ಮುಂಬೈ: ಬಿಜೆಪಿ ಕಾರ್ಯಕರ್ತರು ದೇಶದಲ್ಲಿ ಕೋಮು ಪರಿಸ್ಥಿತಿಯನ್ನು ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಆರೋಪಿಸಿದರು.
ಈ ಬಗ್ಗೆ ಮಾತನಾಡಿದ ಅವರು, ರಾಮನವಮಿ ಮತ್ತು ಹನುಮ ಜಯಂತಿ ಆಚರಣೆ ಸಂದರ್ಭದಲ್ಲಿ ಹಲವಾರು ರಾಜ್ಯಗಳಲ್ಲಿ ಹಿಂಸಾಚಾರ ನಡೆದಿತ್ತು. ಇದರ ಜೊತಗೆ ಮಸೀದಿಗಳಲ್ಲಿದ್ದ ಧ್ವನಿವರ್ಧಕಗಳನ್ನು ತೆರವುಗೊಳಿಸಬೇಕು ಎಂಬ ಸಮಸ್ಯೆಯನ್ನು ಬಿಜೆಪಿಯವರು ಉಲ್ಬಣಗೊಳಿಸಿದ್ದಾರೆ ಎಂದ ಅವರು, ರಾಜ್ಯದಲ್ಲಿ ಎನ್‍ಸಿಪಿ ಜನರ ನಡುವೆ ಸಾಮರಸ್ಯದ ವಾತಾವರಣವನ್ನು ಸೃಷ್ಟಿಸುವಲ್ಲಿ ಮುಂಚೂಣಿಯಲ್ಲಿದೆ ಎಂದು ಟ್ವೀಟ್ ಮೂಲಕ ತಿಳಿಸಿದರು.
ಟ್ವೀಟ್‍ನಲ್ಲಿ ಏನಿದೆ?: ಕೋಮು ಸಿದ್ಧಾಂತವನ್ನು ಹರಡುತ್ತಿರುವುದು ಕಳವಳದ ವಿಷಯವಾಗಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಮತ್ತು ಖಾದ್ಯ ತೈಲಗಳ ಬೆಲೆಗಳ ಏರಿಕೆಯಂತಹ ಸಾಮಾನ್ಯ ನಾಗರಿಕರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎನ್‍ಸಿಪಿ ತಿಳಿಸುತ್ತಿದೆ. ಇದನ್ನೂ ಓದಿ: ಗೋವಾ – ಕಲಬುರಗಿ ವಯಾ ಹೈದ್ರಾಬಾದ್ ವಿಮಾನಕ್ಕೆ ಚಾಲನೆ ನೀಡಿದ ಉಮೇಶ್ ಜಾಧವ್
यासोबतच जे राष्ट्रीय प्रश्न आहेत, उदाहरणार्थ सांप्रदायिक विचारांची होणारी वाढ हा चिंताजनक विषय आहे. तसेच पेट्रोल, डिझेल, गॅस, खाद्यतेल यांच्या किमती वाढत आहेत त्या सामान्य माणसाला त्रासदायक आहेत. आज त्याही प्रश्नावर जनमत तयार करावे, ही आमची भावना आहे.
— Sharad Pawar (@PawarSpeaks) April 18, 2022
ಬಿಜೆಪಿ ಹಾಗೂ ಅದರ ಕಾರ್ಯಕರ್ತರು ದೇಶದಲ್ಲಿ ಕೋಮು ಪರಿಸ್ಥಿತಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಾವು ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಸೌಹಾರ್ದತೆಯನ್ನು ಮೂಡಿಸುವ ವಾತಾವರಣವನ್ನು ಸೃಷ್ಟಿಸುವ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದೇವೆ ಎಂದರು. ಇದನ್ನೂ ಓದಿ: 2016ರಲ್ಲಿ ಡಿಕೆಶಿ ನಿಂದಿಸಿದ್ದ ಬೆಳ್ಳಾರೆಯ ಗಿರಿಧರ ರೈಗೆ 2 ವರ್ಷ ಜೈಲು
ಮಧ್ಯಪ್ರದೇಶ, ಗುಜರಾತ್ ಮತ್ತು ಜಾರ್ಖಂಡ್‍ನಂತಹ ರಾಜ್ಯಗಳು ರಾಮನವಮಿ ಸಂದರ್ಭದಲ್ಲಿ ಹಿಂಸಾಚಾರ ನಡೆದಿತ್ತು. ಆದರೆ ಶನಿವಾರ ದೆಹಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಹನುಮ ಜಯಂತಿ ಮೆರವಣಿಗೆಯ ಸಂದರ್ಭದಲ್ಲಿ ಘರ್ಷಣೆಗಳು ನಡೆದವು. ಇದರಲ್ಲಿ 9 ಪೊಲೀಸರು ಮತ್ತು ನಾಗರಿಕರು ಗಾಯಗೊಂಡಿದ್ದರು.