ಶ್ರೀನಗರ: ಉಗ್ರರನ್ನು ಕೊಲ್ಲುವ ಬದಲು ಜೀವಂತವಾಗಿ ಸೆರೆಹಿಡಿಯಬೇಕು ಎಂದು ಜಮ್ಮು ಮತ್ತು ಕಾಶ್ಮೀರ (Jammu and Kashmir) ಮಾಜಿ ಸಿಎಂ ಫಾರೂಖ್ ಅಬ್ದುಲ್ಲಾ (Farooq Abdullah) ಹೇಳಿದ್ದಾರೆ.
ಕಾಶ್ಮೀರದಲ್ಲಿ ಮತ್ತೆ ಉಗ್ರರ ಉಪಟಳ ಹೆಚ್ಚುತ್ತಿದೆ. ಇಂದು ಕೂಡ ಎರಡು ಕಡೆ ಎನ್‍ಕೌಂಟರ್ ನಡೆದು, ಮೂವರು ಉಗ್ರರ ಹತ್ಯೆಯಾಗಿದೆ. ಈ ಹೊತ್ತಲ್ಲೇ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಕಣಿವೆ ನಾಡಲ್ಲಿ ನಡೀತಿರೋ ಎನ್‍ಕೌಂಟರ್‌ಗಳ ಬಗ್ಗೆ ಜನಕ್ಕೆ ಎಷ್ಟೋ ಅನುಮಾನಗಳಿವೆ. ಇತ್ತೀಚಿಗೆ ನಡೆದ ಭಯೋತ್ಪಾದಕ ದಾಳಿಗಳು ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ನಡೆಯುವಂತೆ ಕಾಣುತ್ತಿವೆ. ಹೀಗಾಗಿ ಉಗ್ರರನ್ನು ಕೊಲ್ಲುವ ಬದಲು, ಬಂಧಿಸಿ ವಿಚಾರಣೆಗೆ ಒಳಪಡಿಸಿದರೆ ಅವರ ವ್ಯೂಹಗಳು ಗೊತ್ತಾಗುತ್ತದೆ. ಈ ಬಗ್ಗೆ ಕೇಂದ್ರ ಸರ್ಕಾರ ಉನ್ನತಮಟ್ಟದ ತನಿಖೆ ನಡೆಸಬೇಕು ಎಂದು ಫಾರೂಖ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ (BJP) ಬಿಜೆಪಿ, ಉಗ್ರರನ್ನು ಜೀವಂತವಾಗಿ ಸೆರೆ ಹಿಡಿಯಲು ನೋಡಿದ್ರೆ, ಸೈನಿಕರನ್ನು ಅವರು ಸುಮ್ನೆ ಬಿಡ್ತಾರಾ? ಎಂದು ಪ್ರಶ್ನಿಸಿದ್ದಾರೆ. ಫಾರೂಖ್ ಅಬ್ದುಲ್ಲಾ ಸರ್ಕಾರಕ್ಕೆ ರಾಜಕೀಯವಾಗಿ ನಷ್ಟ ಆಗಬಾರದು ಎನ್ನುವ ದೃಷ್ಟಿಯಿಂದ ಈ ಹೇಳಿಕೆ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನೊಂದು ಕಡೆ ಶರದ್ ಪವಾರ್ ಸೇರಿ ಹಲವರು ಫಾರೂಖ್ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.