ಹೇಳಿದ್ರು.
Advertisement
ಎರಡೂ ಕಡೆ ಬಾಂಬ್ ಇಟ್ಟಿದ್ದರು. ಒಟ್ಟಿನಲ್ಲಿ ಅದು ನೇರವಾಗಿ ಬರುತ್ತಿದ್ದರೆ ನನ್ನ ಮುಖಕ್ಕೆ ಹೊಡೆಯುತ್ತಿತ್ತು. ಇದರಿಂದ ನ್ನ ಕಣ್ಣು ಬ್ಲಾಸ್ಟ್ ಆಗುತ್ತಿತ್ತು. ದೇವರ ದಯೆಯಿಂದ ಹಾಗೂ ನಿಮ್ಮೆಲ್ಲರ ಪ್ರೀತಿ ವಿಶ್ವಾಸದಿಂದ ದೊಡ್ಡ ಅನಾಹುತದಿಂದ ಪಾರಾಗಿದ್ದೇನೆ ಎಂದರು.
ಏಟು ಬಿದ್ದ ತಕ್ಷಣ ಒಂದು ಅರ್ಧ ಗಂಟೆ ನನಗೆ ಕೂರಕ್ಕೂ ಆಗುತ್ತಿರಲಿಲ್ಲ. ನಿಲ್ಲಕ್ಕೂ ಆಗುತ್ತಿರಲಿಲ್ಲ. 3-4 ನಿಮಿಷವಂತೂ ನನಗೇನಾಗಿದೆ ಅಂತಾನೆ ಗೊತ್ತಾಗಿಲ್ಲ. ಇದರಲ್ಲಿ ಯಾರದ್ದೂ ತಪ್ಪಿಲ್ಲ. 20 ವರ್ಷ ಹಳೆಯ ಜೀಪಿನ ಗ್ಲಾಸ್ ಆಗಿದ್ದರಿಂದ ಈ ಅವಘಡ ಸಂಭವಿದೆ.
ಕ್ಲೈಮಾಕ್ಸ್ ಶೂಟ್ ಮಾಡೋ ಸಂದರ್ಭದಲ್ಲಿ ಇನ್ನೊಂದು ಕಡೆಯಿಂದ ಗನ್ ನಿಂದ ಶೂಟ್ ಮಾಡ್ತಾರೆ. ಈ ವೇಳೆ ಕಾರ್ ನ ಗ್ಲಾಸ್ ಗೆ ಬಾಂಬ್ ಇಟ್ಟಿದ್ದರು. ಇದರ ಮುಂದೆ ನಾನು ಕೂತಿದ್ದೆ. ಹೀಗಾಗಿ ಅವರು ಶೂಟ್ ಮಾಡಿದಾಗ ಆ ಗ್ಲಾಸ್ ಬ್ಲಾಸ್ಟ್ ಆಗಬೇಕಿತ್ತು. ಆದ್ರೆ ಅದು ಹಳೆಯ ಗ್ಲಾಸ್ ಆಗಿದ್ದರಿಂದ ಬಾಂಬ್ ಬಂದು ರಿವರ್ಸ್ ಹೊಡೆಯಿತು. ಹೀಗಾಗಿ ಮುಂದೆ ಕುಂತಿದ್ದ ನನ್ನ ಪಕ್ಕೆಲುಬಿಗೆ ಬಂದು ಬಡಿಯಿತು ಅಂತ ವಿವರಿಸಿದ್ರು.
ಗೋದ್ರಾ ಚಿತ್ರವನ್ನು ನಂದೀಶ್ ನಿರ್ದೇಶಿಸುತ್ತಿದ್ದು, ವಿನೋದ್ ಮಾಸ್ಟರ್ ಸಾಹಸ ನಿರ್ದೇಶಕರಾಗಿದ್ದಾರೆ.