ಟೆಲ್ ಅವಿವ್: ಇಸ್ರೇಲ್ ಮೇಲೆ ಪ್ಯಾಲೆಸ್ಟೈನ್ ಹಮಾಸ್ ಉಗ್ರರ ಅಟ್ಟಹಾಸ (Israel-Gaza War) ಮುಂದುವರಿದಿದೆ. ಇಸ್ರೇಲ್ ಮೇಲೆ ನಡೆಸಿದ 5 ಸಾವಿರ ರಾಕೆಟ್ ದಾಳಿಯಲ್ಲಿ ಎರಡೂ ಕಡೆ ಸುಮಾರು 1 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಹಮಾಸ್ ಉಗ್ರರ ದಾಳಿಗೆ ಇಸ್ರೇಲ್‌ನಲ್ಲಿ 600ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರೆ, ಇಸ್ರೇಲ್ ನಡೆಸಿದ ಪ್ರತಿದಾಳಿಗೆ ಗಾಜಾಪಟ್ಟಿಯಲ್ಲಿ ಕನಿಷ್ಠ 370 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಈ ಬೆನ್ನಲ್ಲೇ ಲೆಬನಾನ್‌ನ ಹೆಜ್ಬುಲ್ಲಾ ಭಯೋತ್ಪಾದಕ ಸಂಘಟನೆ ಕೂಡ ಯಹೂದಿ ರಾಷ್ಟ್ರದ ಮೇಲೆ ರಾಕೆಟ್, ಶೆಲ್ ದಾಳಿ (Missiles Attack) ಆರಂಭಿಸಿದೆ. ಎರಡೂ ಕಡೆಯಲ್ಲೂ ಇಸ್ರೇಲ್ ಪ್ರತಿದಾಳಿ ನಡೆಸುತ್ತಿದ್ದು, ಪ್ಯಾಲೆಸ್ಟೈನ್ (Palestinian) ಕೂಡ ತತ್ತರಿಸಿ ಹೋಗಿದೆ. ಗಾಜಾಪಟ್ಟಿ, ಟೆಲ್ ಟವೀವ್ ಸ್ಮಶಾನ ಸದೃಶವಾಗಿ ಮಾರ್ಪಟ್ಟಿವೆ. ಹಮಾಸ್ ಪ್ರಧಾನ ಕಚೇರಿ ನಾಶ ಮಾಡಿದ ಇಸ್ರೇಲ್ 400ಕ್ಕೂ ಹೆಚ್ಚು ಉಗ್ರರನ್ನ ಕೊಂದಿರೋದಾಗಿ ಹೇಳಿಕೊಂಡಿದೆ. ಇದನ್ನೂ ಓದಿ: Bigg Boss Kannada 10: ಕಿರುತೆರೆ ನಟ ಸ್ನೇಹಿತ್ ಗೌಡ 2ನೇ ಸ್ಪರ್ಧಿಯಾಗಿ ದೊಡ್ಮೆನೆಗೆ ಎಂಟ್ರಿ
ಪ್ಯಾಲೆಸ್ಟೈನ್ ಪ್ರಕಾರ ಕನಿಷ್ಠ 370 ಮಂದಿ ಪ್ಯಾಲಿಸ್ತೇನಿಗಳು ಸಾವನ್ನಪ್ಪಿದ್ದು, 2000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹಮಾಸ್ ದಾಳಿಯಲ್ಲಿ 600ಕ್ಕೂ ಹೆಚ್ಚು ಇಸ್ರೇಲಿಗಳು ಸಾವನ್ನಪ್ಪಿದ್ದು, 2000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈವರೆಗೂ ಎರಡು ಕಡೆಯೂ ಕನಿಷ್ಠ 1,000ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಗಡಿ ದಾಟುವ ಮೂಲಕ, ಪ್ಯಾರಾ ಗ್ಲೈಡಿಂಗ್ ಮೂಲಕ ಇಸ್ರೇಲ್‌ಗೆ ನುಗ್ಗಿದ ನೂರಾರು ಹಮಾಸ್ ಉಗ್ರರನ್ನು ಇಸ್ರೇಲ್ ಸೇನೆ ವಶಕ್ಕೆ ಪಡೆದಿದೆ. ಇದಕ್ಕೆ ಪ್ರತಿಯಾಗಿ ಹಮಾಸ್ ಕೂಡ ಕನಿಷ್ಠ 100 ಮಂದಿ ಇಸ್ರೇಲ್ ಸೈನಿಕರು, ಮಕ್ಕಳು, ಮಹಿಳೆಯರು ಸೇರಿ ನಾಗರಿಕರನ್ನು ಅಪಹರಿಸಿ ಒತ್ತೆಯಾಳಾಗಿ ಇರಿಸಿಕೊಂಡಿದೆ. ಇದನ್ನೂ ಓದಿ: Bigg Boss Kannada 10 : ಕಣ್ಣೀರಿಡುತ್ತಲೇ ದೊಡ್ಮನೆಗೆ ಕಾಲಿಟ್ಟ 3ನೇ ಸ್ಪರ್ಧಿ ರ‍್ಯಾಪರ್ ಇಶಾನಿ
ಇಸ್ರೇಲ್‌ನ 22 ಪಟ್ಟಣ, ನಗರಗಳಲ್ಲಿ ಹಮಾಸ್ ಉಗ್ರರು ಮತ್ತು ಇಸ್ರೇಲಿ ಸೈನಿಕರ ನಡುವೆ ರಣಭೀಕರ ಕದನ ನಡೆಯುತ್ತಿದೆ. ಕ್ಷಣಕ್ಷಣಕ್ಕೂ ಪರಸ್ಪರ ದಾಳಿಗಳು ಭೀಕರ ಸ್ವರೂಪ ಪಡೆಯುತ್ತಿದ್ದು, ಸಾವು ನೋವು ಹೆಚ್ಚುತ್ತಿದೆ. ಬೃಹತ್ ಕಟ್ಟಡಗಳು ಕಣಮಾತ್ರದಲ್ಲಿ ಧ್ವಂಸವಾಗುತ್ತಿವೆ. ಯುದ್ಧದ ಕಾರಣ ಭಾರತ ಅಕ್ಟೋಬರ್ 14 ರ ವರೆಗೂ ವಿಮಾನ ಸೇವೆ ರದ್ದು ಮಾಡಿದೆ. ಅಮೆರಿಕ ಹಣದಿಂದ ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದೆ ಎಂದು ಡೊನಾಲ್ಡ್ ಟ್ರಂಪ್ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: Bigg Boss Kannada10 : ಬಿಗ್ ಬಾಸ್ ಶುರುವಾಗುವ ಮುನ್ನವೇ ಶಾಕ್ ಕೊಟ್ಟ ಕಿಚ್ಚ ಸುದೀಪ್
Web Stories