ನವದೆಹಲಿ: ಇಲ್ಲಿನ ಉದ್ಯೋಗ್ ವಿಹಾರ್ ಹಂತ 3 ಪ್ರದೇಶದಲ್ಲಿನ ನೈಟ್‌ಕ್ಲಬ್‌ನಲ್ಲಿ ಡ್ರಗ್ಸ್ (Drugs) ಸೇವಿಸಿದ ಆರೋಪದ ಮೇಲೆ ಒಟ್ಟು 288 ಜನರನ್ನು ವಶಕ್ಕೆ ಪಡೆಯಲಾಗಿದೆ.
ಮೂವರು ಕ್ಲಬ್ ಮಾಲೀಕರು, ಮೂವರು ಮ್ಯಾನೇಜರ್‌ಗಳು ಮತ್ತು ಇತರ ಸಿಬ್ಬಂದಿ ವಿರುದ್ಧ ಉದ್ಯೋಗ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜಂಟಿ ಪೊಲೀಸ್ ತಂಡವು ಉದ್ಯೋಗ್ ವಿಹಾರ್ ಹಂತ -3 ನಲ್ಲಿರುವ ಕಾಸಾ ಡಾಂಜಾ ಕ್ಲಬ್‌ನಲ್ಲಿ ಶನಿವಾರ ಮುಂಜಾನೆ 2 ಗಂಟೆ ಸುಮಾರಿಗೆ ದಾಳಿ ನಡೆಸಿತು ಎಂದು ದೆಹಲಿ (New Delhi) ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹೃದಯಾಘಾತದಿಂದ 16ರ ವಿದ್ಯಾರ್ಥಿನಿ ಸಾವು
Advertisement
Advertisement
ಡ್ರಗ್ಸ್ ಪ್ರಕರಣದಲ್ಲಿ ಯಾವುದೇ ಕಳ್ಳಸಾಗಣೆ ಪತ್ತೆಯಾಗಿಲ್ಲ. ಕ್ಲಬ್ ಅನ್ನು ಖಾಲಿ ಮಾಡಿಸಿದ ನಂತರ ಅಪರಾಧ ದೃಶ್ಯ ತಂಡವು ತೀವ್ರ ಶೋಧವನ್ನು ನಡೆಸಿತು ಎಂದು ಉದ್ಯೋಗ್ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಮನೋಜ್ ಕುಮಾರ್ ಹೇಳಿದ್ದಾರೆ.
Advertisement
14 ಡ್ರಗ್ಸ್ ಪ್ಯಾಕೆಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ನಾವು ರಕ್ತದ ಮಾದರಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸುತ್ತೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹುಡ್ಗೀರಿಗೆ ಬ್ಲ್ಯಾಕ್‌ಮೇಲ್ ಮಾಡ್ತಿದ್ದ 17ರ ಹುಡುಗ – ಮಗನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ ತಂದೆ
Advertisement
ರಕ್ತದ ಮಾದರಿ ವರದಿ ಬಂದ ನಂತರ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಸಿಪಿ ತಿಳಿಸಿದ್ದಾರೆ. ನೈಟ್ ಕ್ಲಬ್ ಮಾಲೀಕರು, ವ್ಯವಸ್ಥಾಪಕರು, ಸಿಬ್ಬಂದಿ ವಿರುದ್ಧ ಸೆಕ್ಷನ್ 21, 22, 25, 27ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k