ಮುಂಬೈ: ಹಿರಿಯ ಎನ್‍ಸಿಸಿ ಕೆಡೆಟ್ ಒಬ್ಬ ತರಬೇತಿ ಕೊಡುವ ನೆಪದಲ್ಲಿ 8 ಮಂದಿ ಜ್ಯೂನಿಯರ್ ಗಳಿಗೆ ಮನಬಂದಂತೆ ಥಳಿಸಿದ ಘಟನೆಯೊಂದು ಥಾಣೆಯ ಬಂಡೋಡ್ಕರ್ ಕಾಲೇಜಿನಲ್ಲಿ (Bandodkar College) ನಡೆದಿದೆ.
ಎನ್‍ಸಿಸಿ ಕೆಡೆಟ್ (NCC Cadet) ಯುವಕರಿಗೆ ಥಳಿಸುತ್ತಿರುವ ವೀಡಿಯೋವನ್ನು ಕಾಲೇಜಿನ ವಿದ್ಯಾರ್ಥಿಯೊಬ್ಬ ತನ್ನ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿದೆ. ತರಬೇತಿ ವೇಳೆ ತಾನು ಹೇಳಿ ಕೊಟ್ಟಿದ್ದನ್ನು ಜ್ಯೂನಿಯರ್ ಗಳು ಸರಿಯಾಗಿ ಮಾಡಲಿಲ್ಲ ಎಂಬ ಕಾರಣಕ್ಕೆ ಅವರಿಗೆ ಇಂತಹ ಶಿಕ್ಷೆ ನೀಡಿದ್ದಾನೆ ಎನ್ನಲಾಗುತ್ತಿದೆ.
Advertisement
Advertisement
ವೀಡಿಯೋದಲ್ಲಿ ಏನಿದೆ..?: ಸೀನಿಯರ್ ಎನ್‍ಸಿಸಿ ಕೆಡೆಟ್ ಒಬ್ಬ ತನ್ನ 8 ಮಂದಿ ಜ್ಯೂನಿಯರ್ ಗಳನ್ನು ಮಳೆ ನೀರಿನ ನಡುವೆ ಪುಷ್ ಅಪ್ ಪೊಸಿಷನ್‍ನಲ್ಲಿ ಇರುವಂತೆ ಹೇಳುತ್ತಾನೆ. ಬಳಿಕ ಅವರ ಮೇಲೆ ದೊಣ್ಣೆಯ ಮುಖಾಂತರ ಮನಬಂದಂತೆ ಹಲ್ಲೆ ನಡೆಸಲು ಶುರು ಮಾಡುತ್ತಾನೆ. ಈ ವೇಳೆ ಅವರು ನೋವಿನಿಂದ ಕಿರುಚಾಡಿದರೂ ಸೀನಿಯರ್ ಬಿಡದೆ ದೈಹಿಕ ಹಿಂಸೆ ನೀಡಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
Advertisement
ही कसली एनसीसी ट्रेनिंग, ही तर क्रूरता…!
मुख्यमंत्र्यांच्या ठाण्यात NCC कॅडेट्सवर हा असला अन्याय होत असेल तर मुख्यमंत्री साहेब बाकी जनतेनं काय करावं.#ncc #ncccadet #thane #eknathshinde #chiefminister #maharashtra pic.twitter.com/8iWykLRI4V
— Bhavana Ghanekar (@BhavanaGhanekar) August 3, 2023
Advertisement
ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಕೆಲವರು ಘಟನೆಯನ್ನು ಖಂಡಿಸಿದ್ದಾರೆ. ತರಬೇತಿ ಹೆಸರಲ್ಲಿ ಈ ರೀತಿ ಮಾಡುವುದು ಶಿಕ್ಷಾರ್ಹ ಎಂದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಈ ಸಂಬಂಧ ಬಂದೋಡ್ಕರ್ ಕಾಲೇಜಿನ ಪ್ರಾಂಶುಪಾಲೆ ಸುಚಿತ್ರಾ ನಾಯ್ಕ್ ಪ್ರತಿಕ್ರಿಯಿಸಿ, ಇಂತಹ ವರ್ತನೆಯನ್ನು ನಾವು ಹಾಗೂ ಕಾಲೇಜಿನ ಆಡಳಿತ ಮಂಡಳಿ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಕಳೆದ 40 ವರ್ಷಗಳಿಂದ ನಮ್ಮ ಕಾಲೇಜಿನಲ್ಲಿ ಎನ್‍ಸಿಸಿ ತರಬೇತಿ ಕೊಡಲಾಗುತ್ತಿದ್ದು, ಶಿಕ್ಷಕರ ಅನುಪಸ್ಥಿತಿಯಲ್ಲಿ ಈ ಘಟನೆ ನಡೆದಿದೆ. ಹಲ್ಲೆ ಮಾಡಿರುವ ಎನ್‍ಸಿಸಿ ವಿದ್ಯಾರ್ಥಿ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳುವ ಮೂಲಕ ಘಟನೆಯನ್ನು ಖಂಡಿಸಿದ್ದಾರೆ.
Web Stories