ಬೆಂಗಳೂರು: ರಾಜ್ಯದ ಮದರಸಾಗಳ ಶಿಕ್ಷಣದ ಚಟುವಟಿಕೆಗಳ ಮೇಲೆ ನಿಗಾವಹಿಸಲು ಸರ್ಕಾರ ಮುಂದಾಗಿದೆ. ಮದರಸಾಗಳ ಶಿಕ್ಷಣ ವ್ಯವಸ್ಥೆಗಾಗಿ ವಿಶೇಷ ಮಂಡಳಿ ರಚನೆಗೆ ನಿರ್ಧರಿಸಲಾಗಿದೆ.
ಬುಧವಾರ ಶಿಕ್ಷಣ ಸಚಿವ ನಾಗೇಶ್ ನೇತೃತ್ವದಲ್ಲಿ ಸಭೆ ನಡೆದಿದ್ದು, ಸಂಪೂರ್ಣ ಮದರಸಗಳ ಮಾಹಿತಿ ಪಡೆಯಲು ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ರಾಜ್ಯದ ಮದರಸಾಗಳ ಕುರಿತು 15 ದಿನಗಳಲ್ಲಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಅಧಿಕಾರಿಗಳ ವರದಿ ಬಳಿಕ ಮುಂದಿನ ತೀರ್ಮಾನ ಮಾಡಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ.
Advertisement
ಮದರಸಾ ಶಿಕ್ಷಣದ ಬಗ್ಗೆ ಕರ್ನಾಟಕ ದಲ್ಲಿ ದೊಡ್ಡ ಮಟ್ಟದಲ್ಲಿ ಹಿಂದೂಸಂಘಟನೆಗಳು ಕೆಲ ಕಮಲ ನಾಯಕರು ಸಿಡಿದೆದ್ದಿದ್ದರು. ಮದರಸಾದಲ್ಲಿ ಭಯೋತ್ಪಾದನೆಯ ಪಾಠ ಹೇಳಲಾಗುತ್ತಿದೆ. ಇಸ್ಲಾಂ ಮೂಲಭೂತವಾದ ಕಲಿಸಿಕೊಡಲಾಗುತ್ತದೆ. ಅಂಕುಶ ಹಾಕಿ ಇಲ್ಲವೇ ಬ್ಯಾನ್ ಮಾಡಿ ಎನ್ನುವ ಕೂಗು ದೊಡ್ಡದಾಗಿ ಕೇಳಿಬಂದಿತ್ತು. ಬಿಜೆಪಿ ಮುಖಂಡ ಸಿಟಿ ರವಿ ಟ್ವೀಟ್ ಮಾಡಿ ಮದರಸಾ ಶಿಕ್ಷಣದ ಬಗ್ಗೆ ಬಹಿರಂಗ ಆಕ್ಷೇಪ ವ್ಯಕ್ತಪಡಿಸಿದರು.
Advertisement
Advertisement
ಮಂಡಳಿ ರಚನೆಗೆ ಕಾರಣ ಏನು?
ಕರ್ನಾಟಕದಲ್ಲಿ 900 ಮದರಸಾಗಳು ವಕ್ಫ್ ಬೋರ್ಡ್ ಅಡಿ ನೋಂದಣಿಯಾಗಿದ್ದು ಪ್ರತಿ ವರ್ಷ 10 ಲಕ್ಷ ರೂ. ಅನುದಾನ ನೀಡಲಾಗುತ್ತಿದೆ. ಈ ಅನುದಾನ ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ. ಮದರಸಾಗಳಲ್ಲಿ ಶಿಕ್ಷಣದ ಬದಲಾಗಿ ಧರ್ಮ ಬೋಧನೆಯ ಕೆಲಸ ಆಗುತ್ತಿದೆ ಎಂಬ ಆರೋಪ ಬಂದಿದೆ.
Advertisement
ಅಷ್ಟೇ ಅಲ್ಲದೇ ರಾಷ್ಟ್ರಗೀತೆ, ರಾಷ್ಟ್ರ ಭಾವೈಕ್ಯತೆಯ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಮದರಸಾಗಳಲ್ಲಿ ಕಲಿಯೋ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಕಂಪ್ಯೂಟರ್ ತರಬೇತಿ, ವಿಜ್ಞಾನದ ಲ್ಯಾಬ್ ಗಳು, ನೈತಿಕ ಶಿಕ್ಷಣದಂತಹ ಶೈಕ್ಷಣಿಕ ಚಟುವಟಿಕೆಗಳು ಸರಿಯಾಗಿ ನಡೆಯುತ್ತಿಲ್ಲ ಎಂಬ ಆರೋಪ ಹಿನ್ನೆಲೆಯಲ್ಲಿ ಮಂಡಳಿ ರಚನೆಗೆ ಸರ್ಕಾರ ಮುಂದಾಗಿದೆ.
.
ಸಮಿತಿ ಕೆಲಸ ಏನು?
ಮದರಸಾಗಳಲ್ಲಿ ಯಾವ ರೀತಿಯ ಶಿಕ್ಷಣ ನೀಡಲಾಗುತ್ತಿದೆ? ಸರ್ಕಾರದ ಅನುದಾನದ ಸಮರ್ಪಕ ಬಳಕೆ , ಶಿಕ್ಷಣ ಹಕ್ಕು ಕಾಯ್ದೆಯಡಿ ಮಕ್ಕಳಿಗೆ ಶಿಕ್ಷಣ ಸಿಗುತ್ತಿದ್ಯಾ? ಮದರಸಗಳಲ್ಲಿ ಧರ್ಮ ಬೋಧನೆ ಆರೋಪದ ಬಗ್ಗೆ ವರದಿ ಸಂಗ್ರಹಿಸಬೇಕು.
ಪಠ್ಯಗಳ ಸಿಲಬಸ್ ಹೇಗಿದೆ? ಈ ಮಕ್ಕಳ ಕಲಿಕೆಗೂ ಬೇರೆ ಮಕ್ಕಳ ಕಲಿಕೆಗೂ ಇರುವ ವ್ಯತ್ಯಾಸ, ಸರ್ಕಾರದ ಅನುದಾನ ಹೊರತು ಪಡಿಸಿ ಖಾಸಗಿಯಾಗಿ ನಡೆಯುತ್ತಿರೋ ಮದರಸಾಗಳ ಕಾರ್ಯಚಟುವಟಿಕೆಗಳು ಏನು? ಖಾಸಗಿ ಮದರಸಾಗಳ ಅನುದಾನ ಮೂಲ ಏನು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಬೇಕು. ರಾಷ್ಟ್ರೀಯ ಭಾವೈಕ್ಯತೆ ಕಾರ್ಯಕ್ರಮಗಳು, ಮೂಲಭೂತ ಕರ್ತವ್ಯಗಳ ಪಾಲನೆ ಆಗ್ತಿದೆಯಾ ಎಂಬ ವರದಿ ಸಂಗ್ರಹಿಸಬೇಕು.
ಉತ್ತರ ಪ್ರದೇಶದಲ್ಲಿ ಹೇಗಿದೆ?
ಮುಸ್ಲಿಂ ಧಾರ್ಮಿಕ ಶಿಕ್ಷಣ ಕೇಂದ್ರಗಳ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಏಕೆ ಉತ್ತರ ಪ್ರದೇಶ ಮಾದರಿಯನ್ನೇ ಅನುಸರಿಸುತ್ತಿದೆ. ಮದರಸಾಗಳ ಮೇಲಿನ ನಿಯಂತ್ರಣಕ್ಕೂ ಏಕೆ ಯುಪಿ ಮಾಡೆಲ್ ಮೊರೆ ಹೋಗುತ್ತಿದೆ.
ಉತ್ತರ ಪ್ರದೇಶದಲ್ಲಿ ಶಿಕ್ಷಕರು ಬಿ.ಎಡ್ ಪದವಿ ಜೊತೆಗೆ ಟಿಇಟಿ ಪರೀಕ್ಷೆ ಉತ್ತೀರ್ಣ ಕಡ್ಡಾಯ. ಮದರಸಾಗಳಲ್ಲಿ ಪೂರ್ಣ ಪ್ರಮಾಣದಲ್ಲಿ ನೀಡುತ್ತಿರುವ ಧಾರ್ಮಿಕ ಶಿಕ್ಷಣಕ್ಕೆ ಕಡಿವಾಣ. ಶೇ.20 ಮಾತ್ರ ಧಾರ್ಮಿಕ ಶಿಕ್ಷಣ, ಶೇ.80ರಷ್ಟು ಹೊಸ ಶಿಕ್ಷಣ ನೀಡಬೇಕಾಗುತ್ತದೆ. ಇದನ್ನೂ ಓದಿ: ಭಯೋತ್ಪಾದಕ ಚಟುವಟಿಕೆ ಆತಂಕ – ಹೊರಗಿನಿಂದ ಬರುವ ಮಸೀದಿ, ಮದರಸಾ ಧರ್ಮಗುರುಗಳಿಗೆ ಅಸ್ಸಾಂನಲ್ಲಿ ಹೊಸ ನಿಯಮ
ಧಾರ್ಮಿಕ ಬೋಧನೆ ಜೊತೆ ಎನ್‌ಸಿಇಆರ್‌ಟಿ(NCERT) ರೂಪಿಸಿದ ಹಿಂದಿ, ಇಂಗ್ಲಿಷ್, ವಿಜ್ಞಾನ, ಗಣಿತ ಸೇರಿ ಇತರೇ ವಿಷಯಗಳನ್ನು ಬೋಧಿಸಬೇಕಾಗುತ್ತದೆ. ಆಧುನಿಕ ಶಿಕ್ಷಣ ಪದ್ಧತಿಯ ಪ್ರಕಾರ ಕಂಪ್ಯೂಟರ್ ಶಿಕ್ಷಣ ನೀಡುವುದು.
ಶಿಕ್ಷಣ ಇಲಾಖೆಯ ಮೇಲುಸ್ತುವಾರಿಯಲ್ಲಿ ಪಠ್ಯಕ್ರಮ ರಚನೆಯಾಗುತ್ತದೆ. ಆಲಿಯಾ ಮಟ್ಟದ ಮದರಸಗಳಲ್ಲಿ ಒಬ್ಬ ಶಿಕ್ಷಕರು, 5ನೇ ತರಗತಿಯಲ್ಲಿ ನಾಲ್ವರು ಶಿಕ್ಷಕರು, 6-8ನೇ ತರಗತಿಗೆ ಇಬ್ಬರು ಶಿಕ್ಷಕರು, 9-10ನೇ ತರಗತಿಗೆ ಆಧುನಿಕ ಶಿಕ್ಷಣವನ್ನು ಕಲಿಸಲು ಮೂವರು ಶಿಕ್ಷಕರ ನೇಮಕ ಮಾಡಲಾಗುತ್ತದೆ. ರಾಷ್ಟ್ರಗೀತೆಯನ್ನು ಪ್ರತಿನಿತ್ಯ ಹಾಡುವುದು ಕಡ್ಡಾಯ. ಅನಧಿಕೃತ ಮದರಸಗಳನ್ನು ಮುಚ್ಚಲಾಗುತ್ತದೆ.