LatestMain PostNationalSports

ಭಾರತಕ್ಕೆ ಆಧ್ಯಾತ್ಮಿಕ ಪ್ರಯಾಣ – ಪ್ರಧಾನಿ ಮೋದಿಯನ್ನು ಹೊಗಳಿದ ಡ್ವಿಟ್ ಹೊವಾರ್ಡ್

ಲಕ್ನೋ: ಆಧ್ಯಾತ್ಮಿಕ ಪ್ರಯಾಣಕ್ಕಾಗಿ ವಾರಣಾಸಿಗೆ ಭೇಟಿ ನೀಡಿದ ಬಾಸ್ಕೆಟ್ ಬಾಲ್ ಸ್ಟಾರ್ ಆಟಗಾರ ಡ್ವಿಟ್ ಹೊವಾರ್ಡ್, ಪವಿತ್ರ ನಗರವನ್ನು ಸುಧಾರಿಸಿದ್ದಕ್ಕಾಗಿ ಪ್ರಧಾನಿ ಮೋದಿಯನ್ನು ಶ್ಲಾಘಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಅವರು, ವಾರಣಾಸಿಗೆ ಭೇಟಿ ನೀಡಿದ ಬಳಿಕ ನನ್ನಲ್ಲಿ ಶಾಂತಿ ನೆಲೆಸಿದೆ. ಆತ್ಮವನ್ನು ಪುನರುಜ್ಜೀವನಗೊಳಿಸಿದ ಆಧ್ಯಾತ್ಮಿಕ ಪ್ರಯಾಣ ಇದಾಗಿದೆ. ಪವಿತ್ರ ನಗರವನ್ನು ಸುಧಾರಿಸಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಅಭಿನಂದನೆಗಳು. ವಾರಣಾಸಿಯು ಅನೇಕ ದಂತಕಥೆಗಳಿಗೆ ಸ್ಫೂರ್ತಿ ನೀಡಿದೆ. ನಾನು ವಾರಣಾಸಿಗೆ ಕೃತಜ್ಞನಾಗಿದ್ದೇನೆ. ಈ ಪವಿತ್ರ ನಗರದ ಪುನರ್ಜನ್ಮವು ಇನ್ನೂ ಅನೇಕರನ್ನು ಪ್ರೇರೇಪಿಸುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ಸಾಲುಗಳನ್ನು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಬಡ ಮುಸ್ಲಿಮರ ಮೇಲೆ ಬಿಜೆಪಿ ಸಮರ ಸಾರಿದೆ: ಓವೈಸಿ ಕಿಡಿ

ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆಯು ಬಾಸ್ಕೆಟ್‍ಬಾಲ್ ಆಟಗಾರ ಭೇಟಿ ನೀಡಿರುವುದನ್ನು ನಿನ್ನೆ ಖಚಿತಪಡಿಸಿದೆ. ಅವರು ನಿನ್ನೆ ಗಂಗಾ ನದಿ ಆರತಿಗೆ ಸಾಕ್ಷಿಯಾದರು. ಆಧ್ಯಾತ್ಮಿಕತೆ ಮತ್ತು ಸಂಸ್ಕೃತಿಯ ಈ ಪ್ರಾಚೀನ ನಗರಕ್ಕೆ ಭೇಟಿ ನೀಡಿದ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ ಎಂದು ಇಲಾಖೆ ಟ್ವೀಟ್ ಮಾಡಿದೆ. ಇದನ್ನೂ ಓದಿ: ಪರೀಕ್ಷೆಗೆ ಹಿಜಬ್ ಧರಿಸಿ ಬಂದ ಡಿಗ್ರಿ ವಿದ್ಯಾರ್ಥಿನಿಗೆ ಅನುಮತಿ ನಿರಾಕರಣೆ

ಹೊವಾರ್ಡ್ (36) ಪ್ರಸ್ತುತ ಉತ್ತರ ಅಮೆರಿಕಾದ ವೃತ್ತಿಪರ ಬ್ಯಾಸ್ಕೆಟ್‍ಬಾಲ್ ಲೀಗ್ ರಾಷ್ಟ್ರೀಯ ಬಾಸ್ಕೆಟ್‍ಬಾಲ್ ಅಸೋಸಿಯೇಷನ್ ಎನ್‍ಬಿಎನಲ್ಲಿ ಲಾಸ್ ಏಂಜಲೀಸ್ ಲೇಕರ್ಸ್‍ನ ಸೆಂಟರ್-ಫಾರ್ವರ್ಡ್ ಆಗಿ ಆಡುತ್ತಿದ್ದಾರೆ.

Leave a Reply

Your email address will not be published.

Back to top button