‘ಟಾಕ್ಸಿಕ್’ ಶೂಟಿಂಗ್ ನಡುವೆ ಬೆಂಗಳೂರಿನಲ್ಲಿ ‘ದಿ ಗೋಟ್’ ಸಿನಿಮಾ ವೀಕ್ಷಿಸಿದ ನಯನತಾರಾ

Public TV
1 Min Read
nayanthara

ಶ್ (Yash) ನಟನೆಯ ‘ಟಾಕ್ಸಿಕ್’ (Toxic) ಸಿನಿಮಾದ ಶೂಟಿಂಗ್‌ಗೆ ಬ್ರೇಕ್ ಸಿಕ್ಕ ಬೆನ್ನಲ್ಲೇ ‘ದಿ ಗೋಟ್’ ಚಿತ್ರವನ್ನು ಬೆಂಗಳೂರಿನಲ್ಲಿ ನಯನತಾರಾ (Nayanthara) ವೀಕ್ಷಿಸಿದ್ದಾರೆ. ಪತಿ ವಿಘ್ನೇಶ್ ಶಿವನ್ ಜೊತೆ ನಟಿ ಸಿನಿಮಾ ನೋಡ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಇದೀಗ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಚಿತ್ರರಂಗಕ್ಕೆ ಕಾಲಿಟ್ಟ ದುನಿಯಾ ವಿಜಯ್ 2ನೇ ಪುತ್ರಿ ಮೋನಿಷಾ

nayanthara

ಯಶ್‌ ಜೊತೆಗಿನ ಸಿನಿಮಾಗಾಗಿ ನಯನತಾರಾ ಈಗಾಗಲೇ ಬೆಂಗಳೂರಿಗೆ ಬಂದಿಳಿದಿದ್ದಾರೆ. ಹೆಚ್‌ಎಂಟಿ ಗ್ರೌಂಡ್‌ನಲ್ಲಿ ಕಳೆದ 4 ದಿನಗಳ ಕಾಲ ‘ಟಾಕ್ಸಿಕ್’ ಶೂಟಿಂಗ್ ಕೂಡ ನಡೆದಿದೆ. ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಸಿಕ್ಕ ಬೆನ್ನಲ್ಲೇ ನಿನ್ನೆ (ಸೆ.5) ಮಾಲ್‌ವೊಂದರಲ್ಲಿ ವಿಜಯ್ ನಟನೆಯ ‘ದಿ ಗೋಟ್’ (The Goat) ಚಿತ್ರ ನೋಡಿ ಎಂಜಾಯ್ ಮಾಡಿದ್ದಾರೆ. ಪತಿ ಜೊತೆ ಕೈಹಿಡಿದು ನಟಿ ಮಾಲ್‌ಗೆ ಎಂಟ್ರಿ ಕೊಟ್ಟಿರುವ ವಿಡಿಯೋ ಈಗ ಪ್ರೇಕ್ಷಕರ ಗಮನ ಸೆಳೆದಿದೆ.

ಅಂದಹಾಗೆ, ಬೆಂಗಳೂರಿನ ಹೆಚ್‌ಎಂಟಿ ಗ್ರೌಂಡ್‌ನಲ್ಲಿ ಹಾಕಲಾದ ಬೃಹತ್ ಸೆಟ್‌ನಲ್ಲಿ ‘ಟಾಕ್ಸಿಕ್’ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಸದ್ಯ ಪ್ಯಾಲೇಸ್ ಗ್ರೌಂಡ್‌ನಲ್ಲಿ ಸಾಹಸ ಸನ್ನಿವೇಶ ಚಿತ್ರೀಕರಣ ಮಾಡಲಾಗುತ್ತಿದೆ. ಮೊದಲ ಹಂತವಾಗಿ ಒಂದು ಬಿಗ್ ಶೆಡ್ಯೂಲ್‌ನಲ್ಲಿ ಚಿತ್ರೀಕರಣ ಸಾಗುತ್ತಿದೆ. ಇದು ಬೆಂಗಳೂರಲ್ಲೇ ಬಹುತೇಕ ನಡೆಯುವ ಶೂಟಿಂಗ್ ಆಗಿರೋದ್ರಿಂದ ಚಿತ್ರದಲ್ಲಿರುವ ನಟ ನಟಿಯರನ್ನ ಯಶ್ ಇಲ್ಲಿಗೇ ಕರೆಸಿಕೊಳ್ಳುತ್ತಿದ್ದಾರೆ. ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ‘ಆಲ್ ಯು ನೀಡ್ ಕಾನ್ಫಿಡೆನ್ಸ್ & ಬೂಟ್ಸ್’ ಎಂಬ ಸಂದೇಶ ಬರೆದು ಶೂಟಿಂಗ್‌ನಲ್ಲಿ ಕುಳಿತಿರುವಂತೆ ಕಾಲಿನ ಫೋಟೋ ಪೋಸ್ಟ್ ಮಾಡಿದ್ದರು. ‘ಟಾಕ್ಸಿಕ್’ ಚಿತ್ರತಂಡ ನಟಿಯ ಇರುವಿಕೆಯನ್ನ ಇದುವರೆಗೂ ಚಿತ್ರತಂಡ ಅಧಿಕೃತವಾಗಿ ಘೊಷಿಸಿಲ್ಲವಾದರೂ ನಯನತಾರ ನಟಿಸುತ್ತಿರುವ ಸಂಗತಿಯಂತೂ ನಿಜ.

Share This Article