ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದಂತೆ ಡ್ರಗ್ಸ್ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ನೆರೆ ಮನೆಯಾತನನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಅವರ ನೆರೆಯ ಮನೆಯ ಸಾಹಿಲ್ ಶಾ ಅಲಿಯಾಸ್ ಫ್ಲಾಕೊ ಅವರನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಎನ್‌ಸಿಬಿ ಮೂಲಗಳ ಪ್ರಕಾರ ಆರೋಪಿ ಸಾಹಿಲ್ ಸ್ವತಃ ಅಧಿಕಾರಿಗಳ ಮುಂದೆ ಶರಣಾಗಿದ್ದಾನೆ. ಇದನ್ನೂ ಓದಿ: ಅಮ್ಮನ ಜನ್ಮದಿನ – ಕ್ವಾರಂಟೈನ್‍ನಲ್ಲಿರುವ ಚಿರು ಭಾವುಕ
Advertisement
Advertisement
ಸುಶಾಂತ್ ಸಿಂಗ್ ಅವರ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ತನ್ನ ಹೆಸರು ಕೇಳಿ ಬಂದ ಬಳಿಕ 9 ತಿಂಗಳ ಹಿಂದೆ ಫ್ಲಾಕೊ ತಲೆಮರೆಸಿಕೊಂಡಿದ್ದ. ಇದೀಗ ತಾನೇ ಅಧಿಕಾರಿಗಳ ಮುಂದೆ ಶರಣಾಗಿರುವ ಸಾಹಿಲ್‌ನನ್ನು ಎನ್‌ಸಿಬಿ ಬಂಧಿಸಿದೆ. ಇದನ್ನೂ ಓದಿ: ಪೆಗಾಸಸ್ ಖರೀದಿಸಿ ಮೋದಿ ಸರ್ಕಾರ ದೇಶದ್ರೋಹ ಮಾಡಿದೆ: ರಾಹುಲ್ ಗಾಂಧಿ
Advertisement
Advertisement
ಸುಶಾಂತ್ ಸಾವಿಗೂ ಮೊದಲು ಮುಂಬೈನ ಮಲಾಡ್ ಪ್ರದೇಶದಲ್ಲಿ ವಾಸವಿದ್ದರು. ಆರೋಪಿ ಸಾಹಿಲ್ ಸುಶಾಂತ್‌ನ ನೆರೆಮನೆಯವನಾಗಿದ್ದ. ಫ್ಲಾಕೋ ಹಲವಾರು ಡ್ರಗ್ಸ್ ಫೆಡ್ಲರ್‌ಗಳೊಂದಿಗೆ ಸಂಪರ್ಕ ಹೊಂದಿದ್ದು, ಸುಶಾಂತ್ ಸೇರಿದಂತೆ ಬಾಲಿವುಡ್‌ನ ಪ್ರಸಿದ್ಧ ವ್ಯಕ್ತಿಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಎಂಬುದಾಗಿ ತಿಳಿದುಬಂದಿದೆ.