ಬೆಂಗಳೂರು: ಪೊಲೀಸ್ ಮಹಾ ನಿರ್ದೇಶಕರ ಹುದ್ದೆಗೆ ನೀಲಮಣಿ ರಾಜು ಆಯ್ಕೆ ಆಗಿದ್ದು, ಈ ಮೂಲಕ ಈ ಹುದ್ದೆ ಏರಿದ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪೊಲೀಸ್ ಮಹಾನಿರ್ದೇಶಕ ದತ್ತಾ ಅವರ ಅಧಿಕಾರಾವಧಿ ಇಂದಿಗೆ(ಅಕ್ಟೋಬರ್ 31) ಮುಕ್ತಾಯವಾಗಲಿದ್ದು, ಈ ಹುದ್ದೆಗೆ ಹುದ್ದೆಗೆ ಹಿರಿತನದ ಆಧಾರದಲ್ಲಿ ನೀಲಮಣಿ ರಾಜು ಅವರ ಹೆಸರು ಮುಂದಿದ್ದ ಹಿನ್ನೆಲೆಯಲ್ಲಿ ಸರ್ಕಾರ ಅವರನ್ನೇ ಆಯ್ಕೆ ಮಾಡಿದೆ.
Advertisement
ಉತ್ತರಾಖಂಡ್ ಮೂಲದ ನೀಲಮಣಿ ರಾಜು ನೀಲಮಣಿ ರಾಜು ಅವರು 1983ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದು 23 ವರ್ಷಗಳ ಕಾಲ ಕೇಂದ್ರ ಸೇವೆಯಲ್ಲಿ ಸೇವೆ ಸಲ್ಲಿಸಿದ್ದರು. ಎಂಎ, ಎಂಬಿಎ, ಎಂ.ಫಿಲ್ ಪದವೀಧರೆಯಾಗಿರುವ ಇವರ ಸೇವಾವಧಿಯು 2020ರ ಜನವರಿ ತಿಂಗಳವರೆಗೆ ಇರಲಿದೆ.
Advertisement
ಸಂಜೆ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನಿರ್ಗಮಿಸುತ್ತಿರುವ ಪೊಲೀಸ್ ಮಹಾ ನಿರ್ದೇಶಕ ರೂಪಕ್ ಕುಮಾರ್ ದತ್ತ ಅವರು ನೀಲಮಣಿ ಅವರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ರಾಜ್ಯ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ.
Advertisement
ರಾಜ್ಯ ಪೊಲೀಸ್ ಮುಖ್ಯಸ್ಥ ಹುದ್ದೆಗೆ ಹಿರಿಯ ಐಪಿಎಸ್ ಅಧಿಕಾರಿ, ಕನ್ನಡಿಗ ಮೈಸೂರು ಮೂಲದ ಕಿಶೋರ್ ಚಂದ್ರ ಹಾಗೂ ಭ್ರಷ್ಟಾಚಾರ ನಿಗ್ರಹ ದಳ ಮುಖ್ಯಸ್ಥ ಎಂ.ಎನ್ ರೆಡ್ಡಿ ರೇಸ್‍ನಲ್ಲಿದ್ದರು.