ಕಾಲಿವುಡ್‌ನ ಲೇಡಿ ಸೂಪರ್ ಸ್ಟಾರ್ ನಯನತಾರಾ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗ ಶಾರುಖ್ ಖಾನ್‌ಗೆ ನಾಯಕಿಯಾಗಿ ಬಾಲಿವುಡ್‌ಗೆ ನಯನತಾರಾ ಪಾದಾರ್ಪಣೆ ಮಾಡುತ್ತಿರುವ ಬೆನ್ನಲ್ಲೇ ಮತ್ತೊಂದು ಹೊಸ ಪ್ರಾಜೆಕ್ಟ್ ಅನೌನ್ಸ್ ಆಗಿದೆ. ತಮ್ಮ 75ನೇ ಸಿನಿಮಾದ ಅಪ್‌ಡೇಟ್ ಮೂಲಕ ನಯನತಾರಾ ಸುದ್ದಿಯಲ್ಲಿದ್ದಾರೆ.
2003ರಲ್ಲಿ ಮಾಲಿವುಡ್‌ನ `ಮನಸ್ಸಿನಕ್ಕರೆ’ ಚಿತ್ರದ ಮೂಲಕ ಪರಿಚಿತರಾದ ನಟಿ ನಯನತಾರಾ ಬಹುಭಾಷಾ ನಟಿಯಾಗಿ ಸೂಪರ್ ಸ್ಟಾರ್‌ಗಳ ಜತೆ ತೆರೆಹಂಚಿಕೊಂಡರು. ನಾಯಕಿಯಾಗಿ ಮಾತ್ರವಲ್ಲ, ಮಹಿಳಾ ಪ್ರಧಾನ ಪಾತ್ರಗಳ ಮೂಲಕ ಲೇಡಿ ಸೂಪರ್ ಸ್ಟಾರ್ ಆಗಿ ಮಿಂಚಿದ್ರು. ಇದೀಗ ಬಾಲಿವುಡ್‌ಗೆ ಪಾದಾರ್ಪಣೆ ಮಾಡ್ತಿರುವ ಗುಡ್ ನ್ಯೂಸ್ ಬೆನ್ನಲ್ಲೇ ತಮ್ಮ 75ನೇ ಚಿತ್ರದ ಅನೌನ್ಸ್‌ಮೆಂಟ್ ಮೂಲಕ ಸೌಂಡ್ ಮಾಡ್ತಿದ್ದಾರೆ. ಇದನ್ನೂ ಓದಿ:ಆಗಸ್ಟ್ ಮೂರನೇ ವಾರದಲ್ಲಿ ರವಿಚಂದ್ರನ್ ಪುತ್ರನ ಮದುವೆ: ಹಸೆಮಣೆ ಏರಲು ಮನೋರಂಜನ್ ಸಿದ್ಧತೆ

The much awaited update is here #Nayanthara75 https://t.co/xXuv9DGk6L@ZeeStudios_ @tridentartsoffl #Sathyaraj @Actor_Jai @DoneChannel1#zeestudios #tridentarts #NaadStudios #LadySuperStar75 pic.twitter.com/zKgGKEKqKi
— Ramesh Bala (@rameshlaus) July 12, 2022
ಎಂದೂ ಮಾಡಿರದ ವಿಭಿನ್ನ ಪಾತ್ರದಲ್ಲಿ ನಯನತಾರಾ ಕಾಣಿಸಿಕೊಳ್ಳುತ್ತಿದ್ದು, ಸದ್ಯದಲ್ಲೇ ಶೂಟಿಂಗ್ ಶುರುವಾಗಲಿದೆ. ರಿಲೀಸ್ ಬಳಿಕ ಸಿನಿಮಾ ಯಾವ ರೀತಿ ಮೋಡಿ ಮಾಡಬಹುದು ಅಂತಾ ಕಾದು ನೋಡಬೇಕಿದೆ.


