NCP vs NCP – ಬಲಾಬಲ ಪ್ರದರ್ಶನದಲ್ಲಿ ಅಜಿತ್‌ ʼಪವರ್‌ʼಫುಲ್‌!

Public TV
1 Min Read
Ajit Pawar 1

ಮುಂಬೈ: ಮಹಾರಾಷ್ಟ್ರ ರಾಜಕೀಯಕ್ಕೆ (Maharashtra Politics) ಬಿಗ್ ಟ್ವಿಸ್ಟ್ ಸಿಕ್ಕಿದೆ. ಇಂದು ಶರದ್ ಪವಾರ್ (Sharad Pawar), ಅಜಿತ್ ಪವಾರ್ (Ajit Pawar) ನಡೆಸಿದ ಬಲಾಬಲ ಪ್ರದರ್ಶನದಲ್ಲಿ ಅಜಿತ್ ಪವಾರ್ ಕೈಮೇಲಾಗಿದೆ.

ಅಜಿತ್ ಪವಾರ್ ಕರೆದಿದ್ದ ಸಭೆಗೆ 29 ಶಾಸಕರು ಬಂದಿದ್ದರು. ಆದರೆ ತಮ್ಮ ಬಳಿ 40 ಶಾಸಕರ ಬಲ ಇದೆ ಎಂದು ಡಿಸಿಎಂ ಪವಾರ್ ಹೇಳಿದ್ದಾರೆ. ಇನ್ನೊಂದು ಕಡೆ ಶರದ್ ಪವಾರ್ ಕರೆದ ಸಭೆಗೆ ಕೇವಲ 14 ಶಾಸಕರು ಮಾತ್ರ ಬಂದಿದ್ದರು.


ತಮ್ಮ ಬೆಂಬಲಿಗರ ಜೊತೆ ಅಜಿತ್ ಪವಾರ್ ಮಾತನಾಡುತ್ತಾ, ತಮ್ಮ ಚಿಕ್ಕಪ್ಪ ಶರದ್ ಪವಾರ್ ಅವರನ್ನು ದೇವರಿಗೆ ಹೋಲಿಸಿದರು. ನನಗೆ ಸಿಎಂ ಆಗಬೇಕು ಎಂಬ ಆಸೆ ಇದೆ. ನಿಮ್ಮ ಆಶೀರ್ವಾದ ಬೇಕು ಎಂದು ಕೋರಿದರು.   ಇದನ್ನೂ ಓದಿ: ಡಿವಿಜಿ ಮನೆ ಶಾಲೆಗೆ ಹೈಟೆಕ್ ಟಚ್ – ಖಾಸಗಿ ಶಾಲೆಗೆ ಸೆಡ್ಡು ಹೊಡೆದ ಕಟ್ಟಡ

ಬಿಜೆಪಿಯಲ್ಲಿ 75 ವರ್ಷವಾದರೆ ನಿವೃತ್ತಿ ಪಡೆಯುತ್ತಾರೆ ಎನ್ನುವ ಮೂಲಕ 83 ವರ್ಷದ ಶರದ್ ಪವಾರ್ ರಾಜಕೀಯ ನಿವೃತ್ತಿ ಪಡೆಯಬೇಕು ಎಂದು ಪರೋಕ್ಷವಾಗಿ ಸಲಹೆ ನೀಡಿದರು. ಶಿವಸೇನೆ (Shiv Sena) ಜೊತೆ ಸೇರುವ ಮೊದಲು ಎನ್‍ಸಿಪಿ (NCP) ಐದು ಬಾರಿ ಬಿಜೆಪಿಯನ್ನು ಸಂಪರ್ಕಿಸಿತ್ತು ಎಂಬ ವಿಚಾರವನ್ನು ಅಜಿತ್ ಪವಾರ್ ಬಹಿರಂಗಪಡಿಸಿದರು.

ಎನ್‍ಸಿಪಿ ಹೆಸರು, ಚಿನ್ಹೆಯನ್ನು ತಮ್ಮ ಬಣಕ್ಕೆ ನಿಗದಿ ಮಾಡಬೇಕು ಎಂದು ಕೋರಿ ಅಜಿತ್ ಪವಾರ್ ಬಣ ಚುನಾವಣಾ ಆಯೋಗದ ಮೊರೆ ಹೋಗಿದೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article