ಮಹಾರಾಷ್ಟ್ರದಲ್ಲಿ ಎನ್‌ಡಿಎ ‘ಮಹಾ’ ಸುನಾಮಿ- ಕಾಂಗ್ರೆಸ್ ‘ಆಘಾಡಿ’ ಕೂಟ ಛಿದ್ರ ಛಿದ್ರ – ಯಾರಿಗೆ ಎಷ್ಟು ಸ್ಥಾನ?

Public TV
4 Min Read
maharashtra election results

– ದೆಹಲಿ ಬಿಜೆಪಿ ಕಚೇರಿಯಲ್ಲಿ ಮಹಾ ಸಂಭ್ರಮ

ಮುಂಬೈ: ಮಹಾರಾಷ್ಟçದಲ್ಲಿ ಆಡಳಿತಾರೂಢ ಬಿಜೆಪಿ ಮೈತ್ರಿಕೂಟ ‘ಮಹಾಯುತಿ’ ಎದುರಾಳಿ ಕೂಟವನ್ನು ಇಡಿಯಾಗಿ ಆಹುತಿ ಪಡೆದಿದೆ. ಒನ್ ಸೈಡ್ ಮ್ಯಾಚ್‌ನಲ್ಲಿ ಕಾಂಗ್ರೆಸ್-ಉದ್ಧವ್ ಸೇನೆ-ಶರದ್ ಪವಾರ್ ಎನ್‌ಸಿಪಿ ಉಡೀಸ್ ಆಗಿವೆ. ಮತಗಟ್ಟೆ ಸಮೀಕ್ಷೆಗಳ ಲೆಕ್ಕಚಾರವನ್ನು ಮೀರಿ ಮೋದಿ ಟೀಂ ಇದೇ ಮೊದಲ ಬಾರಿಗೆ ಡಬ್ಬಲ್ ಸೆಂಚುರಿ ಕ್ರಾಸ್ ಮಾಡಿದೆ.

ಬಿಜೆಪಿಯೊಂದೇ ಮತ್ತೊಮ್ಮೆ ಸೆಂಚುರಿ ಬಾರಿಸಿದೆ. ಬಿಜೆಪಿ ಸ್ಪರ್ಧೆ ಮಾಡಿದ್ದ 145 ಕ್ಷೇತ್ರಗಳಲ್ಲಿ 80% ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಮಿತ್ರ ಪಕ್ಷಗಳಾದ ಶಿಂಧೆ ಶಿವಸೇನೆ ಸ್ಟ್ರೈಕ್ ರೇಟ್ 71% ರಷ್ಟಿದೆ. ಅಜಿತ್ ಪವಾರ್ ಎನ್‌ಸಿಪಿ ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ 62% ರಷ್ಟು ಯಶಸ್ಸು ಕಂಡಿದೆ.

ಮಹಾ ವಿಕಾಸ ಅಘಾಡಿ ಮೈತ್ರಿಕೂಟದ ಗೆಲುವಿನ ಸ್ಟ್ರೈಕ್‌ರೇಟ್‌ 20ಕ್ಕೆ ಕುಸಿದಿದೆ. ಇಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ್ಯತಂತ್ರ ಸಫಲವಾಗಿದೆ. ಹಿಂದುತ್ವ ಮಂತ್ರ ಕೆಲಸ ಮಾಡಿದೆ. ಇದೇ ಮೊದಲ ಬಾರಿಗೆ ಮರಾಠಿ ಆಸ್ಮಿತೆಯ ಅಂಶ ಕೆಲಸ ಮಾಡಿಲ್ಲ. ಮಹಾ ಫಲಿತಾಂಶ ಬೆನ್ನಲ್ಲೇ ಮುಂದಿನ ಸಿಎಂ ಯಾರೆಂಬ ಚರ್ಚೆ ನಡೆದಿದೆ.

ಬಿಜೆಪಿ ಅತೀ ಹೆಚ್ಚು ಸ್ಥಾನ ಗಳಿಸಿದ ಕಾರಣ ಫಡ್ನವಿಸ್ ಮತ್ತೆ ಸಿಎಂ ಆಗಬಹುದು ಎಂಬ ಚರ್ಚೆ ನಡೆದಿದೆ. ಆದರೆ, ಸಿಎಂ ಹುದ್ದೆಗೆ ಮತ್ತೊಮ್ಮೆ ಏಕನಾಥ ಶಿಂಧೆ ಪಟ್ಟು ಹಿಡಿದಿದ್ದಾರೆ. ಅಂದ ಹಾಗೇ, ಈ ಜನಾದೇಶವನ್ನು ಉದ್ಧವ್ ಶಿವಸೇನೆ ಒಪ್ಪೋಕೆ ತಯಾರಿಲ್ಲ. ಇದು ಮೋದಿ-ಅದಾನಿ ಕೈವಾಡದ ಫಲಿತಾಂಶ ಎಂದು ಸಂಜಯ್ ರಾವತ್ ವ್ಯಾಖ್ಯಾನಿಸಿದ್ದಾರೆ. ಈ ಸೋಲು ಆಘಾತ ತಂದಿದೆ ಎಂದಿರುವ ಕಾಂಗ್ರೆಸ್, ಆತ್ಮಾವಲೋಕನ ಮಾಡಿಕೊಳ್ಳಲು ಮುಂದಾಗಿದೆ. ಮಹಾಯುತಿ ಮಹಾ ಸಂಭ್ರಮದಲ್ಲಿ ಮುಳುಗಿದೆ.

ಮಹಾರಾಷ್ಟ್ರ ಫಲಿತಾಂಶ
* ಎನ್‌ಡಿಎ – 231
* ಐಎನ್‌ಡಿಐಎ – 45
* ಇತರೆ – 12

ಪಕ್ಷವಾರು ಫಲಿತಾಂಶ
ಪಕ್ಷ                         ಸ್ಥಾನ                                    ವೋಟ್ ಶೇರ್                  ಹಿಂದಿನ ಫಲಿತಾಂಶ
* ಬಿಜೆಪಿ –                  133 (149 ರಲ್ಲಿ ಸ್ಪರ್ಧೆ)            26.74%                         105
* ಶಿಂಧೆ ಸೇನೆ –          57 (81 ರಲ್ಲಿ ಸ್ಪರ್ಧೆ)                 12.55% –
* ಎನ್‌ಸಿಪಿ –              41 (59 ರಲ್ಲಿ ಸ್ಪರ್ಧೆ)                 9.06% –
* ಕಾಂಗ್ರೆಸ್ –              15 (101 ರಲ್ಲಿ ಸ್ಪರ್ಧೆ)               12.29%                         44
* ಉದ್ಧವ್ ಸೇನೆ –        20 (95 ರಲ್ಲಿ ಸ್ಪರ್ಧೆ)                10.02%                         56
* ಎನ್‌ಸಿಪಿ(ಎಸ್‌ಪಿ) –   10 (86 ರಲ್ಲಿ ಸ್ಪರ್ಧೆ)                11.19%                           54
* ಇತರೆ – 12 07.35

ಸಮುದಾಯವಾರು ರಿಸಲ್ಟ್ ಲೆಕ್ಕ
ಎನ್‌ಡಿಎ ಐಎನ್‌ಡಿಐಎ
* ಮರಾಠ – 68 18
* ಓಬಿಸಿ – 61 25
* ದಲಿತ – 19 10
* ರೈತ – 36 20
* ಮಹಿಳೆ – 29 11
ಮಾಹಿತಿ – ವಿಧರ್ಭದಲ್ಲಿ ಬಿಜೆಪಿ ಹವಾ.. 62ರ ಪೈಕಿ 40ರಲ್ಲಿ ಗೆಲುವು.

`ಮಹಾ’ ಫಲಿತಾಂಶ ವಿಶ್ಲೇಷಣೆ
ಎನ್‌ಡಿಎ ಗೆಲುವಿಗೆ ಕಾರಣಗಳು
* ಏಕ್ ಹೈ ತೋ ಸೇಫ್ ಹೈ ನಿನಾದ
* ಓಬಿಸಿ ಮತ ಬುಟ್ಟಿಗಾಗಿ ಮಾ.ಧ.ವ ಸೂತ್ರ (ಮಾಲಿ,ಧಂಗರ್, ವಂಜರಿ)
* ಲಾಡ್ಲಿ ಬೆಹನ್ ಯೋಜನೆಗೆ ಜೈ ಎಂದ ನಾರಿಶಕ್ತಿ
* ಮಹಿಳೆಯರಿಗೆ 2100 ರೂ. ಆರ್ಥಿಕ ನೆರವಿನ ಭರವಸೆ
* ಶರದ್ ಪವಾರ್, ಉದ್ಧವ್ ಠಾಕ್ರೆ ಹಿಡಿತ ಸಡಿಲ (ಶರದ್ ಪವಾರ್ ಶಕೆ ಮುಗಿಯಿತಾ)
* ಮಹಾಯುತಿಗೆ `ಶಿಂಧೆ’ಯ ಮರಾಠ ನಾಯಕತ್ವ
* ಮರಾಠ ಮೀಸಲಾತಿ ವಿಚಾರಕ್ಕೆ ಆಘಾಡಿ ಹೆಚ್ಚು ಆದ್ಯತೆ ನೀಡಿದ್ದು
* ಗ್ಯಾರಂಟಿಗಳು ಸುಳ್ಳೆಂದು ಮೋದಿ ಪ್ರಚಾರ
* 76 ಕಡೆ ಬಿಜೆಪಿ-ಕಾಂಗ್ರೆಸ್ ಮುಖಾಮುಖಿ.. ಕೈಗೆ ಹೊಡೆತ

Share This Article