ನವದೆಹಲಿ: ಎನ್‌ಸಿಎಇಆರ್‌ನ (NCAER) ಮಹಾನಿರ್ದೇಶಕಿ, ಆರ್ಥಿಕ ತಜ್ಞೆ ಹಾಗೂ ಪ್ರಧಾನ ಮಂತ್ರಿಯ ಆರ್ಥಿಕ ಸಲಹಾ ಮಂಡಳಿಯ ಮಾಜಿ ಸದಸ್ಯೆ ಪೂನಮ್ ಗುಪ್ತಾ (Poonam Gupta) ಮೂರು ವರ್ಷಗಳ ಅವಧಿಗೆ ಆರ್‌ಬಿಐನ (RBI) ಡೆಪ್ಯೂಟಿ ಗವರ್ನರ್ ಆಗಿ ನೇಮಕಗೊಂಡಿದ್ದಾರೆ.
ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕನಾಮಿಕ್ ರಿಸರ್ಚ್‌ಗೆ ಸೇರುವ ಮೊದಲು, ಗುಪ್ತಾ ಅವರು ಅಂತರರಾಷ್ಟ್ರೀಯ ಹಣಕಾಸು ನಿಗಮದಲ್ಲಿ ಜಾಗತಿಕ ಮ್ಯಾಕ್ರೋ ಮತ್ತು ಮಾರುಕಟ್ಟೆ ಸಂಶೋಧನೆಯ ಪ್ರಮುಖ ಅರ್ಥಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸಿದರು. ಈ ಹಿಂದೆ ಭಾರತೀಯ ಅಂತರರಾಷ್ಟ್ರೀಯ ಆರ್ಥಿಕ ಸಂಬಂಧಗಳ ಸಂಶೋಧನಾ ಮಂಡಳಿಯಲ್ಲಿ ಮತ್ತು ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಪ್ರಾಧ್ಯಾಪಕರಾಗಿದ್ದರು. ಅಲ್ಲದೇ ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ (IMF) ಸಂಶೋಧಕರೂ ಆಗಿದ್ದರು. ಇದನ್ನೂ ಓದಿ: ಉಕ್ರೇನ್ ಮಹಿಳೆಯರನ್ನ ರೇಪ್ ಮಾಡುವಂತೆ ಒತ್ತಾಯಿಸುತ್ತಿದ್ದ ರಷ್ಯಾ ಸೈನಿಕನ ಪತ್ನಿಗೆ ಕಠಿಣ ಜೈಲು ಶಿಕ್ಷೆ
ಪೂನಮ್ 16ನೇ ಹಣಕಾಸು ಆಯೋಗದ ಸಲಹಾ ಮಂಡಳಿಯ ಸದಸ್ಯರೂ ಹೌದು. ಇತ್ತೀಚಿಗೆ ಆರ್‌ಬಿಐನ ಡೆಪ್ಯೂಟಿ ಗವರ್ನರ್ ಹುದ್ದೆಯಿಂದ ನಿವೃತ್ತಿ ಹೊಂದಿದ ಎಂ.ಬಿ.ಪಾತ್ರಾ ಅವರ ಹುದ್ದೆಯನ್ನು ಪೂನಮ್ ಗುಪ್ತಾ ಅಲಕಂರಿಸಲಿದ್ದಾರೆ. ಇದನ್ನೂ ಓದಿ: ರಾಜ್ಯ ಗುಪ್ತವಾರ್ತೆ ನಿರ್ದೇಶಕ ಹೇಮಂತ್ ನಿಂಬಾಳ್ಕರ್‌ಗೆ ಮುಖ್ಯಮಂತ್ರಿಗಳ ಸ್ವರ್ಣಪದಕ ಪ್ರದಾನ
ಶೈಕ್ಷಣಿಕ ಹಿನ್ನೆಲೆ:
ಅರ್ಥಶಾಸ್ತ್ರದಲ್ಲಿ ಪಿಎಚ್‌ಡಿ – ಮೇರಿಲ್ಯಾಂಡ್ ವಿಶ್ವವಿದ್ಯಾಲಯ, ಕಾಲೇಜ್ ಪಾರ್ಕ್ (1998)
ವಿಶೇಷತೆ: ಸ್ಥೂಲ ಅರ್ಥಶಾಸ್ತ್ರ, ಅಂತರರಾಷ್ಟ್ರೀಯ ಹಣಕಾಸು ಮತ್ತು ಅಂತರರಾಷ್ಟ್ರೀಯ ವ್ಯಾಪಾರ
ಅರ್ಥಶಾಸ್ತ್ರದಲ್ಲಿ ಎಂ.ಎ – ಮೇರಿಲ್ಯಾಂಡ್ ವಿಶ್ವವಿದ್ಯಾಲಯ, ಕಾಲೇಜ್ ಪಾರ್ಕ್ (1995)
ಅರ್ಥಶಾಸ್ತ್ರದಲ್ಲಿ ಎಂ.ಎ – ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ (1991)
ಅರ್ಥಶಾಸ್ತ್ರದಲ್ಲಿ ಬಿ.ಎ – ಹಿಂದೂ ಕಾಲೇಜು, ದೆಹಲಿ ವಿಶ್ವವಿದ್ಯಾಲಯ (1989)
ಅಂತರರಾಷ್ಟ್ರೀಯ ಅರ್ಥಶಾಸ್ತ್ರ ಪಿಎಚ್‌ಡಿಯಲ್ಲಿ ಪೂನಮ್ ಗುಪ್ತ 1998ರ ಎಕ್ಸಿಮ್ ಬ್ಯಾಂಕ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದನ್ನೂ ಓದಿ: Waqf Debate |ವರ್ಷಕ್ಕೆ 12 ಸಾವಿರ ಕೋಟಿ ಆದಾಯ ಸಿಗ್ಬೇಕು, ಆದ್ರೆ ಸಿಕ್ಕಿದ್ದು 166 ಕೋಟಿ: ಕಾಂಗ್ರೆಸ್ ವಿರುದ್ಧ ರಿಜಿಜು ಕಿಡಿ