ನವದೆಹಲಿ: ವಿಪಕ್ಷಗಳ ಮೈತ್ರಿ ತಂತ್ರಕ್ಕೆ ಮೋದಿ ಸರ್ಕಾರ (Modi Government) ಕೂಡ ಪ್ರತಿತಂತ್ರ ಹೆಣೆದಿದೆ. ಸಾರ್ವತ್ರಿಕ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಸಲುವಾಗಿ ಮತ್ತೆ ಎನ್‍ಡಿಎ (NDA) ಜಪ ಮಾಡಿದೆ.
ದೆಹಲಿಯಲ್ಲಿ ಇಂದು ನಡೆದ ಎನ್‍ಡಿಎ ಸಭೆಯಲ್ಲಿ ಬರೋಬ್ಬರಿ 38 ರಾಜಕೀಯ ಪಕ್ಷಗಳು ಪಾಲ್ಗೊಂಡಿದ್ದವು. ನರೇಂದ್ರ ಮೋದಿ (PM Narendra Modi) ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಎಡಪ್ಪಾಡಿ ಪಳನಿಸ್ವಾಮಿ, ಪವನ್ ಕಲ್ಯಾಣ್ ಸೇರಿ ಹಲವರು ಪಾಲ್ಗೊಂಡಿದ್ದರು.
Advertisement
Advertisement
ಮೋದಿ ನಾಯಕತ್ವಕ್ಕೆ ಎಲ್ಲರೂ ಜೈ ಎಂದರು. ಈ ಮಧ್ಯೆ, ಜೆಡಿಎಸ್, ಬಿಎಸ್‍ಪಿ, ಟಿಡಿಪಿ ಸೇರಿ ಹಲವು ಪಕ್ಷಗಳು ಇನ್ನೂ ತಮ್ಮ ನಿರ್ಧಾರವನ್ನು ಪ್ರಕಟಿಸಬೇಕಿದೆ. ಈ ಪಕ್ಷಗಳು ಮುಂದಿನ ದಿನಗಳಲ್ಲಿ ಎನ್‍ಡಿಎಗೆ ಬೆಂಬಲ ಸೂಚಿಸುವ ಸಾಧ್ಯತೆಗಳೇ ಹೆಚ್ಚಿವೆ. ಇದನ್ನೂ ಓದಿ: ಪ್ರಧಾನಿ ಅಭ್ಯರ್ಥಿ ಯಾರು? – ʼಇಂಡಿಯಾʼಗೆ ಇರುವ 5 ಸವಾಲುಗಳು ಏನು?
Advertisement
ವೈಎಸ್‍ಆರ್‌ಸಿಪಿ, ಟಿಆರ್‌ಎಸ್, ಬಿಜೆಡಿಯಂತಹ ಪಕ್ಷಗಳು ಈ ಕ್ಷಣದವರೆಗೂ ತಟಸ್ಥ ಧೋರಣೆ ತಾಳಿವೆ. ಆದರೆ ಚುನಾವಣೆ ಸನಿಹದಲ್ಲಿ ಅಥವಾ ಚುನಾವಣೆ ನಂತರ ಈ ಸಮೀಕರಣಗಳಲ್ಲಿ ಒಂದಿಷ್ಟು ಬದಲಾವಣೆ ಆಗಬಹುದು.
Advertisement
38 ಪಕ್ಷಗಳು ಯಾವುದು?
ಬಿಜೆಪಿ, ಶಿವಸೇನೆ (ಶಿಂಧೆ ಬಣ), ಎನ್‍ಸಿಪಿ(ಅಜಿತ್ ಪವಾರ್), ಆರ್‌ಎಲ್‌ಜೆಪಿ, ಎಐಎಡಿಎಂಕೆ, ಅಪ್ನಾದಳ್(ಅನುಪ್ರಿಯ), ಎನ್‍ಪಿಪಿ, ಎನ್‍ಡಿಪಿಪಿ, ಎಜೆಎಸ್‍ಯು, ಎಸ್‍ಕೆಎಂ, ಎಂಎನ್‍ಎಫ್, ಐಪಿಎಫ್‍ಟಿ, ಎನ್‍ಪಿಎಫ್, ಆರ್‌ಪಿಐ (ಅಠಾವಳೆ), ಎಜಿಪಿ, ಪಿಎಂಕೆ, ತಮಿಳು ಮಾನಿಲ ಕಾಂಗ್ರೆಸ್, ಯುಪಿಪಿಎಲ್, ಎಸ್‍ಬಿಎಸ್‍ಪಿ, ಅಕಾಲಿದಳ, ಎಂಜಿಪಿ, ಜೆಜೆಪಿ, ಪಿಜೆಪಿ, ಆರ್‍ಎಸ್‍ಪಿ, ಜೆಎಸ್‍ಎಸ್‍ಪಿ, ಕೆಪಿಎ, ಯುಡಿಪಿ(ಮೇಘಾಲಯ), ಹೆಚ್‍ಎಸ್‍ಪಿಡಿಪಿ, ನಿಷಾದ್ ಪಾರ್ಟಿ, ಎನ್‍ಆರ್ ಕಾಂಗ್ರೆಸ್, ಹೆಚ್‍ಎಎಂ, ಜನಸೇನಾ, ಹೆಚ್‍ಎಲ್‍ಪಿ, ಬಿಡಿಜೆಎಸ್, ಕೆಕೆಸಿ, ಪುತಿಯಾ ತಮಿಲಿಗಂ, ಎಲ್‍ಜೆಎಸ್‍ಪಿ(ಪಾಸ್ವಾನ್), ಜಿಎನ್‍ಎಲ್‍ಎಫ್.
ಮಿಷನ್ 2024 ಭಾಗವಾಗಿ ಸಾಧ್ಯವಾದಷ್ಟು ಮಟ್ಟಿಗೆ ವಿಪಕ್ಷಗಳ ಒಗ್ಗಟ್ಟನ್ನು ಮುರಿದು, ಆ ಕೂಟವನ್ನು ದುರ್ಬಲ ಮಾಡಿ ಹೆಚ್ಚುಚ್ಚು ಪಕ್ಷಗಳನ್ನು ಎನ್‍ಡಿಎ ತೆಕ್ಕೆಗೆ ಸೇರಿಸಿಕೊಳ್ಳಲು ಬಿಜೆಪಿ ರಣತಂತ್ರ ಹೆಣೆಯುತ್ತಿದೆ. ಇದರ ಭಾಗವಾಗಿಯೇ ಶಿವಸೇನೆ, ಎನ್‍ಸಿಪಿ ಪಕ್ಷಗಳು ವಿಭಜನೆಗೊಂಡಿವೆ. ಇಂತಹ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚುವ ಸಂಭವ ಇದೆ.
Web Stories