ಬಾರ್ಸಿಲೋನದಲ್ಲಿ ನಯನತಾರಾ- ವಿಘ್ನೇಶ್ ಶಿವನ್ ದಂಪತಿ

Public TV
1 Min Read
nayantara

ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ವಿಘ್ನೇಶ್ ಶಿವನ್ ದಂಪತಿ ಸ್ಪೇನ್‌ನ ಬಾರ್ಸಿಲೋನಗೆ ಹಾರಿದ್ದಾರೆ. ಬಾರ್ಸಿಲೋನದ ಬೀದಿ ಬೀದಿಗಳಲ್ಲಿ ನಯನತಾರಾ ದಂಪತಿ ಖುಷಿಯಿಂದ ಕಾಲ ಕಳೆಯುತ್ತಿದ್ದಾರೆ. ಈ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ನಯನತಾರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟು 2 ತಿಂಗಳು ಕಳೆದಿದೆ. ಸಿನಿಮಾಗಳ ಜೊತೆಗೆ ವೈಯಕ್ತಿಕ ಜೀವನದತ್ತ ಗಮನ ನೀಡುತ್ತಿರುವ ನಯನತಾರಾ ಸದ್ಯ ಪತಿಯ ಜತೆ ಸ್ಪೇನ್‌ಗೆ ಹಾರಿದ್ದಾರೆ. ಬಾರ್ಸಿಲೋನದ ಸುಂದರ ಪ್ರದೇಶಗಳಿಗೆ ನಯನತಾರಾ ದಂಪತಿ ಸುತ್ತಾಡುತ್ತಿದ್ದಾರೆ. ಇದನ್ನೂ ಓದಿ:ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

ಈ ವರ್ಷ ಜೂನ್ 9ರಂದು ಗುರು ಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಹನಿಮೂನ್‌ಗಾಗಿ ಥೈಲ್ಯಾಂಡ್‌ಗೆ ಹಾರಿದ್ದರು. ಬಳಿಕ ಶಾರುಖ್ ಖಾನ್ ನಟನೆಯ `ಜವಾನ್’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಈಗ ಬಾರ್ಸಿಲೋನದಲ್ಲಿ ನಯನತಾರಾ ದಂಪತಿ ಪ್ರವಾಸವನ್ನ ಏಂಜಾಯ್ ಮಾಡ್ತಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *