– ಪವಾರ್ ಖಾತೆಗಳನ್ನು ಮುಂದುವರಿಸಲು ಎನ್‌ಸಿಪಿ ನಾಯಕರ ಒತ್ತಾಯ
ಮುಂಬೈ: ಅಜಿತ್ ಪವಾರ್ (Ajit Pawar) ಅವರ ಅಕಾಲಿಕ ಮರಣದ ನಂತರ ಎನ್‌ಸಿಪಿಯ ಭವಿಷ್ಯಕ್ಕಾಗಿ ಅವರ ಪತ್ನಿ ಸುನೇತ್ರಾ ಪವಾರ್ (Sunetra Pawar) ಅವರನ್ನು ಕ್ಯಾಬಿನೆಟ್‌ಗೆ ಸೇರ್ಪಡೆ ಮಾಡಬೇಕು ಎಂದು ಕೆಲವು ನಾಯಕರು ಆಗ್ರಹಿಸಿದ್ದಾರೆ. ನಾವು ಅದರ ಬಗ್ಗೆ ನಮ್ಮ ನಾಯಕತ್ವದೊಂದಿಗೆ ಮಾತನಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಅಜಿತ್ ಪವಾರ್ ಅವರ ಆಪ್ತರಾಗಿದ್ದ ಜಿರ್ವಾಲ್ ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ಭಾಗವಾಗಿರುವ ಸುನೇತ್ರಾ ಪವಾರ್, ಎನ್‌ಸಿಪಿ ಅಜಿತ್ ಪವಾರ್ ಗುಂಪನ್ನು ಮುನ್ನಡೆಸಬೇಕು. ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎನ್ನುವುದು ಜನರ ಆಶಯವಾಗಿದೆ ಎಂದು ಹಿರಿಯ ಎನ್‌ಸಿಪಿ ನಾಯಕ ಮತ್ತು ಸಚಿವ ನರಹರಿ ಜಿರ್ವಾಲ್ ತಿಳಿಸಿದ್ದಾರೆ. ಇದನ್ನೂ ಓದಿ: NCP ಎರಡು ಬಣಗಳ ವಿಲೀನಕ್ಕೆ ನಿರ್ಧರಿಸಿದ್ದ ಅಜಿತ್ ಪವಾರ್: ತೆರೆಮರೆಯ ರಾಜಕೀಯ ಗುಟ್ಟು ಬಿಚ್ಚಿಟ್ಟ ಆಪ್ತ ಕಿರಣ್ ಗುಜಾರ್
ಈ ನಡುವೆ ಅಜಿತ್ ಪವಾರ್ ನಿಭಾಯಿಸುತ್ತಿದ್ದ ಖಾತೆಗಳ ಮೇಲೆ ಕಣ್ಣಿಟ್ಟಿರುವ ಪಕ್ಷದ ನಾಯಕರು, ಅಜಿತ್ ಪವಾರ್ ಅವರ ಖಾತೆಗಳನ್ನು ಪಕ್ಷದ ಕೋಟಾದಡಿಯಲ್ಲಿ ಬರುವುದರಿಂದ ಅವುಗಳನ್ನು ಎನ್‌ಸಿಪಿಗೆ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಪತ್ರವನ್ನು ಸಲ್ಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಅಜಿತ್ ಪವಾರ್ ನಿಧನದ ನಂತದ ಕ್ಯಾಬಿನೆಟ್ ಪುನರ್ ರಚನೆ ಸಾಧ್ಯತೆ ಹಿನ್ನೆಲೆ ಸುನೇತ್ರಾ ಪವಾರ್ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡು, ಪಕ್ಷದ ಕೋಟಾದಲ್ಲಿರುವ ಹಣಕಾಸು, ಯೋಜನೆ ಮತ್ತು ರಾಜ್ಯ ಅಬಕಾರಿ, ಕ್ರೀಡೆ ಮತ್ತು ಯುವಜನ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿಯ ಹೆಚ್ಚುವರಿ ಜವಾಬ್ದಾರಿಗಳನ್ನು ಮುಂದುವರಿಸಬೇಕು ಎಂದು ಒತ್ತಡ ಹೇರಲಾಗುತ್ತಿದೆ. ಇದನ್ನೂ ಓದಿ: ಮಹಾರಾಷ್ಟ್ರ ಡಿಸಿಎಂ ಸ್ಥಾನಕ್ಕೆ ಅಜಿತ್ ಪವಾರ್ ಪತ್ನಿ ಸುನೇತ್ರಾ ಹೆಸರು ಪ್ರಸ್ತಾಪಿಸಲು ಎನ್‌ಸಿಪಿ ಚಿಂತನೆ

