ನವದೆಹಲಿ: ಶಾಲಾ – ಕಾಲೇಜು (School College) ತರಗತಿಗಳಲ್ಲಿ ಹಿಜಬ್ ನಿರ್ಬಂಧಿಸಿರುವುದು ಲಿಂಗ ಮತ್ತು ಧರ್ಮದ ತಾರತಮ್ಯವಾಗಿದೆ, ಇಂದಿನ ಶಿಕ್ಷಣದಲ್ಲಿ ಧಾರ್ಮಿಕ ಸಹಿಷ್ಣುತೆ ಬಗ್ಗೆ ತಿಳಿಸಿಕೊಡಬೇಕಿದೆ. ಆದರೆ ರಾಜ್ಯ ಸರ್ಕಾರದ (Karnataka Government) ಆದೇಶ ಅದಕ್ಕೆ ವಿರುದ್ಧವಾಗಿದೆ ಎಂದು ಹಿರಿಯ ವಕೀಲರಾದ ಮೀನಾಕ್ಷಿ ಅರೋರಾ ವಾದಿಸಿದ್ದಾರೆ.
Advertisement
ಶಾಲೆ ಮತ್ತು ಕಾಲೇಜುಗಳ ತರಗತಿಗಳಲ್ಲಿ ಹಿಜಬ್ ನಿಷೇಧಕ್ಕೆ ಸಂಬಂಧಿಸಿದಂತೆ ಹೈಕೋರ್ಟ್(High Court) ಆದೇಶ ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿ ಅರ್ಜಿಗಳನ್ನು ಸುಪ್ರೀಂಕೋರ್ಟ್(Supreme Court) ವಿಚಾರಣೆಗೆ ನಡೆಸುತ್ತಿದೆ. 6ನೇ ದಿನದ ವಿಚಾರಣೆ ವೇಳೆ ಮೀನಾಕ್ಷಿ ಅರೋರಾ ಮಕ್ಕಳ ಹಕ್ಕುಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಭಾರತವು CEDAW ನಿರ್ಣಯಗಳನ್ನು ಒಪ್ಪಿಕೊಂಡಿದೆ. CEDAW ಮಕ್ಕಳು ತಮ್ಮ ಧರ್ಮವನ್ನು ಆಚರಿಸಲು ಮತ್ತು ಅವರ ನಡುವಿನ ತಾರತಮ್ಯದ ವಿರುದ್ಧ ರಕ್ಷಿಸುತ್ತದೆ. ನಾರ್ವೆ ಕ್ರಿಶ್ಚಿಯನ್ ದೇಶವಾಗಿರುವುದರಿಂದ ತಮ್ಮ ಮಕ್ಕಳಿಗೆ ಕ್ರಿಶ್ಚಿಯನ್ ಮೌಲ್ಯಗಳನ್ನು ಮಾತ್ರ ಕಲಿಸಲು ಆಯ್ಕೆ ಮಾಡಿಕೊಂಡಿದೆ. ಆದರೆ CEDAW ಇದನ್ನು ಒಪ್ಪಿಕೊಂಡಿಲ್ಲ, ನೀವು ಮಕ್ಕಳಿಗೆ ಅವರ ಸ್ವಂತ ನಂಬಿಕೆಯನ್ನು ಅನುಸರಿಸಲು ಅನುಮತಿಸಬೇಕು ಎಂದು ಹೇಳಿದೆ. ಶಿಕ್ಷಣದಲ್ಲಿ ಸಂಪೂರ್ಣ ಧಾರ್ಮಿಕ ಸಹಿಷ್ಣುತೆ ತರುವುದು ಇದರ ಉದ್ದೇಶವಾಗಿದೆ. ಆದರೆ ನಾವು ನಮ್ಮ ಮಕ್ಕಳಿಗೆ ಧಾರ್ಮಿಕ ಸಹಿಷ್ಣುತೆ ಕಲಿಸುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
Advertisement
Advertisement
ಸಾರ್ವಜನಿಕ ಸುವ್ಯವಸ್ಥೆ ಹಾಗೂ ನೈತಿಕತೆಗೆ ವಿರುದ್ಧವಲ್ಲದ ಧಾರ್ಮಿಕ ಅಭಿವ್ಯಕ್ತಿಯ ಒಂದು ಅಂಶವನ್ನು ನಾವು ನಿಷೇಧಿಸಲು ಪ್ರಾರಂಭಿಸಿದರೆ ಹೇಗೆ? ಹಿಜಬ್ ನಿಷೇಧಿಸುವುದು ಸಂಪ್ರದಾಯವನ್ನು ಉಲ್ಲಂಘಿಸುತ್ತದೆ ಎಂದು ಯುಎನ್ ಸಮಿತಿಯು ಕಂಡುಕೊಂಡಿದೆ. ಡ್ರೆಸ್ ಕೋಡ್ ವಿದ್ಯಾರ್ಥಿಗಳು (Student Dress Code) ಶಾಲೆಗೆ ಬರುವುದನ್ನು ನಿಲ್ಲಿಸುವ ಬದಲು ಅವರ ಭಾಗವಹಿಸುವಿಕೆಯನ್ನು ಉತ್ತೇಜಿಸಬೇಕು ಎಂದು ಯುಎನ್ ಹೇಳುತ್ತದೆ. ಹಿಜಬ್ ಯಾವ ರೀತಿಯಲ್ಲಿ ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆಗೆ ಧಕ್ಕೆ ತರುತ್ತದೆ? ಯುಎನ್ (UN) ನಿರ್ಣಯಕ್ಕೆ ವ್ಯತಿರಿಕ್ತವಾಗಿ ಮಕ್ಕಳನ್ನು ಶಾಲೆಯಿಂದ ಹೊರಗಿಡಲಾಗುತ್ತಿದೆ. ಕೇಂದ್ರ ಸರ್ಕಾರ ಶಾಸನದ ವಿರುದ್ಧ ಸರ್ಕಾರಿ ಆದೇಶ ಮಾಡಲು ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ, ಕೇಂದ್ರೀಯ ವಿದ್ಯಾಲಯಗಳಲ್ಲಿ (Central Universities) ಹಿಜಬ್ ಅನ್ನು ಅನುಮತಿಸುವಾಗ ರಾಜ್ಯ ಸರ್ಕಾರ ಇದನ್ನು ಹೇಗೆ ನಿರ್ಬಂಧಿಸುತ್ತದೆ? ಎಂದು ಪ್ರಶ್ನಿದ್ದಾರೆ.
Advertisement
ಇಸ್ಲಾಂ ಪ್ರಪಂಚದಾದ್ಯಂತ ಆಚರಿಸಲಾಗುವ 2ನೇ ಅತಿದೊಡ್ಡ ಧರ್ಮವಾಗಿದೆ. ವಿಶ್ವದಲ್ಲಿ ಇಸ್ಲಾಂ ಧರ್ಮವನ್ನು ಅಭ್ಯಾಸ ಮಾಡುವ ಹೆಚ್ಚಿನ ಜನರು ಹಿಜಬ್ ಧರಿಸುವುದನ್ನು ಸಾಂಸ್ಕೃತಿಕ ಅಭ್ಯಾಸವೆಂದು ಗುರುತಿಸುತ್ತಾರೆ. ಪ್ರಪಂಚದಾದ್ಯಂತದ ನ್ಯಾಯಾಲಯಗಳು ಮತ್ತು ಜನಸಂಖ್ಯೆಯ ದೊಡ್ಡ ಭಾಗವು ಹಿಜಬ್ (Hijab) ಅನ್ನು ಅತ್ಯಗತ್ಯವೆಂದು ಗುರುತಿಸುತ್ತದೆ. ಇದನ್ನು ಪರಾಮರ್ಶಿಸಲು ನಾವು ಯಾರು? ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿರುವಂತೆ, ನಾವು ಬೇರೆಡೆ ಅಲ್ಪಸಂಖ್ಯಾತರಾಗಿದ್ದೇವೆ. ನಾವು ನಮ್ಮ ಸಂಸ್ಕೃತಿಯನ್ನು ಪಾಲಿಸಲು ಪ್ರಯತ್ನಿಸುತ್ತೇವೆ. ಅದಕ್ಕಾಗಿ ಕಾನೂನು ಹೋರಾಟ ಮಾಡಿದ ಹಲವು ಉದಾಹರಣೆಗಳೂ ಇವೆ. ಮೂಗುತಿಗಾಗಿ, ಸಿಖ್ಖರು ಖಡಗಕ್ಕಾಗಿ ಕಾನೂನು ಹೋರಾಟ ಮಾಡಿದ್ದಾರೆ. ದಯವಿಟ್ಟು ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸುವಂತೆ ಮನವಿ ಮಾಡಿದ್ದಾರೆ.
ಬಳಿಕ ಸಂವಿಧಾನ 15(1) ಉಲ್ಲೇಖಿಸಿ ವಾದ ಮಂಡಿಸಿದ ವಕೀಲೆ ಜಯನಾ ಕೊಠಾರಿ, ಸಂವಿಧಾನದ 15ನೇ ವಿಧಿಯ ಪ್ರಕಾರ ಧರ್ಮ, ಜನಾಂಗ, ಜಾತಿ, ಲಿಂಗ ಅಥವಾ ಜನ್ಮಸ್ಥಳದ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ, ಇಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ವಿಚಾರದಲ್ಲಿ ತಾರತಮ್ಯ ನಡೆಯುತ್ತಿದೆ. ಹಿಜಬ್ ಧಾರ್ಮಿಕ ಅಗತ್ಯ, ಅನಗತ್ಯವೂ ಪ್ರತ್ಯೇಕ ವಿಚಾರ, ಆದರೆ ಹಿಜಬ್ ಧರಿಸುವ ಕಾರಣ ವಿದ್ಯಾರ್ಥಿನಿಯರಲ್ಲಿ ತಾರತಮ್ಯ ಮಾಡುತ್ತಿರುವುದು ಸಂವಿಧಾನದ ಉಲ್ಲಂಘನೆಯಾಗಿದೆ. ಇದು ಕೇವಲ ಧರ್ಮಾಧಾರಿತ ತಾರತಮ್ಯವಲ್ಲ, ಇದು ಲಿಂಗಾಧಾರಿತ ತಾರತಮ್ಯವೂ ಆಗಿದೆ. ಹಾಗಾಗಿ ಲಿಂಗ ಮತ್ತು ಧರ್ಮವನ್ನು ಅನ್ನು ನಾವು ಈ ಸಂದರ್ಭದಲ್ಲಿ ವಿಶ್ಲೇಷಿಸಬೇಕಾಗಿದೆ ಎಂದು ವಾದ ಮಂಡಿಸಿದ್ದಾರೆ.
ಹಿಜಬ್ ಗುರುತಿನ ವಿಷಯವಾಗಿದೆ, ಸಾರ್ವಜನಿಕ ದೃಷ್ಟಿಯಿಂದ ತನ್ನ ದೇಹವನ್ನು ಮುಚ್ಚಿಟ್ಟುಕೊಳ್ಳುವುದು ಅವಳ ವೈಯಕ್ತಿಕ ಆಯ್ಕೆಯಾಗಿದೆ ಎಂದು ವಕೀಲ ಶೋಬ್ ಆಲಂ ವಾದಿಸಿದರು. ನಾವೀಲ್ಲಿ ಗೌಪ್ಯತೆ ಹಾಗೂ ಖಾಸಗಿತನಕ್ಕೂ ಆದ್ಯತೆ ನೀಡಬೇಕಾಗುತ್ತದೆ. ಹಿಜಬ್ ಧಾರ್ಮಿಕ ಅಗತ್ಯವೋ ಅಲ್ಲವೋ ಬಳಿಕ ಚಿಂತಿಸಬೇಕಿದೆ ಎಂದು ಸಲಹೆ ನೀಡಿದ್ದಾರೆ. ಮತ್ತೊರ್ವ ವಕೀಲ ಧಾರ್ ವಾದ ಮಂಡಿಸಿ, ಇಸ್ಲಾಂ ಪ್ರಕಾರ ಹಿಜಬ್ ಕಡ್ಡಾಯವಾಗಿದೆ ಎಂದು ಪೂರಕ ಅಂಶಗಳನ್ನು ಕೋರ್ಟ್ ಮುಂದಿಟ್ಟರು.
ಪ್ರಶಾಂತ ಭೂಷಣ್, ಕಪಿಲ್ ಸಿಬಲ್ ವಾದ ಆಲಿಸಿದ ಬಳಿಕ ದುಷ್ಯಂತ್ ದವೆಗೆ ವಾದ ಮಂಡಿಸಲು ಸಮಯ ಎಷ್ಟು ಬೇಕು? ಎಂದು ಪ್ರಶ್ನಿಸಿದರು. ದವೆ 4 ಗಂಟೆಗಳ ಸಮಯ ಕೇಳಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರಿದ್ದ ಪೀಠ ಸೋಮವಾರ ಮಧ್ಯಾಹ್ನ 2 ಗಂಟೆಗೆ ವಿಚಾರಣೆ ಮುಂದೂಡಿತು.