ಗಟ್ಟಿಯಾದ ಬ್ಲಾಂಕೆಟ್‌, ದಿಂಬು, ನೈಟ್ ಡ್ರೆಸ್ ಬೇಕು – ಜೈಲಲ್ಲಿರೋ ದರ್ಶನ್ ಹೊಸ ಬೇಡಿಕೆ

Public TV
1 Min Read
Darshan Pavithra Gowda 1

ರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿರೋ ದರ್ಶನ್ & ಗ್ಯಾಂಗ್‌ಗೆ ಸೆಪ್ಟೆಂಬರ್ 2 ಮಹತ್ವದ ದಿನವಾಗಿದೆ. ನಟ ದರ್ಶನ್ ಬಳ್ಳಾರಿ ಜೈಲಿಗೆ ಲಕ್ಷಣ್ ಶಿವಮೊಗ್ಗ ಜೈಲಿಗೆ, ನಾಗರಾಜ್ ಕಲಬುರಗಿ ಜಿಲ್ಲೆಗೆ ಶಿಫ್ಟ್ ಮಾಡುವಂತೆ ಕೋರಿದ್ದ ಅರ್ಜಿ ವಿಚಾರಣೆ ನಡೆಸಿದ 64ನೇ ಸಿಸಿಎಚ್ ಕೋರ್ಟ್ ವಿಚಾರಣೆಯನ್ನು ಸೆ.2ಕ್ಕೆ ಮುಂದೂಡಿದೆ.

ಜೈಲಾಧಿಕಾರಿಗಳ ಅರ್ಜಿಗೆ ದರ್ಶನ್ (Darshan), ಲಕ್ಷ್ಮಣ್‌, ನಾಗರಾಜ್ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದಾರೆ. ಜೈಲಿನಲ್ಲಿ ದರ್ಶನ್ ನರಕಯಾತನೆ ಅನುಭವಿಸ್ತಿದ್ದಾರೆ. 2 ಗಟ್ಟಿಯಾದ ಬ್ಲಾಂಕೆಟ್, 2 ದಿಂಬು ಮತ್ತು ಹೆಚ್ಚುವರಿ ಬಟ್ಟೆ ಮತ್ತು ನೈಟ್ ಡ್ರೆಸ್ ಬೇಕು ಅಂತ ದರ್ಶನ್ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಸರ್ಕಾರಿ ಪರ ವಕೀಲರಿಗೆ ಆಕ್ಷೇಪಣೆ ಕೋರಿದ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 2ಕ್ಕೆ ಮುಂದೂಡಿದೆ.

ಪ್ರಕರಣದ ಎ-1 ಆರೋಪಿ ಪವಿತ್ರಾ ಗೌಡ ಜಾಮೀನು ಕೋರಿಗೆ ಅರ್ಜಿ ಸಲ್ಲಿಸಿದ್ದಾರೆ. ಸದ್ಯ ಕೋರ್ಟ್ ಪವಿತ್ರಗೌಡ ಜಾಮೀನು ಅರ್ಜಿ ತೀರ್ಪನ್ನು ಸೆ.2ಕ್ಕೆ ಪ್ರಕಟಿಸಲಿದೆ. ಈ ಮಧ್ಯೆ, ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಮೆಂಟ್ ಮಾಡ್ತಿದ್ದು, ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಈಗಾಗಲೇ 6 ಟ್ವಿಟರ್ ಖಾತೆಗಳ ಬಗ್ಗೆ ಪರಿಶೀಲಿಸಿದ್ದಾರೆ. ಐಪಿ ಅಡ್ರೆಸ್ ಪತ್ತೆ ಜೊತೆಗೆ ಟ್ವಿಟರ್‌ಗೆ ಪೊಲೀಸರು ಪತ್ರ ಬರೆಯಲು ಮುಂದಾಗಿದ್ದಾರೆ.

Share This Article