ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾಗೆ ಇಂದು (ನ.18) ಹುಟ್ಟುಹಬ್ಬದ ಸಂಭ್ರಮ. ಹಾಗಾಗಿ ಅಭಿಮಾನಿಗಳಿಗೆ ಹೊಸ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ‘ರಕ್ಕಯಿ’ (Rakkayie) ಆಗಿ ಕತ್ತಿ ಹಿಡಿದು ಅಖಾಡಕ್ಕೆ ಇಳಿದಿದ್ದಾರೆ. ನಯನತಾರಾ ನಟನೆಯ ರಕ್ಕಯಿ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಇದನ್ನೂ ಓದಿ:BBK 11: ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಶೋಭಾ ಶೆಟ್ಟಿ, ರಜತ್ ಬುಜ್ಜಿ
‘ರಕ್ಕಯಿ’ ಸಿನಿಮಾದ ಟೈಟಲ್ ಟೀಸರ್ ಅನ್ನು ಅನಾವರಣ ಮಾಡಲಾಗಿದೆ. ಅಳುವ ಮಗುವನ್ನು ಸಂತೈಸುವ ತಾಯಿಯಾಗಿ, ದುಷ್ಟರಿಗೆ ಸೆದೆಬಡೆಯುವ ಗಟ್ಟಿಗಿತ್ತಿಯಾಗಿ ನಯನತಾರಾ ಕಾಣಿಸಿಕೊಂಡಿದ್ದಾರೆ. ಅಳುವ ಮಗುವನ್ನು ಸಂತೈಸುವ ತಾಯಿಯಾಗಿ, ದುಷ್ಟರ ಮುಂದೆ ನಟಿ ಉಗ್ರಾವತಾರ ತಾಳಿದ್ದಾರೆ.
View this post on Instagram
ಕತ್ತಿಯನ್ನು ಹಿಡಿದು ತನ್ನ ಮಗುವಿನ ತಂಟೆಗೆ ಬರುವ ದುಷ್ಟರ ಗುಂಪನ್ನು ಸಂಹಾರ ಮಾಡುವ ರೌದ್ರವತಾರಾ ತಾಳಿದ್ದಾರೆ ನಟಿ. ಇದೊಂದು ತಾಯಿ ಸೆಂಟಿಮೆಂಟ್ ಇರುವ ಮಾಸ್ ಸಿನಿಮಾ ಆಗಿದೆ.
ಇನ್ನೂ ನಯನತಾರಾ ಮದುವೆ ಸಾಕ್ಷ್ಯಚಿತ್ರದಲ್ಲಿ 3 ಸೆಕೆಂಡ್ ವಿಡಿಯೋದಲ್ಲಿ ಧನುಷ್ ನಿರ್ಮಾಣ ಮಾಡಿದ್ದ ‘ನಾನೂ ರೌಡಿ ಧಾನ್’ ಚಿತ್ರದ ತುಣುಕು ಬಳಸಿದಕ್ಕೆ ಧನುಷ್ ಲೀಗಲ್ ನೋಟಿಸ್ ಕಳುಹಿಸಿದ್ದರು. ನಯನತಾರಾ ಮತ್ತು ಧನುಷ್ ಕಾಂಟ್ರವರ್ಸಿ ನಡುವೆ ಈಗ ರಕ್ಕಯಿ ಸಿನಿಮಾದಲ್ಲಿ ನಟಿ ಉಗ್ರವತಾರಾ ತಾಳಿರೋದು ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.