ನವದೆಹಲಿ: ಲೋಕಸಭೆ ಚುನಾವಣೆಗೆ (Lok Sabha Election) ಇನ್ನು ಒಂಭತ್ತು ತಿಂಗಳು ಬಾಕಿ ಉಳಿದಿದ್ದು, INDIA ಮತ್ತು NDA ಒಕ್ಕೂಟದ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಮುಂಬೈನಲ್ಲಿ INDIA ಒಕ್ಕೂಟ ಸಭೆ ನಡೆಸಲು ನಿರ್ಧರಿಸಿರುವ ಬೆನ್ನಲ್ಲೇ ಇದಕ್ಕೆ ಠಕ್ಕರ್ ಕೊಡಲು NDA ಒಕ್ಕೂಟದಿಂದಲೂ ಮುಂಬೈನಲ್ಲಿ (Mumbai) ಸಭೆ ನಡೆಸಲು ತಿರ್ಮಾನಿಸಲಾಗಿದೆ.
ಮುಂಬೈನಲ್ಲಿ ನಡೆಯಲಿರುವ NDA ಒಕ್ಕೂಟದ ಸಭೆಯಲ್ಲಿ 26-27 ಪಕ್ಷಗಳ ನಾಯಕರು ಭಾಗಿಯಾಗುತ್ತಿದ್ದಾರೆ. INDIA ಒಕ್ಕೂಟದ ಸಭೆ ಹಿನ್ನೆಲೆ ನಡೆಸುತ್ತಿಲ್ಲ. ಈ ಸಭೆ ಪೂರ್ವ ನಿಗದಿಯಾಗಿತ್ತು. ಸಭೆಯಲ್ಲಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ (NCP) ಅಧಿಕೃತವಾಗಿ NDA ಸೇರಲಿದೆ ಎಂದು ಎನ್‌ಸಿಪಿ ಸಂಸದ ಸುನೀಲ್ ತಟ್ಕರೆ ತಿಳಿಸಿದ್ದಾರೆ. ಇದನ್ನೂ ಓದಿ: ಅಧಿಕೃತ ಮ್ಯಾಪ್‌ನಲ್ಲಿ ಅರುಣಾಚಲ ಪ್ರದೇಶ ಸೇರಿಸಿಕೊಂಡ ಚೀನಾ – ದಕ್ಷಿಣ ಟಿಬೆಟ್ ಎಂದು ನಾಮಕರಣ
Advertisement
Advertisement
INDIA ಒಕ್ಕೂಟಕ್ಕೂ ಮುಂಬೈನಲ್ಲಿ ನಡೆಯಲಿರುವ ಸಭೆ ನಿರ್ಣಾಯಕವಾಗಿದೆ. ಸಭೆಯಲ್ಲಿ ಒಕ್ಕೂಟಕ್ಕೆ ಒಂದು ಸಾಮಾನ್ಯ ಧ್ವಜ ಹೊಂದುವ ನಿರ್ಧಾರ ಮಾಡಲಾಗಿದೆ. ಅಶೋಕ ಚಕ್ರವಿಲ್ಲದ ತ್ರಿವರ್ಣ ಧ್ವಜವನ್ನು ಒಕ್ಕೂಟದ ಧ್ವಜವಾಗಿ ಪರಿಗಣಿಸುವ ಸಾಧ್ಯತೆ ಇದೆ. ಇನ್ನುಳಿದಂತೆ ಒಕ್ಕೂಟಕ್ಕೆ ಲೋಗೋ ಅಥವಾ ಚಿಹ್ನೆ ಕೂಡಾ ಅಂತಿಮವಾಗಲಿದೆ. ಇದನ್ನೂ ಓದಿ: ಪುಲ್ವಾಮಾ ದಾಳಿಯೇ ವಿಶೇಷ ರಾಜ್ಯ ಸ್ಥಾನಮಾನ ರದ್ದುಪಡಿಸಲು ಪ್ರೇರೇಪಿಸಿತು: ಸುಪ್ರೀಂಗೆ ಕೇಂದ್ರ
Advertisement
ಈ ಬಗ್ಗೆ ಮಾತನಾಡಿರುವ ಬಿಹಾರ ಸಿಎಂ ನಿತೀಶ್ ಕುಮಾರ್, ಇನ್ನೂ ಕೆಲವು ಪ್ರಾದೇಶಿಕ ಪಕ್ಷಗಳು ಒಕ್ಕೂಟ ಸೇರುವ ಆಸಕ್ತಿ ತೋರಿಸಿವೆ. ಮುಂಬೈನಲ್ಲಿ ನಡೆಯಲಿರುವ ಸಭೆಯಲ್ಲಿ ಇದು ನಿರ್ಧಾರವಾಗಲಿದೆ. ನಮ್ಮ ಸಂಖ್ಯೆ ಇನ್ನಷ್ಟು ಹೆಚ್ಚಬಹುದು. ಎಲ್ಲರನ್ನೂ ಒಗ್ಗೂಡಿಸುವ ದಿಕ್ಕಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ ಎಂದರು. ಇದನ್ನೂ ಓದಿ: ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ಬ್ರೇಕ್- 14 ಉಗ್ರರ ಆಸ್ತಿ ಮುಟ್ಟುಗೋಲಿಗೆ ಪೊಲೀಸರ ಕ್ರಮ
Advertisement
ಕಾಂಗ್ರೆಸ್ ನಾಯಕ ಪಿಎಲ್ ಪುನಿಯಾ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ ಗೆದ್ದ ಬಳಿಕ ಆಯ್ಕೆಯಾದ ಸಂಸದರು ಸೇರಿ ಪ್ರಧಾನಮಂತ್ರಿಯನ್ನು ಆಯ್ಕೆ ಮಾಡುತ್ತಾರೆ. ಅಲ್ಲಿಯವರೆಗೂ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಪ್ರಜ್ಞಾನ್ ರೋವರ್‌ಗೆ ಎದುರಾಯ್ತು ದೊಡ್ಡ ಕುಳಿ, ಮಾರ್ಗ ಬದಲಿಸಿದ ಇಸ್ರೋ – ಇನ್ನು 10 ದಿನ ಮಾತ್ರ ಬಾಕಿ
Web Stories