ಚಾಮರಾಜನಗರ: ಚಾರ್ಮಾಡಿ ಘಾಟ್ (Charmadi Ghat). ತಣ್ಣನೆಯ ಗಾಳಿ. ಮುಗಿಲೆತ್ತರದ ಬೆಟ್ಟ-ಗುಡ್ಡ. ಸದಾ ನಿಂತಲ್ಲೇ ಮೈಮರೆಯೋ ಹಸಿರ ಜಗತ್ತು. ಚಾರ್ಮಾಡಿಯಂದ್ರೆ ಪ್ರವಾಸಿಗರು ನಿಂತಲ್ಲೇ ಕರಗಿ ಹೋಗ್ತಾರೆ. ಆದರೆ ಇತ್ತೀಚೆಗೆ ಚಿಕ್ಕಮಗಳೂರಿನ ಚಾರ್ಮಾಡಿ ಘಾಟ್ ಡೆತ್ ಚೇಂಬರ್ ಆಗುತ್ತಿದೆ. 2-3 ವರ್ಷಗಳಲ್ಲಿ 30ಕ್ಕೂ ಹೆಚ್ಚು ಶವಗಳು ಪತ್ತೆ ಆಗಿವೆ.
Advertisement
ಚಾರ್ಮಾಡಿ ಘಾಟ್ ಕರ್ನಾಟಕ ಸೇರಿದಂತೆ ಅಕ್ಕಪಕ್ಕದ ರಾಜ್ಯಗಳ ಕಳ್ಳ-ಕಾಕರಿಗೆ ಫೇವರೆಟ್. ಮುಗಿಲೆತ್ತರದ ಬೆಟ್ಟ-ಗುಡ್ಡಗಳ ಮಧ್ಯೆ ಸಾವಿರಾರು ಅಡಿಯ ಕಂದಕವಿರೋದು ಕೊಲೆಗಡುಕರಿಗೆ ವರದಾನ. ಚೆಕ್‍ಪೋಸ್ಟ್ (CheckPost) ನಲ್ಲಿ ಪೊಲೀಸ್ರು ವಾಹನಗಳನ್ನ ಚೆಕ್ ಮಾಡದಿರೋದು ಅವರಿಗೆ ಡಬಲ್ ಪ್ಲಸ್. ಕಳೆದ ನಾಲ್ಕೈದು ವರ್ಷದಲ್ಲಿ 25ಕ್ಕೂ ಹೆಚ್ಚು ಹೆಣಗಳನ್ನ ತಂದು ಬಿಸಾಕಿದ್ದಾರೆ. ಸ್ಥಳಿಯರು ಕೂಡ ಚಾರ್ಮಾಡಿಯ ಮಧ್ಯದಲ್ಲೇ ಸ್ಟೇಷನ್ ನಿರ್ಮಿಸಿ, ಪ್ರತಿಯೊಂದು ಗಾಡಿಯನ್ನ ಸಮಗ್ರವಾಗಿ ಚೆಕ್ ಮಾಡ್ಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ದೈವದ ಹೆಸರಿನಲ್ಲಿ ಮಹಿಳೆಗೆ ಮದುವೆ ಅಭಯ- ಜನಾಕ್ರೋಶದ ಬೆನ್ನಲ್ಲೇ ನರ್ತಕ ಪಲಾಯನ
Advertisement
Advertisement
ಪೊಲೀಸರ ಗಮನಕ್ಕೂ ಬಾರದೇ ಇಲ್ಲಿ ಎಷ್ಟು ಹೆಣಗಳು ಕರಗಿ ಇದೆಯೋ ಅಥವಾ ಪ್ರಾಣಿಗಳಿಗೆ ಆಹಾರವಾಗಿವೆಯೋ ಯಾರಿಗೂ ಗೊತ್ತಿಲ್ಲ. ಯಾಕಂದ್ರೆ ಇಲ್ಲಿ ಸಿಕ್ಕ ಶವಗಳಿಗಿಂತ ಮಣ್ಣಲ್ಲಿ ಕರಗಿದ ಶವಗಳೇ ಹೆಚ್ಚು. 9 ತಿಂಗಳ ಹಿಂದಿನ ಹೆಣ ಹುಡುಕಿಕೊಂಡು ಬಂದ ಬೆಂಗಳೂರು ಪೊಲೀಸರು ಮೂರು ದಿನ ಹುಡುಕಿ ಆಗಲ್ಲಪ್ಪಾ ಅಂತ ಬರಿಗೈಲಿ ವಾಪಸ್ ಹೋಗಿದ್ದಾರೆ. ಹಾಗಾಗಿ ಸ್ಥಳಿಯರು ಕೂಡ ಬೆಳ್ತಂಗಡಿ (Belathangady) ಯ ಚಾರ್ಮಾಡಿ ಗ್ರಾಮ ಹಾಗೂ ಮೂಡಿಗೆರೆಯ ಕೊಟ್ಟಿಗೆಹಾರ ಚೆಕ್ ಪೋಸ್ಟ್ (Kottigehara Checkpost) ನಲ್ಲಿ ಬಂದೋಬಸ್ತ್ ಮಾಡಬೇಕು. ಪ್ರತಿಯೊಂದು ಗಾಡಿಯನ್ನೂ ಚೆಕ್ ಮಾಡ್ಬೇಕು. ರಾತ್ರಿ ವೇಳೆಯೂ ಚಾರ್ಮಾಡಿಯಲ್ಲಿ ಗಸ್ತು ತಿರುಗಬೇಕು. ಆಗ ಮಾತ್ರ ಇಂತಹ ಪ್ರಕರಣ ಕಂಟ್ರೋಲ್‍ಗೆ ಬರೋಕೆ ಸಾಧ್ಯ ಅಂತಾರೆ ಸ್ಥಳೀಯರು.
Advertisement
ಚಾರ್ಮಾಡಿ ಘಾಟ್ ಕೇವಲ ಹಸಿರು ಕಾನನ ಜಲಪಾತಗಳ ಭೋರ್ಗರೆತದ ಶಬ್ಧ ಹಾಗೂ ವಾಹನಗಳ ಹಾರನ್ ಸೌಂಡ್ ಮಾತ್ರ ಕೇಳ್ತಿಲ್ಲ. ಜೊತೆಗೆ, ಅನಾಥ ಶವಗಳ ತಾಣಗಳಾಗ್ತಿದೆ. ಇನ್ನಾದ್ರೂ ಖಾಕಿಪಡೆ ಇಲ್ಲಿ ಹೈಅಲರ್ಟ್ ಘೋಷಿಸಿ ಕೊಲೆಗಡುಕರ ಅಟ್ಟಹಾಸಕ್ಕೆ ಬ್ರೇಕ್ ಹಾಕಬೇಕಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k