ಎನ್‍ಡಿಎಮ್‍ಸಿ ಅಧಿಕೃತ ಬಳಕೆಗೆ ಇ-ವಾಹನ ಖರೀದಿ

Public TV
1 Min Read

ನವದೆಹಲಿ: ನವದೆಹಲಿ ಮುನ್ಸಿಪಲ್ ಕೌನ್ಸಿಲ್(ಎನ್‍ಡಿಎಮ್‍ಸಿ) ಅಧಿಕೃತ ಬಳಕೆಗೆ ಎಲೆಕ್ಟ್ರಿಕ್ ವಾಹನ ಖರೀದಿಸುವುದಾಗಿ ಘೋಷಿಸಿದೆ.

ಪೆಟ್ರೋಲ್ ಹಾಗೂ ಸಿಎನ್‍ಜಿ ವಾಹನಗಳನ್ನು ಖರೀದಿಸುವುದು ಹಾಗೂ ಬಾಡಿಗೆ ಪಡೆಯುವುದನ್ನು ನಿಲ್ಲಿಸಲು ಕೌನ್ಸಿಲ್ ನಿರ್ಧರಿಸಿದೆ. ಈ ಮೂಲಕ ಪರಿಸರ ಸ್ನೇಹಿ ನಿಯಮಗಳನ್ನು ಅಳವಡಿಸಿಕೊಳ್ಳುವುದಾಗಿ ತಿಳಿಸಿದೆ.

ಎನ್‍ಡಿಎಮ್‍ಸಿ ಪ್ರದೇಶಗಳಲ್ಲಿ ದೆಹಲಿಯಲ್ಲಿಯೇ ಅತೀ ಹೆಚ್ಚಿನ ವಿದ್ಯುತ್ ಚಾರ್ಜಿಂಗ್ ಕೇಂದ್ರಗಳನ್ನು ಹೊಂದಿವೆ. ನವದೆಹಲಿ ಪ್ರದೇಶದಲ್ಲಿ 60 ಚಾರ್ಜಿಂಗ್ ಸ್ಟೇಷನ್‍ಗಳಿವೆ. ಅವುಗಳಲ್ಲಿ 30-35 ಸ್ಟೇಷನ್‍ಗಳು ಎನ್‍ಡಿಎಂಸಿ ಕಟ್ಟಡಗಳಲ್ಲಿ ಇವೆ. ಎನ್‍ಡಿಎಮ್‍ಸಿ 80 ಎಲೆಕ್ಟ್ರಿಕ್ ಕಾರುಗಳನ್ನು ಹೊಂದಿದೆ ಹಾಗೂ ಇಲಾಖೆಯ ಮುಖ್ಯಸ್ಥರಿಗೆ ಹೆಚ್ಚಿನ ಸಂಖ್ಯೆಯ ವಾಹನಗಳನ್ನು ಹಂಚಲಾಗಿದೆ. ಇದನ್ನೂ ಓದಿ: ಭಾರತದ UPI ವ್ಯವಸ್ಥೆ ಅಳವಡಿಸಿಕೊಂಡ ನೇಪಾಳ

ndmc 2

ನಾವು ಸಂಪೂರ್ಣ ಹಸಿರು ಬಳಕೆಗೆ ಬದಲಾಗಲು ನಿರ್ಧರಿಸಿದ್ದೇವೆ. ಮುಂದಿನ ದಿನಗಳಲ್ಲಿ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾಲಿನ್ಯವನ್ನು ಕಡಿಮೆ ಮಾಡುವುದು ನಮ್ಮ ಉದ್ದೇಶ. ಇದೀಗ ಅಧಿಕೃತ ಬಳಕೆಗೂ ಖರೀದಿಸಲಾಗುತ್ತಿರುವ ವಾಹನಗಳು ಇ-ವಾಹನಗಳೇ ಆಗಿರಲಿವೆ ಎಂದು ಎನ್‍ಡಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಕುಟುಂಬ ಮಣಿಪುರವನ್ನು ಎಟಿಎಂ ಆಗಿ ಬಳಸಿದೆ: ಸ್ಮೃತಿ ಇರಾನಿ

ಮುನ್ಸಿಪಲ್ ಕೌನ್ಸಿಲ್ 300 ಇ-ಸ್ಕೂಟರ್‍ಗಳನ್ನು ಖರೀದಿಸುವುದಾಗಿ ಘೋಷಿಸಿದೆ. ಇವು ದೆಹಲಿಯ ಮೆಟ್ರೋ ನಿಲ್ದಾಣ, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ ಹಾಗೂ ಹೆಚ್ಚಿನ ಜನಸಂದಣಿ ಇರುವ ಸಾರ್ವಜನಿಕ ಪ್ರದೇಶಗಳಲ್ಲಿ ಬಾಡಿಗೆಗೆ ಲಭ್ಯವಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *