ಮಂಗಳೂರು: ದುಷ್ಕರ್ಮಿಗಳ ದಾಳಿಗೆ ತುತ್ತಾಗಿ ಸಾವನ್ನಪ್ಪಿದ ಮಂಗಳೂರಿನ ಸುರಕ್ತಲ್ ಸಮೀಪದ ಕಾಟಿಪಳ್ಳದಲ್ಲಿ ದುಷ್ಕರ್ಮಿಗಳ ದಾಳಿಗೆ ತುತ್ತಾದ ದೀಪಕ್ ರಾವ್ ಕುಟುಂಬಕ್ಕೆ ಜನ ದೇಣಿಗೆಯನ್ನು ನೀಡುತ್ತಿದ್ದಾರೆ.
ರಾಜ್ಯ, ದೇಶ ವಿದೇಶದಿಂದ ನೆರವಿನ ಹಸ್ತ ಹರಿದುಬರುತ್ತಿದೆ. ವಿವಿಧ ಸಂಘಟನೆಗಳು, ವೈಯಕ್ತಿಕ ದೇಣಿಗೆ, ಆ್ಯಪ್ ಗಳ ಮೂಲಕ ಜನ ಧನ ಸಹಾಯ ಮಾಡುತ್ತಿದ್ದಾರೆ. ಇದನ್ನೂ ಓದಿ: ಒಂದೇ ದಿನದಲ್ಲಿ ದೀಪಕ್ ರಾವ್ ಕುಟುಂಬಕ್ಕೆ ಹರಿದುಬಂತು 17,43,859 ರೂ.!
Advertisement
ಕಳೆದ ಮೂರು ದಿನಗಳ ಹಿಂದೆ ದೀಪಕ್ ಗೆಳೆಯರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರು ಮಾಡಿದ್ದು ಬಹಳ ಪರಿಣಾಮಕಾರಿಯಾಗಿದೆ. ಈವರೆಗೆ ದೀಪಕ್ ತಾಯಿ ಪ್ರೇಮ ಅಕೌಂಟ್ ಗೆ ಬಿದ್ದಿರುವುದು 32 ಲಕ್ಷ ರುಪಾಯಿಗಳು. ಶುಕ್ರವಾರ ರಾತ್ರಿಯಷ್ಟೊತ್ತಿಗೆ 17 ಲಕ್ಷ ರೂಪಾಯಿ ಸಂಗ್ರಹವಾಗಿತ್ತು. ಶನಿವಾರ ರಾತ್ರಿಯವರೆಗೆ 32 ಲಕ್ಷ ರೂಪಾಯಿ ಸಂಗ್ರಹವಾಗಿದೆ.
Advertisement
Advertisement
ಘಟನೆ ಆಗುವ ಮೊದಲು ಎರಡೂವರೆ ಸಾವಿರ ರೂಪಾಯಿ ಪ್ರೇಮ ಅವರ ಖಾತೆಯಲ್ಲಿದ್ದ ಮೊತ್ತ. ಇದರ ಜೊತೆಗೆ ರಾಜ್ಯ ಸರ್ಕಾರ 5 ಲಕ್ಷ,ಜಿಲ್ಲಾಧಿಕಾರಿ ಪರಿಹಾರ ನಿಧಿಯಿಂದ 5 ಲಕ್ಷರುಪಾಯಿ ಕುಟುಂಬಕ್ಕೆ ಹಸ್ತಾಂತರವಾಗಿದೆ. ಚೆಕ್ಕನ್ನು ಇನ್ನೂ ಅಕೌಂಟಿಗೆ ಹಾಕಿಲ್ಲ. ಇದನ್ನು ಹೊರತುಪಡಿಸಿ ಬಿಜೆಪಿ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಒಟ್ಟು 52 ಲಕ್ಷ ರೂಪಾಯಿಯ ಆರ್ಥಿಕ ಸ್ಥೈರ್ಯ , ಧೈರ್ಯ ನೊಂದ ಕುಟುಂಬಕ್ಕೆ ಸಿಕ್ಕಿದೆ. ದೀಪಕ್‍ನ ನೂಂದ ಕುಟುಂಬಕ್ಕೆ ಎಲ್ಲಾ ಧರ್ಮದವರು ಸಹಾಯ ಹಸ್ತ ಚಾಚಿದ್ದಾರೆ. ಇಂದಿನವರೆಗೂ ಸಂದಾಯದ ಹಣ ಒಂದೂ ಕೋಟಿರೂಪಾಯಿಗೆ ತಲುಪಬಹುದು. ಇದನ್ನೂ ಓದಿ: ಇವತ್ಯಾಕೆ ಬಂದೆ..ನೀನ್ ಹೋಗು ಮೊದ್ಲು, ಚೆಕ್ ಬೇಡ ಏನು ಬೇಡ – ಶಾಸಕ ಬಾವಾಗೆ ದೀಪಕ್ ಕುಟುಂಬಸ್ಥರ ಬೈಯ್ಗುಳ
Advertisement
ಪ್ರೇಮ
ಸಿಂಡಿಕೇಟ್ ಬ್ಯಾಂಕ್ ಕಾಟಿಪಳ್ಳ- ಕೈಕಂಬ ಶಾಖೆ
ದ.ಕ ಜಿಲೆ
ಖಾತೆ ಸಂಖ್ಯೆ
01672030000810
ಕ್ಕೆ ಸಹಾಯಹಸ್ತ ನೀಡಬಹುದು. ಮನೆಯ ಸಾಲ, ಮೂಗ- ಕಿವುಡ ಸಹೋದರನ ಆರೋಗ್ಯದ ವೆಚ್ಚ, ತಾಯಿಯ ಜೀವನೋಪಾಯಕ್ಕೆ, ಈ ಮೊತ್ತ ವ್ಯಯಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
https://www.youtube.com/watch?v=h2ySxt7VrtE
https://www.youtube.com/watch?v=0iJpHrCbDbc