– ಹಾವನ್ನ ತಂತಿಯಂತೆ ಕಟ್ಟಿದ ಗ್ರಾಮಸ್ಥರು
ಜಕಾರ್ತಾ: ಸೆಕ್ಯೂರಿಟಿ ಗಾರ್ಡ್‍ವೊಬ್ಬರು 23 ಅಡಿ ಉದ್ದದ ಹೆಬ್ಬಾವಿನ ಜೊತೆ ಹೋರಾಡಿ ಬದುಕಿರುವ ಅಚ್ಚರಿ ಸಂಗತಿ ಇಂಡೋನೇಷ್ಯಾದ ರಿಯು ಪ್ರಾಂತ್ಯದಲ್ಲಿ ನಡೆದಿದೆ.
37 ವರ್ಷದ ಸೆಕ್ಯೂರಿಟಿ ಗಾರ್ಡ್ ರಾಬರ್ಟ್ ನಬಾಬನ್ ಹೆಬ್ಬಾವಿನೊಂದಿಗೆ ಹೋರಾಡಿ ಅದನ್ನು ಸಾಯಿಸಿದ್ದಾರೆ. ಆದ್ರೆ ಈ ವೇಳೆ ಹೆಬ್ಬಾವು ಅವರ ತೋಳಿಗೆ ಕಚ್ಚಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.
Advertisement
Advertisement
ನಬಾಬನ್ ಇಲ್ಲಿನ ಇಂದ್ರಗಿರಿ ಹುಲು ರಿಜೆನ್ಸಿ ಪ್ರದೇಶದಲ್ಲಿರುವ ಪಾಮ್ ಆಯಿಲ್ ತೋಟದಲ್ಲಿ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದರು. ಅವರು ಕೆಲಸ ಮುಗಿಸಿ ಪಾದಚಾರಿ ಮಾರ್ಗದಲ್ಲಿ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ರಸ್ತೆ ದಾಟಲಾಗದಂತೆ ದೈತ್ಯ ಹೆಬ್ಬಾವು ಅಡ್ಡಗಟ್ಟಿದ್ದನ್ನು ನೋಡಿದ್ದರು.
Advertisement
ನಂತರ ನಬಾಬನ್ ಮುಂದೆ ಹೋಗಿ ಹೆಬ್ಬಾವಿನೊಂದಿಗಿನ ಕಾಳಗದಲ್ಲಿ ಸಿಲುಕಿದ್ರು. ಈ ವೇಳೆ ಹೆಬ್ಬಾವು ನಬಾಬನ್ ಅವರ ತೋಳಿಗೆ ಕಚ್ಚಿತ್ತು. ಸ್ವಲ್ಪ ಸಮಯ ಹಾವಿನೊಂದಿಗೆ ಗುದ್ದಾಡಿದ ನಬಾಬನ್ ಕೊನೆಗೂ ಅದನ್ನ ಕೊಂದಿದ್ದಾರೆ.
Advertisement
ಮಾರಣಾಂತಿಕ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿರುವ ನಬಾಬನ್ ಈ ಬಗ್ಗೆ ಮಾತನಾಡಿದ್ದು, ನಾನು ಹಾವನ್ನು ಹಿಡಿಯಲು ಪ್ರಯತ್ನಿಸಿದೆ. ಆದರೆ ಅದು ನನ್ನ ತೋಳಿಗೆ ಕಚ್ಚಿತ್ತು. ಸ್ವಲ್ಪ ಸಮಯದವರೆಗೆ ನಾನು ಹಾವಿನೊಂದಿಗೆ ಹೋರಾಡಿದೆ ಎಂದು ಹೇಳಿದ್ದಾರೆ.
ನಬಾಬನ್ ಸಾಯಿಸಿದ ಹೆಬ್ಬಾವನ್ನು ಗ್ರಾಮದಲ್ಲಿ ಬಟ್ಟೆ ಒಣಗಲು ಹಾಕುವ ತಂತಿಯಂತೆ ಕಟ್ಟಲಾಗಿದೆ. ಹಾವಿನ ಬಾಲದ ಮೇಲೆ ಮಕ್ಕಳು ಆಟವಾಡುತ್ತಿರೋ ಫೋಟೋಗಳು ಮೈ ಜುಮ್ಮೆನಿಸುವಂತಿವೆ.
ಕಳೆದ ಮಾರ್ಚ್‍ನಲ್ಲಿ ಇದೇ ರೀತಿಯ ಘಟನೆ ನಡೆದ ಬಗ್ಗೆ ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ದೈತ್ಯ ಹಾವಿನೊಂದಿಗೆ ಸೆಣಸಿದ ವ್ಯಕ್ತಿಯ ಮೃತದೇಹ ಹಾವಿನ ಹೊಟ್ಟೆಯಲ್ಲಿ ಪತ್ತೆಯಾಗಿತ್ತು ಎಂದು ವರದಿಯಾಗಿದೆ.