ಇಸ್ಲಾಮಾಬಾದ್: ಭಾರತದ ಬೌಲಿಂಗ್ (Team India Bowling) ಯಾವಾಗ್ಲೂ ಕಳಪೆಯಾಗಿರುತ್ತೆ. ಟೀಂ ಇಂಡಿಯಾ ಬೌಲಿಂಗ್‌ನಲ್ಲಿ ಅಟ್ಯಾಕ್ ಮಾಡುತ್ತೆ ಅಂತಾ ನನಗೆ ಅನ್ನಿಸಲ್ಲ. ಹಾಗಾಗಿ ನಾವು ತಲೆ ಕೆಡಿಸಿಕೊಳ್ಳಲ್ಲ ಎಂದು ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ಸಾಯಿದ್ ಅಜ್ಮಲ್ (Saeed Ajmal) ವ್ಯಂಗ್ಯವಾಡಿದ್ದಾರೆ.
ಇದೇ ಮೊದಲಬಾರಿಗೆ ಭಾರತ ಪೂರ್ಣ ಆತಿಥ್ಯದಲ್ಲಿ ವಿಶ್ವಕಪ್ ಟೂರ್ನಿ (ICC WorldCup) ಆಯೋಜಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಅಕ್ಟೋಬರ್ 15ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನ (Pakistan) ಸೆಣಸಲಿದೆ. ಈಗಾಗಲೇ ವಿಶ್ವಕಪ್ ಟೂರ್ನಿ ವೇಳಾಪಟ್ಟಿ ನಿಗದಿಯಾಗಿದ್ದು, ಭಾರತದ 5 ಪ್ರಮುಖ ನಗರಗಳಲ್ಲಿ ಪಾಕ್ ತಂಡ 9 ಪಂದ್ಯಗಳನ್ನಾಡಲಿದೆ. ಈ ನಡುವೆ ಟೀಂ ಇಂಡಿಯಾ ಬೌಲಿಂಗ್ ಪ್ರದರ್ಶನದ ಬಗ್ಗೆ ಅಜ್ಮಲ್ ಮಾತನಾಡಿದ್ದಾರೆ.
ಪಾಕ್‌ನ ಪಾಡ್‌ಕಾಸ್ಟ್ ಸಂದರ್ಶನದಲ್ಲಿ ಮಾತನಾಡಿದ ಅಜ್ಮಲ್, ಉನ್ನತ ಮಟ್ಟದ ಪಂದ್ಯಗಳಲ್ಲಿ ಪಾಕಿಸ್ತಾನಿ ಬ್ಯಾಟರ್‌ಗಳಿಗೆ ಸವಾಲು ಹಾಕುವ ಬೌಲಿಂಗ್ ದಾಳಿಯನ್ನು ಭಾರತ ಹೊಂದಿದೆ ಎಂದು ನಿಮಗನ್ನಿಸುತ್ತಾ? ಎಂಬ ಪ್ರಶ್ನೆಗೆ ಹೀಗೆ ಉತ್ತರಿಸಿದ್ದಾರೆ. ಇದನ್ನೂ ಓದಿ: ಕೊಹ್ಲಿ ಮತ್ತು ಬಾಬರ್ ಇಬ್ಬರಲ್ಲಿ ಯಾರು ಶ್ರೇಷ್ಠ? – ಭಜ್ಜಿ ಪ್ರಶ್ನೆಗೆ ಶಾಕಿಂಗ್ ಉತ್ತರ ಕೊಟ್ಟ ಅಖ್ತರ್
ಟೀಂ ಇಂಡಿಯಾದ ಬೌಲಿಂಗ್ ವಿಭಾಗ ಯಾವಾಗಲೂ ದುರ್ಬಲವಾಗಿದೆ. ಇತ್ತೀಚೆಗೆ ಮೊಹಮ್ಮದ್ ಸಿರಾಜ್, ಶಮಿ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಸ್ಪಿನ್ನರ್‌ಗಳಲ್ಲಿ ರವೀಂದ್ರ ಜಡೇಜಾ ಫಾರ್ಮ್‌ನಲ್ಲಿದ್ದು ವಿಶ್ವಕಪ್‌ನಲ್ಲಿ ನಿರ್ಣಾಯಕರಾಗುತ್ತಾರೆ ಎಂದು ಭಾವಿಸುತ್ತೇನೆ. ಜಸ್ಪ್ರೀತ್ ಬುಮ್ರಾ ಪಾಕಿಸ್ತಾನಕ್ಕೆ ಬೆದರಿಕೆಯೊಡ್ಡಬಹುದಿತ್ತು. ಆದ್ರೀಗ ಅವರೂ ಅನ್‌ಫಿಟ್ ಆಗಿದ್ದಾರೆ. ಹಾಗಾಗಿ ಭಾರತದ ಬೌಲಿಂಗ್ ಪಾಕಿಸ್ತಾನಕ್ಕೆ ಹೆಚ್ಚು ಅಪಾಕಾರಿ ಎಂದು ಭಾವಿಸಬೇಡಿ ಎಂದಿದ್ದಾರೆ.
ಇನ್ನೂ ವಿಶ್ವಕಪ್‌ನಲ್ಲಿ ಇಂಡೋ-ಪಾಕ್ ಕದನದ ಬಗ್ಗೆ ಮಾತನಾಡಿದ ಅಜ್ಮಲ್, ಬಾಬರ್ ಆಜಂ ನೇತೃತ್ವದ ಪಾಕಿಸ್ತಾನ ತಂಡ 60% ಗೆಲ್ಲುವ ಅವಕಾಶವಿದೆ. ಭಾರತದ ಬ್ಯಾಟಿಂಗ್ ಯಾವಾಗಲೂ ಬಲಿಷ್ಠವಾಗಿಯೇ ಇದೆ. ಆದ್ರೆ ನಮ್ಮ ತಂಡದ ಬೌಲಿಂಗ್ ಅಪಾಯಕಾರಿ ಆಗಿರೋದ್ರಿಂದ ಇದು ಸರಿಸಮಾನರ ಯುದ್ಧವೆಂದೇ ಭಾವಿಸಬಹುದು. ಪಾಕಿಸ್ತಾನ ಟೀಂ ಇಂಡಿಯಾವನ್ನ ಕಡಿಮೆ ರನ್‌ಗಳಿಗೆ ಕಟ್ಟಿಹಾಕಿದರೆ, ಖಂಡಿತವಾಗಿಯೂ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ ವಿಶ್ವಕಪ್ ಟೂರ್ನಿಗೆ ಬಾರದಿದ್ರೆ ICC ಬಳಿಯಿದೆ ಮಾಸ್ಟರ್ ಪ್ಲ್ಯಾನ್ – ಇದರಿಂದ ಯಾರಿಗೆ ನಷ್ಟ?
ಭಾರತದಲ್ಲಿ ಪಾಕ್ ತಂಡದ ವೇಳಾಪಟ್ಟಿ ಹೀಗಿದೆ…
ಪಾಕಿಸ್ತಾನ vs ಕ್ವಾಲಿಫೈಯರ್ 1, ಅಕ್ಟೋಬರ್ 6 – ಹೈದರಾಬಾದ್
ಪಾಕಿಸ್ತಾನ vs ಕ್ವಾಲಿಫೈಯರ್ 2, ಅಕ್ಟೋಬರ್ 12 – ಹೈದರಾಬಾದ್
ಪಾಕಿಸ್ತಾನ vs ಭಾರತ, ಅಕ್ಟೋಬರ್ 15 – ಅಹಮದಾಬಾದ್
ಪಾಕಿಸ್ತಾನ vs ಆಸ್ಟ್ರೇಲಿಯಾ, ಅಕ್ಟೋಬರ್ 20 – ಬೆಂಗಳೂರು
ಪಾಕಿಸ್ತಾನ vs ಅಫ್ಘಾನಿಸ್ತಾನ, ಅಕ್ಟೋಬರ್ 23- ಚೆನ್ನೈ
ಪಾಕಿಸ್ತಾನ vs ದಕ್ಷಿಣ ಆಫ್ರಿಕಾ, ಅಕ್ಟೋಬರ್ 27- ಚೆನ್ನೈ
ಪಾಕಿಸ್ತಾನ vs ಬಾಂಗ್ಲಾದೇಶ, ಅಕ್ಟೋಬರ್ 31 – ಕೋಲ್ಕತ್ತಾ
ಪಾಕಿಸ್ತಾನ vs ನ್ಯೂಜಿಲೆಂಡ್, ನವೆಂಬರ್ 4 – ಬೆಂಗಳೂರು
ಪಾಕಿಸ್ತಾನ vs ಇಂಗ್ಲೆಂಡ್, ನವೆಂಬರ್ 12- ಕೋಲ್ಕತ್ತಾ
Web Stories