ಬರ್ಮಿಂಗ್ ಹ್ಯಾಂ: ಈ ಭಾನುವಾರ ಮತ್ತೆ ಟೀಂ ಇಂಡಿಯಾ ಪಾಕ್ ಹಣಾಹಣಿ ನಡೆಯಲಿದೆ. ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಬಾಂಗ್ಲಾದೇಶದ ವಿರುದ್ಧ 9 ವಿಕೆಟ್ ಗಳ ಭರ್ಜರಿ ಜಯವನ್ನು ಸಾಧಿಸಿದೆ.
265 ರನ್ ಟಾರ್ಗೆಟ್ ಬೆನ್ನತ್ತಿದ ಟೀ ಇಂಡಿಯಾಗೆ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಮೊದಲ ವಿಕೆಟ್ ಗೆ 88 ಎಸೆತಗಳಲ್ಲಿ 87 ರನ್ ಗಳ ಭದ್ರ ಬುನಾದಿ ಹಾಕಿ ಕೊಟ್ಟರು.
Advertisement
14.4ನೇ ಓವರ್ ನಲ್ಲಿ ಮುಷ್ರಫೆ ಮೊರ್ತಜಾ ಎಸೆತಕ್ಕೆ ಶಿಖರ್ ಧವನ್ ಔಟಾದರು. 34 ಎಸೆತಗಳಲ್ಲಿ ಧವನ್ 7 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 46 ರನ್ ಗಳಿಸಿದ್ದರು.
Advertisement
ನಂತರ ಕೊಹ್ಲಿ ಮತ್ತು ರೋಹಿತ್ ಶರ್ಮಾ ಜುಗಲ್‍ಬಂದಿ ಆಟದ ಮುಂದೆ ಬಾಂಗ್ಲಾ ಬೌಲರ್ ಗಳ ಆಟ ನಡೆಯಲಿಲ್ಲ. ಮುರಿಯದ ಎರಡನೇ ವಿಕೆಟ್‍ಗೆ 153 ಎಸೆತಗಳಲ್ಲಿ 178 ರನ್‍ಗಳ ಜೊತೆಯಾಟವಾಡಿ ಭಾರತವನ್ನು ಫೈನಲ್‍ಗೆ ತಲುಪಿಸಿದರು.
Advertisement
111 ಎಸೆತಗಳಲ್ಲಿ 11ನೇ ಶತಕ ಹೊಡೆದ ರೋಹಿತ್ ಶರ್ಮಾ ಅಂತಿಮವಾಗಿ 123 ರನ್(129 ಎಸೆತ, 15 ಬೌಂಡರಿ, 1ಸಿಕ್ಸರ್) ಸಿಡಿಸಿದರೆ ವಿರಾಟ್ ಕೊಹ್ಲಿ 96 ರನ್(78 ಎಸೆತ,13 ಬೌಂಡರಿ)ಹೊಡೆಯುವ ಮೂಲಕ ಅಜೇಯರಾಗಿ ಉಳಿದರು.
Advertisement
ಟಾಸ್ ಗೆದ್ದ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ಕೆ ಮಾಡಿದರು. ಮೊದಲ ಓವರ್ ನಲ್ಲೇ ಭಾರತಕ್ಕೆ ಭುವನೇಶ್ವರ್ ಕುಮಾರ್ ಶುಭಾರಂಭ ಮಾಡಿದರು.
ಮೊದಲ ಓವರ್ ನ ಕೊನೆಯ ಎಸೆತದಲ್ಲೇ ಸೌಮ್ಯ ಸರ್ಕಾರನ್ನು ಬೌಲ್ಡ್ ಮಾಡಿದರು. ನಂತರ ಸಬೀರ್ ರಹ್ಮಾನ್ ಭುವನೇಶ್ವರ್ ಕುಮಾರ್ ಗೆ ಎರಡನೇ ಬಲಿಯಾದರು. 3ನೇ ವಿಕೆಟ್ ಗೆ ತಮೀಮ್ ಇಕ್ಬಾಲ್ ಹಾಗೂ ಮುಷ್ಫಿಖುರ್ ರಹೀಮ್ ಉತ್ತಮ ಜೊತೆಯಾಟ ನೀಡಿದರು. ಈ ವೇಳೆ ಜಾಧವ್ ತಮೀಮ್ ಇಕ್ಬಾಲ್ ರನ್ನು ಬೌಲ್ಡ್ ಮಾಡಿ ಬಾಂಗ್ಲಾದೇಶದ ರನ್ ಬೇಟೆಗೆ ಕಡಿವಾಣ ಹಾಕಿದರು. ಬಳಿಕ ನಿರಂತರವಾಗಿ ಬಾಂಗ್ಲಾ ವಿಕೆಟ್ ಗಳು ಉರುಳುತ್ತಲೇ ಹೋದವು.
ಬಾಂಗ್ಲಾ ಪರವಾಗಿ ಶಕೀಬ್ ಅಲ್ ಹಸನ್ 15, ಮಹ್ಮದುಲ್ಲಾ 21, ಮೊಸಾದ್ದಿಕ್ ಹುಸೇನ್ 15, ಮಶ್ರಫೆ ಮೊರ್ತಜಾ 30, ತಸ್ಕೀನ್ ಅಹ್ಮದ್ 10 ರನ್ ಗಳಿಸಿದರು.
ಟೀ ಇಂಡಿಯಾ ಪರವಾಗಿ ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಕೇದಾರ್ ಜಾಧವ್ ತಲಾ 2 ವಿಕೆಟ್ ಪಡೆದರೆ ರವೀಂದ್ರ ಜಡೇಜಾ 1 ವಿಕೆಟ್ ಪಡೆದರು.
ಬಾಂಗ್ಲಾದೇಶ ರನ್ ಏರಿದ್ದು ಹೇಗೆ?
50 ರನ್ 12.1 ಓವರ್
100 ರನ್ 18.5 ಓವರ್
150 ರನ್ 26.2 ಓವರ್
200 ರನ್ 39.3 ಓವರ್
250 ರನ್ 48.1 ಓವರ್
264 ರನ್ 50 ಓವರ್
ಭಾರತತ ರನ್ ಏರಿದ್ದು ಹೇಗೆ?
50 ರನ್ 7.5 ಓವರ್
100 ರನ್ 16.2 ಓವರ್
150 ರನ್ 22.5 ಓವರ್
200 ರನ್ 31.4 ಓವರ್
250 ರನ್ 38.1 ಓವರ್
265 ರನ್ 40.1 ಓವರ್