ನವದೆಹಲಿ: ಆಮ್ ಆದ್ಮಿ ಪಕ್ಷ(ಎಎಪಿ)ದ ಅಭ್ಯರ್ಥಿ ದುರ್ಗೇಶ್ ಪಾಠಕ್, ದೆಹಲಿಯ ರಾಜಿಂದರ್ ಅವರ ನಗರ ವಿಧಾನಸಭಾ ಉಪಚುನಾವಣಾ ಪ್ರಚಾರಕ್ಕೆ ಮಕ್ಕಳನ್ನು ಬಳಸಿಕೊಂಡ ಬಗ್ಗೆ ಪೊಲೀಸರಿಗೆ ಎಫ್‌ಐಆರ್ ದಾಖಲಿಸುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ(ಎನ್‌ಸಿಪಿಸಿಆರ್) ದೆಹಲಿ ಪೊಲೀಸರಿಗೆ ಪತ್ರ ಬರೆದಿದೆ.
ಎಎಪಿ ನಾಯಕರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ, ಮಕ್ಕಳ ಹಕ್ಕುಗಳ ಸಂಸ್ಥೆ ಮುಖ್ಯ ಚುನಾವಣಾ ಆಯುಕ್ತರಿಗೂ ಪತ್ರ ಬರೆದಿದೆ. ಎರಡೂ ಪತ್ರಗಳನ್ನು, ದೆಹಲಿ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತಾ ನೀಡಿರುವುದಾಗಿ ಎನ್‌ಸಿಪಿಸಿಆರ್ ತಿಳಿಸಿದೆ. ಇದನ್ನೂ ಓದಿ: ಯೋಗದಿಂದ ವಿಶ್ವಕ್ಕೆ ಶಾಂತಿ – ಮೈಸೂರಿನಲ್ಲಿ 15 ಸಾವಿರ ಮಂದಿಯೊಂದಿಗೆ ಮೋದಿ ಯೋಗ
Advertisement
Advertisement
ಅಪ್ರಾಪ್ತ ಮಕ್ಕಳು ಹಾಗೂ ಕೂಲಿ ಕಾರ್ಮಿಕರಿಗೆ ಸಣ್ಣ ಮೊತ್ತದ ಹಣ ನೀಡಿ, ಅವರನ್ನು ಕರಪತ್ರಗಳನ್ನು ಹಂಚಲು, ಪೋಸ್ಟರ್‌ಗಳನ್ನು ಹಚ್ಚಲು, ಬ್ಯಾನರ್‌ಗಳನ್ನು ನೇತು ಹಾಕಲು ಹಾಗೂ ಪ್ರಚಾರ ಸಭೆಗಳಲ್ಲಿ ಭಾಗವಹಿಸಲು ಬಳಸಿಕೊಂಡಿರುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋವನ್ನು ಒದಗಿಸಿರುವುದಾಗಿಯೂ ಎನ್‌ಸಿಪಿಸಿಆರ್ ಪತ್ರದಲ್ಲಿ ತಿಳಿಸಿದೆ. ಇದನ್ನೂ ಓದಿ: ಪ್ರಧಾನಿಯೊಂದಿಗೆ ಭಾಗವಹಿಸಿದ್ದು ಸಂತಸ ತರಿಸಿದೆ: ಯದುವೀರ್
Advertisement
ಎಎಪಿ ಪಕ್ಷ ಹಾಗೂ ಅದರ ಅಭ್ಯರ್ಥಿ ದುರ್ಗೇಶ್ ಪಾಠಕ್, ಮಕ್ಕಳಿಗೆ ದಿನಕ್ಕೆ 100 ರೂ. ಯ ಆಮಿಷ ನೀಡಿ ರಾಜಿಂದರ್ ನಗರ ಕ್ಷೇತ್ರದಲ್ಲಿ ಕರಪತ್ರಗಳನ್ನು ಹಂಚಲು ಅಲೆದಾಡಿಸುತ್ತಿದ್ದಾರೆ. ಚುನಾವಣಾ ಸಂಬಂಧಿತ ಚಟುವಟಿಕೆಗಳಲ್ಲಿ ಬಾಲಕಾರ್ಮಿಕರನ್ನು ತೊಡಗಿಸಿಕೊಳ್ಳುವುದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಎಂದು ಹೇಳಿದೆ.