ಮುಂಬೈ: ಬಿಹಾರದ (Bihar) 243 ವಿಧಾನಸಭಾ ಸ್ಥಾನಗಳಲ್ಲಿ ಎನ್‌ಡಿಎ 160 ಸ್ಥಾನಗಳನ್ನ ಗೆಲ್ಲುತ್ತದೆ. ಮೂರನೇ 2ರಷ್ಟು ಬಹುಮತದೊಂದಿಗೆ ಸರ್ಕಾರ ರಚಿಸೋದು ಖಚಿತ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಭವಿಷ್ಯ ನುಡಿದಿದ್ದಾರೆ.
ಖಾಸಗಿ ವಾಹಿನಿಯೊಂದರ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಎನ್‌ಡಿಎ (NDA) ಈ ಬಾರಿ 243 ಸ್ಥಾನಗಳಲ್ಲಿ 160 ಸ್ಥಾನಗಳನ್ನ ಗೆಲ್ಲುತ್ತದೆ. ಮೂರನೇ ಎರಡರಷ್ಟು ಬಹುಮತದೊಂದಿಗೆ ಸರ್ಕಾರ ರಚಿಸಲಿದ್ದು, 2005ರಿಂದ 5ನೇ ಬಾರಿಗೆ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗ್ರಾಹಕರಿಗೆ ಗುಡ್‌ನ್ಯೂಸ್ – ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆ; ಹೊಸ ದರ ಇಂದಿನಿಂದಲೇ ಜಾರಿ

ಬಿಹಾರ ದೇಶದಲ್ಲಿ ರಾಜಯಕೀಯವಾಗಿ ಜಾಗೃತವಾಗಿರುವ ರಾಜ್ಯಗಳಲ್ಲಿ ಒಂದು. ಕಳೆದ 20 ವರ್ಷಗಳಲ್ಲಿ ಅದು ವರ್ಷಗಳಲ್ಲಿ ರಾಜ್ಯವು ಸಾಧಿಸಿದ ಪ್ರಗತಿಯನ್ನ ಜನ ನೋಡಿದ್ದಾರೆ. ಇಲ್ಲಿನ ಯುವಜನರನ್ನ ಕೇಳಿದ್ರೆ ನಿತೀಶ್ ಕುಮಾರ್ ಸರ್ಕಾರದ ಅಡಿಯಲ್ಲಿ ಕಾನೂನು ಸುವ್ಯವಸ್ಥೆ ಎಷ್ಟು ಸುಧಾರಿಸಿದೆ? ಎಷ್ಟು ಅಭಿವೃದ್ಧಿಯಾಗಿದೆ? ಬಿಹಾರ ಏನು ಪ್ರಗತಿ ಸಾಧಿಸಿದೆ ಅನ್ನೋದನ್ನ ಹೇಳ್ತಾರೆ ಎಂದಿದ್ದಾರೆ. ಇದನ್ನೂ ಓದಿ: Stampede | ಅನುಮತಿಯಿಲ್ಲದೇ ಏಕಾದಶಿ ಆಚರಣೆ ಮಾಡಿದ್ದೇ ದುರಂತಕ್ಕೆ ಕಾರಣವಾಯ್ತಾ?
