Bengaluru CityCinemaLatestMain PostSouth cinema

ಅಭಿಮಾನಿಗಳಿಗೆ ಶಾಕಿಂಗ್‌ ನ್ಯೂಸ್‌ ಕೊಟ್ರು ನಯನತಾರಾ

ಮಿಳು ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ನಯನತಾರಾ, ನಟನೆಗೆ ಗುಡ್ ಬೈ ಹೇಳಲಿದ್ದಾರೆ ಎಂಬ ಸುದ್ದಿ ಕಾಲಿವುಡ್ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಮದುವೆಯ ಬಳಿಕ ನಟನೆಯ ಜತೆ ವೈಯಕ್ತಿಕ ಜೀವನಕ್ಕೂ ಸಮಯ ಕೊಡುತ್ತಿರುವ ನಯನತಾರಾ, ಇನ್ಮುಂದೆ ಫುಲ್ ಟೈಮ್ ಖಾಸಗಿ ಜೀವನದತ್ತ ಗಮನ ಕೊಡಲು ನಟಿ ನಿರ್ಧರಿಸಿದ್ದಾರಂತೆ.

ಸೌತ್‌ನ ಸಾಕಷ್ಟು ಸಿನಿಮಾಗಳ ಮೂಲಕ ಲೇಡಿ ಸೂಪರ್ ಸ್ಟಾರ್ ಅಭಿಮಾನಿಗಳ ಮನದಲ್ಲಿ ಗಟ್ಟಿ ನೆಲೆ ಗಟ್ಟಿಸಿಕೊಂಡವರು ನಯನತಾರಾ, ಇತ್ತೀಚೆಗಷ್ಟೇ ನಿರ್ದೇಶಕ ವಿಘ್ನೇಶ್ ಶಿವನ್ ಜತೆ ಹಸೆಮಣೆ ಏರಿದ್ದರು. ಬಳಿಕ ನಟನೆ ಮಾಡುತ್ತಲೇ ಪತಿಯ ಜತೆ ಫಾರಿನ್ ಪ್ರವಾಸದಲ್ಲಿ ಬ್ಯುಸಿಯಾದರು. ಇದೀಗ ನಯನತಾರಾ ನಟನೆಗೆ ಗುಡ್ ಬೈ ಹೇಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ತಮ್ಮ ಮದುವೆಗೂ ಮುಂಚೆ ಒಪ್ಪಿಕೊಂಡ ಚಿತ್ರಗಳನ್ನ ಮುಗಿಸಿದ ಬಳಿಕ ಚಿತ್ರರಂಗಕ್ಕೆ ಸಂಪೂರ್ಣವಾಗಿ ನಟಿ ಗುಡ್ ಬೈ ಹೇಳಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಸದ್ಯ ಈ ಸುದ್ದಿ ಕೇಳಿ, ನಯನತಾರಾ ಫ್ಯಾನ್ಸ್ ಶಾಕ್ ಆಗಿದ್ದಾರೆ. ಇದನ್ನೂ ಓದಿ:ಜನಾರ್ದನ್ ರೆಡ್ಡಿ ಮಗನ ಸಿನಿಮಾ ಸೆಟ್ ಗೆ ಶಿವರಾಜ್ ಕುಮಾರ್ ಸರ್ಪ್ರೈಸ್ ವಿಸಿಟ್

ಇನ್ನೂ ನಟಿಯ ಕೈಯಲ್ಲಿ ಶಾರುಖ್ ಖಾನ್ ಜತೆ `ಜವಾನ್’, ಪೃಥ್ವಿರಾಜ್ ಜತೆ `ಗೋಲ್ಡ್’, ಚಿರಂಜೀವಿ ಜತೆಯಲಿ `ಗಾಡ್ ಫಾದರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಎಲ್ಲಾ ಪ್ರಾಜೆಕ್ಟ್ ಪೂರ್ಣಗೊಂಡ ಮೇಲೆ ನಯನತಾರಾ, ನಟನೆಗೆ ಫುಲ್ ಸ್ಟಾಪ್ ಇಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಯನತಾರಾ ನಟಿಸುತ್ತಾರಾ ಅಥವಾ ಬಣ್ಣದ ಲೋಕಕ್ಕೆ ಬೈ ಹೇಳುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

Live Tv

Leave a Reply

Your email address will not be published.

Back to top button